ಹಲ್ಲೆ ಮಾಡಿ ಸುಲಿಗೆ ಮಾಡಿದ್ದ ಮೂವರ ಸೆರೆ

crime
Published on

ಬೆಂಗಳೂರು: ಮದ್ಯದ ಅಮಲಿನಲ್ಲಿ ಬೈಕ್ ತಗುಲಿದ ವಿಚಾರಕ್ಕೆ ಬುಲೆಟ್ ಬೈಕ್ ಸವಾರ ಮೇಲೆ ಹಲ್ಲೆ ನಡೆಸಿ ಐಫೋನ್-೧೫ ಸೇರಿ ಎರಡು ಮೊಬೈಲ್ ಸುಲಿಗೆ ಮಾಡಿದ್ದ ಮೂವರು ಆರೋಪಿಗಳನ್ನು ವರ್ತೂರು ಠಾಣೆ ಪೊಲೀಸರು ಬಂಧಿಸಿದ್ದಾರೆ.
ಎಚ್‌ಎಎಲ್ ನಿವಾಸಿ ಮಂಜುನಾಥ್(೩೦), ಸರ್ಜಾಪುರ ನಿವಾಸಿ ಎನ್. ಕಾರ್ತಿಕ್(೨೭) ಮತ್ತು ಬಸವನಗರ ನಿವಾಸಿ ಆರ್.ಕಾರ್ತಿಕ್(೨೯) ಬಂಧಿತರು. ಆರೋಪಿಗಳಿಂದ ೧,೨೫ ಲಕ್ಷ ರೂ. ಮೌಲ್ಯದ ಐಫೋನ್-೧೫ ಮತ್ತು ಒನ್ ಪ್ಲಸ್ ಮೊಬೈಲ್ ವಶಕ್ಕೆ ಪಡೆಯಲಾಗಿದೆ.
ಆರೋಪಿಗಳು ಇತ್ತೀಚೆಗೆ ಠಾಣೆ ವ್ಯಾಪ್ತಿಯ ಗುಂಜೂರು ಪಾಳ್ಯದ ಬಾರ್‌ನಲ್ಲಿ ಮದ್ಯಪಾನ ಮಾಡಿ ಹೊರಗಡೆ ಬಂದಿದ್ದಾರೆ. ಅದೇ ವೇಳೆ ದೂರುದಾರರು ತಮ್ಮ ಬುಲೆಟ್ ಅನ್ನು ತೆಗೆಯುವಾಗ ಪಕ್ಕದಲ್ಲಿ ನಿಲ್ಲಿಸಿದ್ದ ಆರೋಪಿಗಳ ಬೈಕ್‌ಗೆ ತಗುಲಿದೆ. ಇದೇ ವಿಚಾರಕ್ಕೆ ಮೂವರು ದೂರುದಾರರ ಜತೆ ಜಗಳ ತೆಗೆದು ಹಲ್ಲೆ ನಡೆಸಿ ಸುಲಿಗೆ ಮಾಡಿದ್ದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net