

ಕೋಲಾರ: ಅನೈತಿಕ ಸಂಬಂಧ ಹಿನ್ನೆಲೆಯಲ್ಲಿ ವ್ಯಕ್ತಿಯನ್ನು ಕೊಲೆ ಮಾಡಿ ತಲೆಮರಿಸಿಕೊಂಡಿದ್ದ ನಾಲ್ವರು ಆರೋಪಿಗಳನ್ನು 24 ಗಂಟೆಯಲ್ಲಿ ನಗರದ ಗಲ್ಪೇಟ್ ಪೊಲೀಸರ ಶುಕ್ರವಾರ ಬಂಧಿಸಿದ್ದಾರೆ.
ಬೆಂಗಳೂರಿನ ಹೊಸಕೋಟೆ ನಗರದ ಎಂ.ಡಿ.ಇಾರ್ನ್ (35), ಕೋಲಾರದ ರಹಮತ್ ನಗರದ ಮಹಮದ್ ಸಾಕೀಬ್ (22), ಜಾಕೀರ್ ಪಾಷಾ(28), ಹೊಸಕೋಟೆ ಹುಸ್ನಾ ಬೇಗಂ (30) ಬಂಧಿತರು.
ನಗರದ ಪ್ರಶಾಂತ ನಗರದಲ್ಲಿನ ಅಸ್ಮಾತಾಜ್ ಮನೆಯಲ್ಲಿ ನಾಲ್ವರು ಸೇರಿ ಕತ್ತಿಗಳಿಂದ ಹೊಡೆದು, ಚಾಕುವಿನಿಂದ ಚುಚ್ಚಿ ಅಮೀನ್ನ್ನು ಕೊಲೆ ಮಾಡಿ ತಲೆ ಮರಿಸಿಕೊಂಡಿದ್ದರು. ಈ ಬಗ್ಗೆ ಹೊಸಕೋಟೆ ನಿವಾಸಿ ಮುಬಾರಕ್ ಗಲ್ಪೇಟೆ ಪೊಲೀಸರಿಗೆ ದೂರು ನೀಡಿದ್ದರು.
ಮೃತ ಅಮೀನ್ ಜಿಮ್ ಟೆನರ್ ಆಗಿ ಕೆಲಸ ಮಾಡಿಕೊಂಡಿದ್ದು, ಜತೆಗೆ ಸ್ನೇಹಿತ ಇಾರ್ನ್ ಜತೆ ಸೇರಿ ಮಟನ್ ಸ್ಟಾಲ್ ಇಟ್ಟುಕೊಂಡಿದ್ದರು. ಅಮೀನ್ ತನ್ನ ಸ್ನೇಹಿತ ಇರ್ಫಾನ್ ಹೆಂಡತಿ ಹುಸ್ನಾ ಬೇಗಂನೊಂದಿಗೆ ಅನೈತಿಕ ಸಂಬಂಧ ಇಟ್ಟುಕೊಂಡಿದ್ದ. ಈ ವಿಚಾರದಲ್ಲಿ ಇಬ್ಬರ ನಡುವೆ ಆಗಾಗ ಗಲಾಟೆಗಳಾಗಿದ್ದವು. ಇರ್ಫಾನ್ ತಮ್ಮ ಹೆಂಡತಿಯ ಸಹವಾಸ ಮಾಡದಂತೆ ಅಮೀನ್ಗೆ ಹಿಂದೆ ಎಚ್ಚರಿಕೆ ನೀಡಿದ್ದ.
ಆದರೂ ಕೂಡ ಅಮೀನ್ ಮತ್ತು ಹುಸ್ನಾ ಬೇಗಂ ಇರ್ಫಾನ್ನ ಮಾತು ಕೇಳದೇ ಇಬ್ಬರೂ ಹೆಚ್ಚಾಗಿ ಪೋನ್ನಲ್ಲಿ ಮಾತನಾಡಿಕೊಳ್ಳುತ್ತಿದ್ದು, ಇದರಿಂದ ಇಬ್ಬರ ನಡುವೆ ದ್ವೇಷ ಬೆಳೆದಿದೆ. ಈ ಹಿನ್ನಲೆಯಲ್ಲಿ ಆರೋಪಿಗಳು ಸಂಚು ರೂಪಿಸಿ ಕೊಲೆ ಮಾಡಿ ಪೊಲೀಸರ ಬಂಧನಕ್ಕೆ ಒಳಗಾಗಿದ್ದಾರೆ. ತನಿಖಾ ತಂಡದ ಕಾರ್ಯವನ್ನು ಎಸ್ಪಿ ಬಿ.ನಿಖಿಲ್ ಶ್ಲಾಘಿಸಿದ್ದಾರೆ.