ನಕಲಿ ದಾಖಲೆ ಸೃಷ್ಟಿಸುತ್ತಿದ್ದವರ ಬಂಧನ

arrested
Published on

ಕೋಲಾರ: ಹೊರ ರಾಜ್ಯದವರಿಂದ ಹಣ ಪಡೆದು ಸರ್ಕಾರಿ ನಕಲಿ ಗುರುತಿನ ಚೀಟಿಗಳನ್ನು ಮಾಡಿಕೊಡುತ್ತಿದ್ದ ನಾಲ್ವರನ್ನು ಸಿಇಎನ್​ ಪೊಲೀಸರು ಶುಕ್ರವಾರ ಬಂಧಿಸಿದ್ದಾರೆ.

ಮಾಲೂರು ಪಟ್ಟಣದ ಜಬ್ಬಿವುಲ್ಲಾ ಬೇಗ್​ (43), ಭಾವನಹಳ್ಳಿ ಕೃಷ್ಣಾರೆಡ್ಡಿ (46), ಜೋರಿಪುರ ಮಧುಸೂದನ (37), ಬಿ.ಎಸ್​ ಮಧುಸೂದನ್​ (30) ಬಂಧಿತರು.

ಜಿಲ್ಲೆಯ ಮಾಲೂರು ಪಟ್ಟಣದಲ್ಲಿ ನಕಲಿ ಸರ್ಕಾರಿ ಗುರುತಿನ ಚೀಟಿಗಳ ದುರಪಯೋಗ ಮತ್ತು ರಾಷ್ಟ್ರೀಯ ದಾಖಲೆಗಳ ಮಾರಾಟ ಮಾಡುತ್ತಿರುವ ಬಗ್ಗೆ ಬಂದ ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿ, ಆರೋಪಿಗಳನ್ನು ಬಂಧಿಸಿ, ದಾಖಲೆಗಳನ್ನು ಪೊಲಿಸರು ವಶಪಡಿಸಿಕೊಂಡಿದ್ದಾರೆ.

ನಕಲಿ ಆಧಾರ್​ ಕಾರ್ಡ್​, ಪ್ಯಾನ್​ಕಾರ್ಡ್​ ಮತ್ತು ಮರಣ ಪ್ರಮಾಣ ಪತ್ರ ಹಾಗೂ ಇತರ ಸರ್ಕಾರಿ ದಾಖಲೆಗಳನ್ನು ಅಕ್ರಮವಾಗಿ ತಯಾರಿಸಿ ಹೊರ ರಾಜ್ಯದವರಿಗೆ ಮತ್ತು ಅಕ್ರಮ ವಲಸಿಗರಿಂದ 10 ಸಾವಿರ ದಿಂದ 15 ಸಾವಿರ ರೂ.ಗೆ ಮಾಡಿಕೊಡುತ್ತಿದ್ದದ್ದು ಕಾರ್ಯಾಚರಣೆ ವೇಳೆ ಪತ್ತೆಯಾಗಿದೆ.

ಜಿಲ್ಲಾ ಪೊಲೀಸ್​ ವರಿಷ್ಠಾಧಿಕಾರಿ ಬಿ.ನಿಖಿಲ್​, ಹೆಚ್ಚುವರಿ ಜಿಲ್ಲಾ ಪೊಲೀಸ್​ ಅಧೀಕ್ಷಕರಾದ ಸಿ.ಆರ್​. ರವಿಶಂಕರ್​, ಎಚ್​.ಸಿ ಜಗದೀಶ್​ ಮಾರ್ಗದರ್ಶನದಲ್ಲಿ ಸಿಇಎನ್​ ಠಾಣೆಯ ಪೊಲೀಸ್​ ಉಪಾಧೀಕ್ಷಕ ಆರ್​.ರಾಜೇಶ್​, ಇನ್​ಸ್ಪೆಕ್ಟರ್​ ಎಸ್​.ಆರ್​.ಜಗದೀಶ್​ ಮುಂದಾಳತ್ವದಲ್ಲಿ ಸಿಬ್ಬಂದಿ ಶ್ರೀ ಹಮೀದ್​ಖಾನ್​, ಆಲೀಫಾ, ಶ್ರೀ ಶಿವಾನಂದ, ಆನಂದ್​ಕುಮಾರ್​, ಅರುಣ್​ಕುಮಾರ್​, ಅಂಬರೀಶ, ಶಂಕರಪ್ಪ, ಮಂಜುಳಾ, ಸಂತೋಷ್​, ಬಾಲಾಜಿ, ವಿನಯ್​, ಪ್ರಸನ್ನ ಕುಮಾರ್​, ಚಂದ್ರಿಕಾ ದಾಳಿಯಲ್ಲಿ ಪಾಲ್ಗೊಂಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net