ಯುವತಿಯೊಂದಿಗೆ ಅಸಭ್ಯವಾಗಿ ವರ್ತಿಸಿದ್ದವನ ಬಂಧನ

Crime Logo
Published on

ಬೆಂಗಳೂರು: ಒಂಟಿಯಾಗಿ ಓಡಾಡುವ ಯುವತಿಯೊಂದಿಗೆ ಅಸಭ್ಯವಾಗಿ ವರ್ತಿಸುತ್ತಿದ್ದ ಕಾಮುಕನನ್ನು ಹೈಗ್ರೌಂಡ್ಸ್ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಶಿವಾಜಿನಗರ ನಿವಾಸಿ ಅಯ್ಯಪ್ಪ(19) ಬಂಧಿತ ಆರೋಪಿ.
ತಮಿಳುನಾಡು ಮೂಲದವನಾದ ಈತ ವರ್ಕ್‌ಶಾಪ್‌ನಲ್ಲಿ ಕೆಲಸ ಮಾಡತ್ತಿದ್ದನು. ವರ್ಕ್‌ಶಾಪ್‌ಗೆ ರಿಪೇರಿಗೆ ಬರುವ ಬೈಕ್‌ನಲ್ಲಿ ಸುತ್ತಾಡುತ್ತಾ ಒಂಟಿಯಾಗಿ ಹೋಗುವ ಯುವತಿಯರನ್ನು ತಬ್ಬಿಕೊಂಡು ನಂತರ ಸ್ಥಳದಿಂದ ಪರಾರಿಯಾಗುತ್ತಿದ್ದನು.
ಇದೇ ರೀತಿ ವಸಂತನಗರದಲ್ಲಿ ಆ.೨೭ ರಂದು ಬೆಳಗ್ಗೆ ೮ ಗಂಟೆಯ ಸಮಯದಲ್ಲಿ ವಾಯು ವಿಹಾರ ಮಾಡುತ್ತಿದ್ದ ಯುವತಿಯನ್ನು ಕಂಡು ಸ್ವಲ್ಪ ದೂರದಲ್ಲಿ ಬೈಕ್ ನಿಲ್ಲಿಸಿ ನಂತರ ಯುವತಿಯನ್ನು ಹಿಂಬಾಲಿಸಿಕೊಂಡು ಹೋಗಿ ಆಕೆಯನ್ನು ತಬ್ಬಿಕೊಂಡು ನಂತರ ಅಸಭ್ಯವಾಗಿ ವರ್ತಿಸಿದ್ದ. ಈತನ ವರ್ತನೆಯಿಂದ ಯುವತಿ ಕಿರುಚಿಕೊಳ್ಳುತ್ತಿದ್ದಂತೆ ಬೈಕ್ ತೆಗೆದುಕೊಂಡು ಸ್ಥಳದಿಂದ ಪರಾರಿಯಾಗಿದ್ದನು. ಸಂತ್ರಸ್ತ ಯುವತಿ ಈ ಸಂಬಂಧ ನೀಡಿದ ದೂರಿನನ್ವಯ ಕಾರ್ಯಾಚರಣೆ ನಡೆಸಿ ಆರೋಪಿಯನ್ನು ಬಂಧಿಸಲಾಗಿದೆ. ಈ ರೀತಿ ಕೃತ್ಯ ಬೇರೆ ಕಡೆ ಏನಾದರೂ ಎಸಗಿದ್ದಾನೆ ಎಂದು ವಿಚಾರಣೆ ನಡೆಸಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net