ಅವಹೇಳನಕಾರಿ ಬರಹ ಪ್ರಕಟಿಸಿದ್ದ ಆರೋಪಿಯ ಬಂಧನ

Crime Logo
Published on

ಬೆಂಗಳೂರು: ಕರ್ನಾಟಕ, ಕನ್ನಡ ಭಾಷೆ, ಕನ್ನಡಿಗರ ಬಗ್ಗೆ ಸಾಮಾಜಿಕ ಜಾಲತಾಣ ಇನ್ಸ್‌ಸ್ಟಾಗ್ರಾಮ್‌ನಲ್ಲಿ ಅವಹೇಳನಕಾರಿ ಬರಹ ಪ್ರಕಟಿಸಿದ್ದ ಪಶ್ಚಿಮಬಂಗಾಳ ಮೂಲದ ಆರೋಪಿಯನ್ನು ಕೊಡಿಗೇಹಳ್ಳಿ ಠಾಣೆ ಪೊಲೀಸರು ಬಂಧಿಸಿದ್ದಾರೆ.


ಆರ್.ಟಿ.ನಗರ ನಿವಾಸಿ ನಿಲೋಯ್ ಮಂಡಲ್(೨೩) ಬಂಧಿತ. ಆರೋಪಿಯು ನೇಟೀವ್ ಬೆಂಗಳೂರಿಯನ್ಸ್ ಎಂಬ ಇನ್ಸ್‌ಸ್ಟಾಗ್ರಾಮ್ ಖಾತೆಯಲ್ಲಿ ಕರ್ನಾಟಕ, ಬೆಂಗಳೂರು ಹಾಗೂ ಕನ್ನಡಿಗರ ಬಗ್ಗೆ ಅವಾಚ್ಯಶಬ್ಧಗಳಿಂದ ನಿಂದಿಸಿ ಅವಹೇಳನಕಾರಿ ಪೋಸ್ಟ್ ಮಾಡಿದ್ದ. ಈ ಸಂಬಂಧ ಸ್ವಯಂ ಪ್ರೇರಿತ ದೂರು ದಾಖಲಿಸಿಕೊಂಡು ಆರೋಪಿಯನ್ನು ಬಂಧಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.


ಪಶ್ಚಿಮ ಬಂಗಾಳ ಮೂಲದ ಆರೋಪಿ ನಿಲೋಯ್ ಕೊಡಿಗೇಹಳ್ಳೀಯ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ. ಇತ್ತೀಚೆಗೆ ಇನ್ಸ್‌ಸ್ಟಾಗ್ರಾಮ್‌ನಲ್ಲಿ ಬೆಂಗಳೂರು ಇಲ್ಲದೆ ಕರ್ನಾಟಕ ಇಲ್ಲ. ಕರ್ನಾಟಕದ ಜನ ಅವಿದ್ಯಾವಂತರು. ಇಲ್ಲಿನ ಜನ ನನ್ನ ಶೌಚಾಲಯ ಸ್ವಚ್ಛ ಮಾಡಲು ಲಾಯಕ್ಕು. ಉತ್ತರ ಭಾರತ ಅದರಲ್ಲೂ ಪಶ್ಚಿಮ ಬಂಗಾಳದ ಜನರು ಬೆಂಗಳೂರಿಗೆ ಬಂದು ಉದ್ಯೋಗ ಮಾಡುತ್ತಿರುವುದರಿಂದ ಬೆಂಗಳೂರು ಅಭಿವೃದ್ಧಿಯಾಗಿದೆ. ನಾವು ಬೆಂಗಳೂರು ಬಿಟ್ಟು ಹೋದರೆ, ಕನ್ನಡ ಜನರು ಕಾಡು ಜನಗಳಾಗುತ್ತಾರೆ. ಯಾರು ಕೂಡ ನಿಮ್ಮ ಭಾಷೆ ಕಲಿಯುವುದಿಲ್ಲ ಎಂಬುದು ಸೇರಿದಂತೆ ಕನ್ನಡನಾಡು, ಕನ್ನಡಭಾಷೆ, ಕನ್ನಡಿಗರ ಬಗ್ಗೆ ಅವಾಚ್ಯಶಬ್ಧಗಳಿಂದ ನಿಂದಿಸಿ ಪೋಸ್ಟ್ ಮಾಡಿದ್ದ. ಈ ಪೋಸ್ಟ್ ಮಾಡಿದ್ದವನ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಯವಂತೆ ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸಿದ್ದರು. ಇದರ ಬೆನ್ನಲ್ಲೇ ಎಚ್ಚೆತ್ತ ಕೊಡಿಗೇಹಳ್ಳಿ ಠಾಣೆ ಪೊಲೀಸರು ಸ್ವಯಂ ಪ್ರೇರಿತ ದೂರು ದಾಖಲಿಸಿಕೊಂಡು ಆರೋಪಿಯನ್ನು ಬಂಧಿಸಿ ಜೈಲಿಗಟ್ಟಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net