ರಾಜ್ಯದಲ್ಲಿ ರಸಗೊಬ್ಬರ ಕೃತಕ ಅಭಾವ ಸೃಷ್ಟಿ

klr bjp press meet
ಕೋಲಾರದ ಬಿಜೆಪಿ ಕಚೇರಿಯಲ್ಲಿ ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಬಿಜೆಪಿ ರೈತ ಮೋರ್ಚಾ ಜಿಲ್ಲಾಧ್ಯಕ್ಷ ಆನಂದ ರೆಡ್ಡಿ ಮಾತನಾಡಿದರು. ಕೆಂಬೋಡಿ ನಾರಾಯಣಸ್ವಾಮಿ, ಹನುಮೇಗೌಡ, ಶ್ರೀಧರ್​, ನಾಗರಾಜ್​ ಇದ್ದರು.
Published on

ಕೋಲಾರ: ಕಾಂಗ್ರೆಸ್​ ಸರ್ಕಾರದ ರ್ನಿಲಕ್ಷ$್ಯದಿಂದ ರಾಜ್ಯದಲ್ಲಿ ಮುಂಗಾರು ಹಂಗಾಮಿನಲ್ಲಿ ರಸಗೊಬ್ಬರ ಅಭಾವ ಸೃಷ್ಟಿಯಾಗಿದೆ ಎಂದು ಬಿಜೆಪಿ ರೈತ ಮೋರ್ಚಾ ಜಿಲ್ಲಾಧ್ಯಕ್ಷ ಆನಂದರೆಡ್ಡಿ ಆರೋಪಿಸಿದರು.

ನಗರದ ಬಿಜೆಪಿ ಕಚೇರಿಯಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಕೇಂದ್ರದಿಂದ ಅಗತ್ಯಕ್ಕೆ ತಕ್ಕಂತೆ ರಾಜ್ಯಕ್ಕೆ ಡಿಎಪಿ, ಯೂರಿಯಾ ಸರಬರಾಜು ಮಾಡಲಾಗಿದೆ. ಆದರೂ ಕೃತಕ ಅಭಾವ ಸೃಷ್ಟಿಸಿದೆ ಎಂದು ದೂರಿದರು.

ಬಿತ್ತನೆ ಸಂದರ್ಭದಲ್ಲಿ ರೈತರಿಗೆ ಅಗತ್ಯರಾಸಾಯಾನಿಕ ಗೊಬ್ಬರವನ್ನು ಬೇಡಿಕೆಗಿಂತ ಹೆಚ್ಚುವರಿಯಾಗಿ ಕೇಂದ್ರ ಸರ್ಕಾರ ರಾಜ್ಯಕ್ಕೆ ಪೂರೈಕೆ ಮಾಡಿದ್ದರೂ ಉದ್ದೇಶಪೂರ್ವಕವಾಗಿಯೇ ಸಮರ್ಪಕ ವಿತರಣೆ ಮಾಡುತ್ತಿಲ್ಲ ಎಂದರು.

ರಾಜ್ಯ ಸರ್ಕಾರವು 6.30 ಸಾವಿರ ಮೆಟ್ರಿಕ್​ ಟನ್​ ರಸಗೊಬ್ಬರದ ಬೇಡಿಕೆಯನ್ನು ಎರಡು ತಿಂಗಳ ಮೊದಲೇ ಕೇಂದ್ರ ಸರ್ಕಾರಕ್ಕೆ ಬೇಡಿಕೆ ಸಲ್ಲಿಸಿತ್ತು. ಹೆಚ್ಚುವರಿ ರಸಗೊಬ್ಬರ ಪೂರೈಕೆ ಮಾಡಿದೆ ಎಂದು ತಿಳಿಸಿದರು.

ರಾಜ್ಯ ಸರ್ಕಾರವು ಬಿತ್ತನೆ ಬೀಜ, ಗೊಬ್ಬರ, ವಿದ್ಯುತ್​, ಮಾರುಕಟ್ಟೆ, ಬೆಂಬಲ ಬೆಲೆ ಸೇರಿ ಯಾವುದೇ ಸೌಲಭ್ಯ ಕಲ್ಪಿಸುತ್ತಿಲ್ಲ. ರೈತರ ಮಕ್ಕಳ ಶಿಕ್ಷಣಕ್ಕೆ ಮತ್ತು ರೈತರ ಬೆಳೆಗಳಿಗೆ ನೀಡುವ ಪ್ರೋತ್ಸಾಹಧನ, ಕಿಸಾನ್​ ಸಮ್ಮಾನ್​ ಯೋಜನೆ ಸೇರಿ ಎಲ್ಲ ಸೌಲಭ್ಯಗಳನ್ನು ನಿಲ್ಲಿಸಿದೆ ಎಂದು ಆರೋಪಿಸಿದರು.

