ಪ್ರಭಾಸ್​ ಕುರಿತ ಹೇಳಿಕೆಗೆ ಟಾಲಿವುಡ್​ ಕಿಡಿ; CINETAA ಅಧ್ಯಕ್ಷೆಗೆ ಪತ್ರ ಬರೆದ ಖ್ಯಾತ ನಟ ಆಗ್ರಹಿಸಿದ್ದಿಷ್ಟು

Untitled-design-2024-08-23T153811.984
Published on

ಹೈದರಾಬಾದ್​: ಕಲ್ಕಿ 2898 ಎಡಿ ಸಿನಿಮಾದಲ್ಲಿದ ಪ್ರಭಾಸ್​ ಜೋಕರ್​ನಂತೆ ಕಾಣುತ್ತಾರೆ ಎಂದು ಬಾಲಿವುಡ್​ ನಟ ಅರ್ಷದ್ ​ವಾರ್ಸಿ ನೀಡಿರುವ ಹೇಳಿಕೆಯ ವಿವಾದವು ಸದ್ಯಕ್ಕೆ ನಿಲ್ಲುವಂತೆ ಕಾಣುತ್ತಿಲ್ಲ. ಅರ್ಷದ್​ ಹೇಳಿಕೆ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗುತ್ತಿದ್ದಂತೆ ಅಭಿಮಾನಿಗಳು ಆಕ್ರೋಶ ಹೊರಹಾಕಿ ಕ್ಷಮೆಯಾಚಿಸಬೇಕು ಎಂದು ಆಗ್ರಹಿಸಿದ್ದರು. ನಿರ್ಮಾಪಕರು, ನಟರು ಕೂಡ ಪ್ರಭಾಸ್​​ ಪರ ಬ್ಯಾಟಿಂಗ್​ ಮಾಡಿ ಅರ್ಷದ್​ ಕಾಮೆಂಟ್​ ಅನ್ನು ಟೀಕಿಸಿದರು.

ಈ ವಿಚಾರಕ್ಕೆ ಸಂಬಂಧಿಸಿದ್ದಂತೆ ನಟ ಸುಧೀರ್​ ಬಾಬು, ನ್ಯಾಚ್ಯುರಲ್​ ಸ್ಟಾರ್​ ನಾನಿ ಪ್ರತಿಕ್ರಿಯಿಸಿದ್ದರು. ಇದೀಗ MAA(ಚಲನಚಿತ್ರ ಕಲಾವಿದರ ಸಂಘ) ಪರವಾಗಿ ನಟ ವಿಷ್ಣು, ಕಿರುತೆರೆ ಕಲಾವಿದರ ಸಂಘದ ಅಧ್ಯಕ್ಷೆ ನಟಿ ಪೂನಂ ಧಿಲ್ಲೋನ್​​ ಅವರಿಗೆ ಪತ್ರ ಬರೆದಿದ್ದಾರೆ. ಪ್ರತಿಯೊಬ್ಬ ವ್ಯಕ್ತಿಗೂ ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸುವ ಹಕ್ಕಿದೆ, ನಾವು ಅದನ್ನು ಗೌರವಿಸುತ್ತೇವೆ. ಆದರೆ ಪ್ರಭಾಸ್​​ ಬಗ್ಗೆ ಅರ್ಷದ್​ ವಾರ್ಲಿ ಹಗುರವಾಗಿ ಮಾತನಾಡಿದ್ದಾರೆ. ತೆಲುಗು ಚಿತ್ರರಂಗದ ಖ್ಯಾತಿಯನ್ನು ಜಾಗತಿಕಮಟ್ಟಕ್ಕೆ ಕೊಂಡೊಯ್ದ ಪ್ರಭಾಸ್​ ಬಗೆಗಿನ ಈ ಕಾಮೆಂಟ್​ ತೆಲುಗು ಚಿತ್ರರಂಗದ ಹಲವರಿಗೆ ಹಾಗೂ ಅಭಿಮಾನಿಗಳ ಭಾವನೆಗಳಿಗೆ ಧಕ್ಕೆ ತಂದಿದೆ. ಯಾರೊಬ್ಬರ ಬಗ್ಗೆಯೂ ಈ ರೀತಿ ಮಾತನಾಡುವುದು ಸರಿಯಲ್ಲ ಎಂದು ಪತ್ರದಲ್ಲಿ ತಿಳಿಸಿದ್ದಾರೆ.

