

ಚಿಕ್ಕಬಳ್ಳಾಪುರ: ಹಣಕ್ಕಾಗಿ ಹಲವು ಉದ್ಯಮಿಗಳನ್ನು ಅಪಹರಿಸಿ, ಸುಲಿಗೆ ಮಾಡಿದ್ದ ಆರು ಜನರನ್ನು ಪೊಲೀಸರು ಬಂಧಿಸಿದ್ದಾರೆ.
ಚಿಕ್ಕಬಳ್ಳಾಪುರದ ರ್ಬಕತ್ ವುಲ್ಲಾ (44), ಬೆಂಗಳೂರಿನ ತಾವರೆಕೆರೆಯ ಲೋಹಿತ್ ಕುಮಾರ್ (30), ಬೆಳ್ಳಂದೂರಿನ ಪ್ರವಿಣ್ (21), ಹುಳಿಮಾವಿನ ಭರತ್ (26), ಹೆಬ್ಬಾಳ ಎ.ಕೆ.ಕಾಲನಿಯ ಮಾರುತಿ ಪ್ರಸನ್ನ (32), ಕೋಲಾರದ ಚಿನ್ನಾಪುರದ ವೆಂಕಟೇಶ್ (24) ಬಂಧಿತರು. ಆರೋಪಿಗಳ ವಿರುದ್ಧ ವಿವಿಧ ಠಾಣೆಗಳಲ್ಲಿ ಅಪಹರಣ, ಹಣ ಸುಲಿಗೆ, ಬೆದರಿಕೆ ಸೇರಿದಂತೆ ನಾನಾ ಪ್ರಕರಣಗಳು ದಾಖಲಾಗಿವೆ.
*ಗಿರಿಧಾಮದ ತಪ್ಪಲಿನಲ್ಲಿ ಅಪಹರಣ
ಕಳೆದ ಜು.18 ರಂದು ಚಿಕ್ಕಬಳ್ಳಾಪುರ ತಾಲೂಕಿನ ಚಿಕ್ಕಸಾಗರಹಳ್ಳಿ ಬಳಿ ಉದ್ಯಮಿಯೊಬ್ಬರನ್ನು ಅಪಹರಿಸಿ, ಆರೋಪಿಗಳು 78 ಲಕ್ಷ ರೂ ಸುಲಿಗೆ ಮಾಡಿದಕ್ಕೆ ಸಂಬಂಧಿಸಿದಂತೆ ನಂದಿ ಗಿರಿಧಾಮ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಇಲ್ಲಿನ ಎಯುಆರ್ಎ ಬಡಾವಣೆಯಲ್ಲಿ ವಾಯು ವಿಹಾರಕ್ಕೆ ಹೋಗುತ್ತಿದ್ದ ರಿಯಲ್ ಎಸ್ಟೇಟ್ ಉದ್ಯಮಿ ಕುಡುವತಿ ನವೀನ್ ಕುಮಾರ್ರನ್ನು ಕಾರಿನಲ್ಲಿ ಬಂದ ಆರೋಪಿಗಳು, ಅಪಹರಿಸಿದ್ದರು. ಹಾಗೆಯೇ ಬೆದರಿಕೆಯನ್ನೊಡ್ಡಿ ಅವರ ಸಂಬಂಧಿಕರಿಂದ ಹಣವನ್ನು ತರಿಸಿಕೊಂಡಿದ್ದರು. ಕೊನೆಗೆ ಹಲವು ತಾಸಿನ ಬಳಿಕ ರಸ್ತೆಯಲ್ಲಿ ಬಿಟ್ಟು ಪರಾರಿಯಾಗಿದ್ದು ಇದರ ದೂರನ್ನು ಪಡೆದುಕೊಂಡಿದ್ದ ಪೊಲೀಸರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಆರೋಪಿ ರ್ಬಕತ್ನಿಂದ 9.50 ಲಕ್ಷ ರೂ, ರೋಹಿತ್ನಿಂದ 31.50 ಲಕ್ಷ ರೂ ನಗದು, ವಿವಿಧ ಕಂಪನಿಯ 7 ಮೊಬೈಲ್ ಜತೆಗೆ ಎರಡು ಕಾರುಗಳನ್ನು ವಶಪಡಿಸಿದ್ದಾರೆ.
*ವರ್ತೂರು ಪ್ರಕಾಶ್ ಪ್ರಕರಣ
ವರ್ತೂರು ಪ್ರಕಾಶ್ ಅಪಹರಣ ಪ್ರಕರಣದಲ್ಲಿ ಲೋಹಿತ್ (ಪ್ರಮುಖ ಆರೋಪಿ) ಸಹ ಇದ್ದ. ಕಳೆದ 2020 ನೇ ಸಾಲಿನ ನ.25 ರಂದು ರಾತ್ರಿ 7 ಗಂಟೆ ಕೋಲಾರದ ಬೆಗ್ಲಿಹೊಸಹಳ್ಳಿಯ ಾರಂ ಹೌಸ್ನಿಂದ ಕಾರಿನಲ್ಲಿ ತೆರಳುತ್ತಿದ್ದ ವೇಳೆ ಸುಲಿಗೆಕೋರರ ತಂಡವು ಮಾಜಿ ಶಾಸಕ ವರ್ತೂರು ಪ್ರಕಾಶ್ ಮತ್ತು ಚಾಲಕ ಸುನೀಲ್ರನ್ನು ಅಪಹರಿಸಿತ್ತು. ಕೊನೆಗೆ ಹಲ್ಲೆ ನಡೆಸಿದ್ದಲ್ಲದೇ ಬೆದರಿಸಿ 48 ಲಕ್ಷ ರೂ ಹಣವನ್ನು ಪಡೆದುಕೊಂಡು ಬಿಟ್ಟು ಕಳುಹಿಸಿತ್ತು. ಪ್ರಕರಣವನ್ನು ಭೇದಿಸಿದ ಪೊಲೀಸರು ಆರು ಜನರನ್ನು ಬಂಧಿಸಿದ್ದರು.