ಮನೆ ಕೆಲಸದಾಕೆ ಸೆರೆ

WhatsApp Image 2024-09-13 at 10.59.56 AM
Published on

ಬೆಂಗಳೂರು: ಇಂಜಿನಿಯರ್ ಮನೆಯಲ್ಲಿ ಚಿನ್ನಾಭರಣ ಕಳವು ಮಾಡಿದ್ದ ಕೆಲಸದಾಕೆಯನ್ನು ವೈಟ್‌ಫೀಲ್ಡ್ ಪೊಲೀಸರು ಬಂಧಿಸಿದ್ದಾರೆ.

ಬಿಹಾರ ಮೂಲದ ಪಿಂಕಿ ದೇವಿ (30) ಬಂಧಿತೆ. 570 ಗ್ರಾಂ ಚಿನ್ನಾಭರಣ, 470 ಗ್ರಾಂ ಬೆಳ್ಳಿ, 13 ಗ್ರಾಂ ಡೈಮಂಡ್ ಜಪ್ತಿ ಮಾಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ವೈಟ್‌ಫೀಲ್ಡ್‌ನಲ್ಲಿ ನೆಲೆಸಿರುವ ಇಂಜಿನಿಯರ್ ಅಶೀತಾ ಬಿದ್ದಪ್ಪ ಮಲ್ಲೋರಾ ಎಂಬುವರ ಮನೆಯಲ್ಲಿ ಪಿಂಕಿ ದೇವಿ ಮನೆ ಕೆಲಸಕ್ಕೆ ಸೇರಿಕೊಂಡು ಮಾಲೀಕರ ವಿಶ್ವಾಸ ಗಳಿಸಿದ್ದಳು.

ಮನೆಯಲ್ಲಿ ಯಾರು ಇಲ್ಲದ ಸಮಯದಲ್ಲಿ ಮಾಸ್ಟರ್ ಬೆಡ್‌ರೂಮ್‌ನಲ್ಲಿ ಚಿನ್ನಾಭರಣ ಕಳವು ಮಾಡಿದ್ದಳು. ಅಶೀತಾ ಈ ಬಗ್ಗೆ ವೈಟ್‌ಫೀಲ್ಡ್ ಠಾಣೆಗೆ ದೂರು ಸಲ್ಲಿಸಿದ್ದರು. ತನಿಖೆ ಕೈಗೊಂಡ ಇನ್‌ಸ್ಪೆಕ್ಟರ್ ಗುರುಪ್ರಸಾದ್ ಮತ್ತು ಪಿಎಸ್‌ಐ ನಾಗರಾಜ್ ನೇತೃತ್ವದ ತಂಡ, ಐದು ತಾಸಿನಲ್ಲಿ ಆರೋಪಿಯನ್ನು ಬಂಧಿಸಿ ಕದ್ದ ವಸ್ತುಗಳನ್ನು ಜಪ್ತಿ ಮಾಡಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net