

ಶಿಕಾರಿಪುರ: ಸೋದೆ ಮಠದ ಶ್ರೀ ವಿಶ್ವವಲ್ಲಭ ತೀರ್ಥರು ಡಿ.22ರಂದು ದ್ವಿತೀಯ ಮೃತ್ತಿಕಾ ವೃಂದಾವನ ಎಂದೇ ಖ್ಯಾತಿಯಾದ ಉಡುಗಣಿಯ ಶ್ರೀ ರಾಘವೇಂದ್ರ ಸ್ವಾಮಿ ಮಠಕ್ಕೆ ಆಗಮಿಸಲಿದ್ದಾರೆ. ಅಂದು ಸಂಜೆ 5ಕ್ಕೆ ಸ್ವಾಮಿಗಳ ಪುರಪ್ರವೇಶ, ಸಂಜೆ 7ಕ್ಕೆ ಭೂತರಾಜರ ಪೂಜೆ ಮತ್ತು ತೊಟ್ಟಿಲುಸೇವೆ ಇರುತ್ತದೆ. 23ರ ಬೆಳಗ್ಗೆ 8ರಿಂದ 9ರವರೆಗೆ ಶ್ರೀಗಳ ಪಾದಪೂಜೆ, ಗುರುಗಳಿಗೆ ಲಪಂಚಾಮೃತ ನಂತರ ಸಂಸ್ಥಾನ ಪೂಜೆ, ಹಸ್ತೋದಕ ಮಹಾಮಂಗಳಾರತಿ ತೀರ್ಥಪ್ರಸಾದ ವಿನಿಯೋಗ ಇರುತ್ತದೆ. ಉಡುಗಣಿ ಮಠದ ಕಲ್ಲಿನ ಗರ್ಭಗುಡಿಗೆ ನಿರ್ಮಿಸಿರುವ ಹಿತ್ತಾಳೆ ಕವಚವನ್ನು ಸೋದೆ ಮಠದ ಶ್ರೀಗಳು ಲೋಕಾರ್ಪಣೆ ಮಾಡುವರು ಎಂದು ಉಡುಗಣಿ ಶ್ರೀ ಗುರುರಾಜ ಸೇವಾ ಸಮಿತಿ ಪ್ರಕಟಣೆಯಲ್ಲಿ ತಿಳಿಸಿದೆ.