ಜಿಲ್ಲಾ ಉಪಾಧ್ಯಕ್ಷ ನಾರಾಯಣಸ್ವಾಮಿ ಮಾತನಾಡಿ, ರಾಸಾಯನಿಕ ಗೊಬ್ಬರಗಳನ್ನು ಬೆಳಗಾವಿ ಮತ್ತು ಹಾವೇರಿಯಲ್ಲಿ ದಾಸ್ತಾನು ಮಾಡಿಕೊಂಡು ಕಾಳಸಂತೆಯಲ್ಲಿ ಮಾರಾಟ ಮಾಡಲಾಗುತ್ತಿದೆ. ರಾಜ್ಯದಲ್ಲಿ ಕೃಷಿ ಸಚಿವರು ಇದ್ದಾರೋ ಇಲ್ಲವೋ ತಿಳಿಯದಂತಾಗಿದೆ, ಸಾಮಾಜಿಕ ಜಾಲತಾಣದಲ್ಲಿ ಮಾತ್ರ ಅಷ್ಟಿದೆ, ಇಷ್ಟಿದೆ ಎಂದು ಪ್ರಚಾರ ಗಿಟ್ಟಿಸಿಕೊಳ್ಳುತ್ತಿದ್ದಾರೆ ಎಂದರು.

ಜಿಲ್ಲೆಯಲ್ಲಿ ಡ್ರಾಗ್ಸ್​ ಗಾಂಜಾ ಮುಂತಾದ ಮಾದಕ ವಸ್ತುಗಳು ವ್ಯಾಪಕವಾಗಿದೆ. ಮದ್ಯದ ಅಂಗಡಿಗಳು 24 ಗಂಟೆಗಳು ಸೇವೆ ಸಲ್ಲಿಸುತ್ತಿದೆ ಅವುಗಳಿಗೆ ಅಬಕಾರಿ ನಿಯಮಗಳು ಯಾವುದಕ್ಕೂ ಸಂಬಂಧವೇ ಇಲ್ಲದಂತೆ ಬೆಳಿಗ್ಗೆ 4.30ರಿಂದ ಮಳಿಗೆ ತೆರೆಯುತ್ತಾರೆ. ಕೇಂದ್ರದ ಯೋಜನೆಗಳಿಗೆ ಭೂಮಿಪೂಜೆ ಮಾಡುತ್ತಿದ್ದಾರೇ ಹೊರತಾಗಿ ರಾಜ್ಯಸರ್ಕಾರದಿಂದ ಕನಿಷ್ಠ 10 ಕೋಟಿ ರೂ. ಸಹ ತಂದಿಲ್ಲ ಎಂದು ದೂರಿದರು.

ಬಿಜೆಪಿ ಮುಖಂಡ ಶ್ಯಾಗತ್ತೂರು ನಾರಾಯಣಸ್ವಾಮಿ ಮಾತನಾಡಿ, ಶ್ರೀನಿವಾಸಪುರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಎರಡು ಕಡೆ ಕೈಗಾರಿಕ ವಲಯಕ್ಕೆ ಜಾಗ ಗುರುತಿಸಲಾಗಿದೆ. ಅದರೆ ಪಟ್ಟ ಭದ್ರ ಹಿತಸಕ್ತರು ಇದಕ್ಕೆ ಅಡ್ಡಿಪಡಿಸಲು ಕುತಂತ್ರ ಮಾಡುತ್ತಿದ್ದಾರೆ. ಕೆಲವು ರಿಯಲ್​ ಎಸ್ಟೆಟ್​ ಮಾಫಿಯಗಳ ಕೈವಾಡದಿಂದ ಅಭಿವೃದ್ಧಿಗೆ ಅಡ್ಡಗಾಲು ಹಾಕುತ್ತಿದ್ದಾರೆ ಎಂದು ಆರೋಪಿಸಿದರು.

ಬಿಜೆಪಿ ಜಿಲ್ಲಾ ಸಂಚಾಲಕ ಕೆಂಬೋಡಿ ನಾರಾಯಣಸ್ವಾಮಿ, ರೈತ ಮೋರ್ಚಾ ಪ್ರಧಾನ ಕಾರ್ಯದರ್ಶಿ ಹನುಮೇಗೌಡ, ಕಾರ್ಯದರ್ಶಿ ಶ್ರೀಧರ್​, ನಾಗರಾಜ್​, ಚಂದ್ರಶೇಖರ್​, ಮುಳಬಾಗಿಲು ಲಕ್ಷಿ$್ಮನಾರಾಯಣ, ಮುಖಂಡ ಓಹೀಲೇಶ್​ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net