ಇಂಡಸ್ಟ್ರಿಯಲ್ಲಿ ಪ್ರತಿಯೊಬ್ಬರ ಗೌರವವನ್ನು ಕಾಪಾಡುವ ಜವಾಬ್ದಾರಿ ಪ್ರತಿಯೊಬ್ಬರ ಮೇಲಿದೆ. ನಾವೆಲ್ಲರೂ ಸಿನಿಮಾ ಕುಟುಂಬಕ್ಕೆ ಸೇರಿದವರು. ಪ್ರಸ್ತುತ ಡಿಜಿಟಲ್​​​ಯುಗದಲ್ಲಿ ಏನೇ ಹೇಳಿದರು ಕ್ಷಣಮಾತ್ರದಲ್ಲಿ ಎಲ್ಲರಿಗೂ ತಿಳಿಯುತ್ತದೆ. ಸೆಲೆಬ್ರಿಟಿಗಳಾಗಿ ನಮ್ಮ ಭಾವನೆಗಳನ್ನು ವ್ಯಕ್ತಪಡಿಸುವಲ್ಲಿ ಎಚ್ಚರಿಕೆ ವಹಿಸುವುದು ಬಹಳ ಮುಖ್ಯ. ಭವಿಷ್ಯದಲ್ಲಿ ಇಂತಹ ಪ್ರಮಾದ ನಡೆಯದಂತೆ ನೋಡಿಕೊಳ್ಳಬೇಕು ಎಂದು ಪತ್ರದಲ್ಲಿ ತಿಳಿಸಿದ್ದಾರೆ. ಆ ಪತ್ರವನ್ನು ಮಂಚು ವಿಷ್ಣು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.

ಇತ್ತೀಚಿನ ಸಂದರ್ಶನವೊಂದರಲ್ಲಿ ಅರ್ಷದ್​, ನನಗೆ ಇಷ್ಟವಾಗದ ಕಲ್ಕಿ ಸಿನಿಮಾವನ್ನು ನಾನು ನೋಡಿದೆ. ಸಿನಿಮಾದಲ್ಲಿ ಅಮಿತ್​ ಜೀ ಅವರ ನಟನೆ ಅದ್ಭುತವಾಗಿದೆ. ಅವರಲ್ಲಿರುವ ಶಕ್ತಿಯಲ್ಲಿ ಸ್ವಲ್ಪವಾದರೂ ನಮಗೆ ಸಿಕ್ಕಿದರೆ ಜೀವನವು ಉತ್ತಮವಾಗಿರುತ್ತದೆ. ಆದರೆ ಪ್ರಭಾಸ್​​ ನಟನೆಯನ್ನು ನೋಡಿ ನನಗೆ ನಿಜವಾಗಿಯೂ ಬೇಜರಾಗಿದೆ. ಪ್ರಭಾಸ್​ ಜೋಕರ್​ನಂತೆ ಕಾಣುತ್ತಿದ್ದಾರೆ. ನಾನು ಮ್ಯಾಡ್​ಮ್ಯಾಕ್ಸ್​​​, ಗಿಬ್ಸನ್​​​ ಅವರಂತೆ ನೋಡಲು ಇಷ್ಟಪಡುತ್ತೇನೆ. ಅವರು ಏಕೆ ಹೀಗೆ ನಟಿಸಿದ್ದಾರೆ ಎಂದು ನನಗೆ ಅರ್ಥವಾಗುತಿಲ್ಲ ಎಂದು ಹೇಳಿದ್ದಾರೆ.(ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net