ಬಸವನಕೋಟೆ ಮೀಸಲು ಅರಣ್ಯದಲ್ಲಿ ಸಾಗುವಾನಿ ಮರ ಕಡಿದವರ ಬಂಧನ

04bhr 4
ಬಸವನಕೋಟೆ ಮೀಸಲು ಅರಣ್ಯದಲ್ಲಿ ಸಾಗುವಾನೆ ಮರ ಕಡಿತಲೆ ಮಾಡಿದ್ದ ಆರೋಪಿಗಳನ್ನು ಮಾಲು ಸಮೇತ ಅರಣ್ಯಇಲಾಖೆ ಸಿಬ್ಬಂದಿ ಬಂಧಿಸಿದ್ದಾರೆ. ಎಸಿಎ್ ಚೇತನ್ ಗಸ್ತಿ, ಆರ್‌ಎ್ಓ ಸಂದೀಪ್, ಡಿಆರ್‌ಎ್ಓ ಮಂಜುನಾಥ್, ಆದಿತ್ಯರಾವ್, ಪರಶುರಾಮ್ ಇದ್ದರು.
Published on

ಬಾಳೆಹೊನ್ನೂರು: ಬಾಳೆಹೊನ್ನೂರಿನ ಬಸವನಕೋಟೆ ಮೀಸಲು ಅರಣ್ಯದಲ್ಲಿ ಅಕ್ರಮವಾಗಿ ಸಾಗುವಾನಿ ಮರ ಕಡಿತಲೆ ಮಾಡಿದ ಅರೋಪದ ಮೇಲೆ ನಾಲ್ವರು ಆರೋಪಿಗಳನ್ನು ಅರಣ್ಯಇಲಾಖೆ ಸಿಬ್ಬಂದಿ ಸೋಮವಾರ ಬಂಧಿಸಿದ್ದಾರೆ.
ಅಂಡವಾನೆಯ ಎ.ಎನ್.ಆರ್ಥೇಶ್, ಹುಯಿಗೆರೆ ಗ್ರಾಮದ ಎ.ಆರ್.ಪ್ರದೀಪ್, ಎ.ಎಲ್.ಮಂಜುನಾಥ್, ಕೆ.ಜಿ.ಧರ್ಮಪ್ಪ ಬಂಧಿತ ಆರೋಪಿಗಳು. ಆರ್ಥೇಶ್, ಪ್ರದೀಪ್, ಮಂಜುನಾಥ್ ಮೂವರು ಭಾನುವಾರ ರಾತ್ರಿ ಬಸವನಕೋಟೆ ಮೀಸಲು ಅರಣ್ಯದ ಸಾಗುವಾನೆ ನೆಡುತೋಪಿನಲ್ಲಿ ಬೆಳೆದ ಬೃಹತ್ ಸಾಗುವಾನೆ ಮರವನ್ನು ಕಡಿತಲೆ ಮಾಡಿ ದಿಮ್ಮಿಗಳನ್ನಾಗಿ ತಯಾರಿಸಿ ಸಾಗಣೆಗೆ ಸಿದ್ಧತೆ ನಡೆಸಿದ್ದರು. ಈ ವೇಳೆ ಅರಣ್ಯ ಇಲಾಖೆ ಸಿಬ್ಬಂದಿ ಗಸ್ತು ತಿರುಗುತ್ತಿದ್ದಾಗ ಅಕ್ರಮ ಮರ ಕಡಿತಲೆ ಬೆಳಕಿಗೆ ಬಂದಿದೆ.
ಈ ಮೂವರು ಆರೋಪಿಗಳು ಮರವನ್ನು ಕೆ.ಜಿ.ಧರ್ಮಪ್ಪ ಅವರಿಗೆ ಮಾರಾಟ ಮಾಡಲು ಕಡಿತಲೆ ಮಾಡಿದ್ದಾಗಿ ವಿಚಾರಣೆ ವೇಳೆ ಒಪ್ಪಿಕೊಂಡಿದ್ದಾರೆ. ಆರೋಪಿಗಳಿಂದ ಕಡಿತಲೆ ಮಾಡಿದ 8 ಸಾಗುವಾನೆ ಮರದ ದಿಮ್ಮಿಗಳು ಹಾಗೂ ಕಡಿತಲೆಗೆ ಬಳಸಿದ ಪರಿಕರಗಳನ್ನು ವಶಕ್ಕೆ ಪಡೆಯಲಾಗಿದೆ.
ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಳಪಡಿಸಲಾಗಿದೆ ಎಂದು ಎಸಿಎ್ ಚೇತನ್ ಮಂಗಲ್ ಗಸ್ತಿ ತಿಳಿಸಿದ್ದಾರೆ. ಕಾರ್ಯಾಚರಣೆಯಲ್ಲಿ ಆರ್‌ಎ್ಓ ಎಂ.ಸಂದೀಪ್, ಡಿಆರ್‌ಎ್ಓ ಮಂಜುನಾಥ್, ಆದಿತ್ಯರಾವ್, ನಾಗರಾಜ್, ಪರಶುರಾಮ್, ಅರಣ್ಯ ಸಿಬ್ಬಂದಿಗಳಾದ ಸಂದೀಪ್, ಯೋಗಾನಂದ, ವೆಂಕಟೇಶ್, ಚಾಲಕ ಪ್ರಕಾಶ್ ಭಾಗವಹಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net