ಅಧಿಕಾರಿಯನ್ನು ನಿಂದಿಸಿದವನನ್ನು ಬಂಧಿಸಿ

strike
ಭದ್ರಾವತಿಯಲ್ಲಿ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿ ಜ್ಯೋತಿ ಅವರನ್ನು ನಿಂದಿಸಿದ ಆರೋಪಿಯನ್ನು ಬಂಧಿಸಬೇಕು ಎಂದು ಆಗ್ರಹಿಸಿ ಮಾಸ್ತಿಕಟ್ಟೆ ಗ್ರಾಪಂ ಆಡಳಿತಕ್ಕೆ ಮನವಿ ಸಲ್ಲಿಸಲಾಯಿತು. ಕೆ.ಬಿ.ಕೃಷ್ಣಮೂರ್ತಿ, ಪ್ರಕಾಶ್ ಗೌಡ, ರಂಜಿತಾ, ವೀಣಾ ಇತರರಿದ್ದರು.
Published on

ಹೊಸನಗರ: ಮಾಸ್ತಿಕಟ್ಟೆ ಮೂಲದ ಗಣಿ ಅಧಿಕಾರಿ ಜ್ಯೋತಿ ಅವರನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿದವರನ್ನು ಬಂಧಿಸುವಂತೆ ಆಗ್ರಹಿಸಿ ತಾಲೂಕಿನ ಮಾಸ್ತಿಕಟ್ಟೆಯಲ್ಲಿ ಶುಕ್ರವಾರ ಪಕ್ಷಾತೀತವಾಗಿ ಪ್ರತಿಭಟನೆ ನಡೆಸಲಾಯಿತು.

ಗ್ರಾಪಂ ಆವರಣದಲ್ಲಿ ಜಮಾಯಿಸಿದ ಸಾರ್ವಜನಿಕರು, ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಎಲ್ಲರೂ ಜವಾಬ್ದಾರಿಯಿಂದ ಇರಬೇಕು. ಆದರೆ ಒಬ್ಬ ಮಹಿಳಾ ಅಧಿಕಾರಿಯನ್ನು ಅವಾಚ್ಯವಾಗಿ ನಿಂದಿಸಿ ಅವಮಾನ ಮಾಡಿರುವುದು ಸಮಾಜ ಸಹಿಸುವುದಿಲ್ಲ ಎಂದು ಕಿಡಿಕಾರಿದರು.

ನಮ್ಮ ದೇಶದಲ್ಲಿ ಮಹಿಳೆಗೆ ಗೌರವ ನೀಡಲಾಗುತ್ತದೆ. ಆದರೆ ಮಹಿಳೆಯನ್ನು ಅವಮಾನಿಸಿರುವುದು ಖಂಡನೀಯ. ಅಧಿಕಾರಿಯನ್ನು ನಿಂದಿಸಿದವನನ್ನು ಬಂಧಿಸಿ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿ ಮಾಸ್ತಿಕಟ್ಟೆ ವೃತ್ತದಲ್ಲಿ ಮಾನವ ಸರಪಳಿ ನಿರ್ಮಿಸಲಾಯಿತು.

ಉಪಾಧ್ಯಕ್ಷೆ ರಂಜಿತಾ ಜಯರಾಮ್, ವೀಣಾ ಪುರುಷೋತ್ತಮ್, ಪಿಡಿಒ ಸಂತೋಷ್‌ಕುಮಾರ್‌ಗೆ ಮನವಿ ಸಲ್ಲಿಸಲಾಯಿತು. ಗ್ರಾಪಂ ಅಧ್ಯಕ್ಷ ಕೆ.ಬಿ.ಕೃಷ್ಣಮೂರ್ತಿ, ಸದಸ್ಯರಾದ ಪ್ರಕಾಶ್ ಗೌಡ, ಇಸ್ಮಾಯಿಲ್, ಪದ್ಮಾ, ಪವಿತ್ರಾ ಸಂಗಮ್, ಪ್ರಮುಖರಾದ ಜಿ.ವಿ.ರವೀಂದ್ರ, ಎಚ್.ಕೆ.ವಿದ್ಯಾನಂದ ರಾವ, ರವೀಂದ್ರ ಪ್ರಭು, ಜಯರಾಮ್, ಕೃಷ್ಣಾನಂದ ಕಿಣಿ, ಸುರೇಶ್ ಭಟ್, ಮಣಿ, ವೆಂಕಟೇಶ್, ಪ್ರಮೋದ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net