ಒಂದೇ ಒಂದು ಇನ್​ಸ್ಟಾ ಸ್ಟೋರಿ... ನಟಿ ಓವಿಯಾ ವಿರುದ್ಧ ತಿರುಗಿಬಿದ್ದ ವಿಜಯ್​ ಅಭಿಮಾನಿಗಳು! Actress Oviya

Actress Oviya
Published on

Actress Oviya : ಕರೂರಿನಲ್ಲಿ ತಮಿಳಗ ವೆಟ್ರಿ ಕಳಗಂ (ಟಿವಿಕೆ) ಆಯೋಜಿಸಿದ್ದ ರ್ಯಾಲಿಯಲ್ಲಿ ನಡೆದ ಕಾಲ್ತುಳಿತಕ್ಕೆ ಸಂಬಂಧಿಸಿದಂತೆ ನಟಿ ಓವಿಯಾ, ನಟ ಮತ್ತು ನಾಯಕ ವಿಜಯ್ ಅವರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಈ ದುರಂತದಲ್ಲಿ 40 ಜನರು ಮೃತಪಟ್ಟಿದ್ದು, ವಿಜಯ್ ಬಂಧನಕ್ಕೆ ಒತ್ತಾಯಿಸಿ ಓವಿಯಾ ತಮ್ಮ ಇನ್​ಸ್ಟಾಗ್ರಾಂನಲ್ಲಿ ಒಂದು ಸ್ಟೋರಿ ಹಂಚಿಕೊಂಡಿದ್ದರು. 'ಅರೆಸ್ಟ್ ವಿಜಯ್' ಎಂದು ಬರೆಯುವ ಮೂಲಕ ಪ್ರತಿಕ್ರಿಯಿಸಿದರು. ಆದಾಗ್ಯೂ, ಕೆಲವೇ ಗಂಟೆಗಳಲ್ಲಿ, ನಟಿ ಆ ಕಥೆಯನ್ನು ಅಳಿಸಿಹಾಕಿದರು.

ಮೊದಲ ಸ್ಟೋರಿ ಹಾಕಿ ಡಿಲೀಟ್​ ಮಾಡಿದ ಬಳಿಕ ದುರಂತಕ್ಕೆ ಪ್ರತಿಕ್ರಿಯೆಯಾಗಿ ಓವಿಯಾ ಅವರು ಮತ್ತೊಂದು ಸ್ಟೋರಿ ಹಂಚಿಕೊಂಡಿದ್ದಾರೆ. ಅದರಲ್ಲಿ "ಜೀವನ ಅನ್ನೋದು ಬುದ್ಧಿವಂತರಿಗೆ ಒಂದು ಕನಸು, ಮೂರ್ಖರಿಗೆ ಒಂದು ಆಟ, ಶ್ರೀಮಂತರಿಗೆ ಇದು ತಮಾಷೆ ಆದರೆ, ಬಡವರಿಗೆ ಇದು ದುರಂತ ಎಂದು ಬರೆದಿರುವ ಫೋಟೋವೊಂದನ್ನು ಶೇರ್​ ಮಾಡಿದ್ದಾರೆ.

ಯಾವಾಗ, ಓವಿಯಾ ಅವರು ಈ ಸ್ಟೋರಿ ಹಂಚಿಕೊಂಡರೋ ವಿಜಯ್ ಅವರ ಅಭಿಮಾನಿಗಳು ಓವಿಯಾ ವಿರುದ್ಧ ಭಾರಿ ಸೈಬರ್ ದಾಳಿ ನಡೆಸುತ್ತಿದ್ದಾರೆ. ಕೆಟ್ಟ ಕೆಟ್ಟ ಕಾಮೆಂಟ್​ಗಳನ್ನು ಮಾಡುತ್ತಿದ್ದಾರೆ. ಇದನ್ನು ಗಮನಿಸಿರುವ ಓವಿಯಾ, ಕೆಟ್ಟ ಕಾಮೆಂಟ್‌ಗಳ ಸ್ಕ್ರೀನ್‌ಶಾಟ್‌ಗಳನ್ನು ಸಹ ಇನ್​ಸ್ಟಾ ಸ್ಟೋರಿಯಲ್ಲಿ ಹಂಚಿಕೊಂಡಿದ್ದಾರೆ.

Actress Oviya

ಇದನ್ನು ಈ ದುರಂತದಲ್ಲಿ ಮೃತಪಟ್ಟವರಿಗೆ ತಲಾ 20 ಲಕ್ಷ ರೂಪಾಯಿಗಳ ಆರ್ಥಿಕ ನೆರವು ನೀಡುವುದಾಗಿ ಟಿವಿಕೆ ಭರವಸೆ ನೀಡಿದೆ. ಇಂದು ಆನ್‌ಲೈನ್‌ನಲ್ಲಿ ನಾಯಕರ ತುರ್ತು ಸಭೆ ನಡೆದ ನಂತರ ಈ ನಿರ್ಣಾಯಕ ನಿರ್ಧಾರ ತೆಗೆದುಕೊಳ್ಳಲಾಗಿದೆ. ಅಧಿಕೃತ ವರದಿಯ ಪ್ರಕಾರ, ಈವರೆಗೆ 39 ಜನರು ದುರಂತದಲ್ಲಿ ಸಾವಿಗೀಡಾಗಿದ್ದಾರೆ. ಈ ಪೈಕಿ 17 ಮಹಿಳೆಯರು, ನಾಲ್ವರು ಬಾಲಕರು ಮತ್ತು ಐದು ಬಾಲಕಿಯರು ಸೇರಿದ್ದಾರೆ.

ಇಲ್ಲಿಯವರೆಗೆ 35 ಜನರ ಶವಗಳನ್ನು ಗುರುತಿಸಲಾಗಿದೆ. ಅವರಲ್ಲಿ 28 ಮಂದಿ ಕರೂರಿನವರು ಎಂದು ವರದಿಯಾಗಿದೆ. ಆದಾಗ್ಯೂ, ಕಾರ್ಯಕ್ರಮದ ಸಮಯದಲ್ಲಿ ಘರ್ಷಣೆ ನಡೆದ ಬೆನ್ನಲ್ಲೇ ನಟ ಹಾಗೂ ಟಿವಿಕೆ ನಾಯಕ ವಿಜಯ್ ಅಲ್ಲಿಂದ ಹೊರಟು ಹೋಗಿದ್ದು ಭಾರಿ ವಿವಾದಕ್ಕೆ ಕಾರಣವಾಗಿದೆ.

ಇನ್ನು ಕೇಂದ್ರ ಗೃಹ ಸಚಿವಾಲಯವು ಕೂಡ ಈ ಘಟನೆಗೆ ತೀವ್ರವಾಗಿ ಪ್ರತಿಕ್ರಿಯಿಸಿದೆ. ದುರಂತಕ್ಕೆ ಕಾರಣವಾದ ಸಂದರ್ಭಗಳು ಮತ್ತು ರಕ್ಷಣಾ ಕಾರ್ಯಾಚರಣೆಗಳ ಕುರಿತು ಸಂಪೂರ್ಣ ವಿವರಗಳೊಂದಿಗೆ ವರದಿಯನ್ನು ತಕ್ಷಣವೇ ಸಲ್ಲಿಸುವಂತೆ ತಮಿಳುನಾಡು ಸರ್ಕಾರಕ್ಕೆ ಆದೇಶಿಸಿದೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net