ಸುಲಿಗೆಗೆ ಸಂಚು ರೂಪಿಸಿದ್ದ ನಾಲ್ವರ ಬಂಧನ

arrest
Published on

ಬೆಂಗಳೂರು: ರೌಡಿಶೀಟರ್ ಒಬ್ಬನನ್ನು ಜೈಲಿನಿಂದ ಬಿಡಿಸಲು, ಸುಲಿಗೆ ಮಾಡಲು ಸಂಚು ರೂಪಿಸಿದ್ದ ರೌಡಿಶೀಟರ್‌ನ ನಾಲ್ವರು ಸಹಚರನನನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.
ಚೇತನ್(೨೫), ಕಿರಣ್‌ಕುಮಾರ್(೨೫), ಶರತ್‌ರಾಜ್(೨೯) ಮತ್ತು ನವೀನ್ ಕುಮಾರ್(೨೯) ಬಂಧಿತರು. ಮತ್ತೊಬ್ಬ ಆರೋಪಿ ಶಶಿಕುಮಾರ್ ಎಂಬಾತ ತಲೆಮರೆಸಿಕೊಂಡಿದ್ದು, ಆತನಿಗಾಗಿ ಶೋಧ ಮುಂದುವರಿದೆ.
ಆರೋಪಿಗಳು ಡಿ.೧೨ ರಮದು ಪೀಣ್ಯ ಇಂಡಸ್ಟ್ರೀಯಲ್ ಏರಿಯಾದ ಕಾವೇರಿ ಸ್ಟೀಲ್ ಕಾರ್ಖಾನೆ ಬಳಿ ಸಾರ್ವಜನಿಕರನ್ನು ಮಾರಕಾಸಗಳಿಂದ ಬೆದರಿಸಿ ಬೆಲೆಬಾಳುವ ವಸ್ತುಗಳನ್ನು ಸುಲಿಗೆ ಮಾಡಲು ಹೊಂಚು ಹಾಕಿ ಕುಳಿತ್ತಿದ್ದರು. ಈ ಬಗ್ಗೆ ಬಂದ ಖಚಿತ ಮಾಹಿಯನ್ನು ಆಧರಿಸಿ ಸಿಸಿಬಿಯ ಸಂಘಟಿತ ಅಪರಾಧ ದಳದ ಅಧಿಕಾರಿ ಮತ್ತು ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸಿದೆ. ಆರೋಪಿಗಳಿಂದ ಒಂದು ಕಾರು, ಮಾರಕಾಸಗಳನ್ನು ವಶಕ್ಕೆ ಪಡೆಯಲಾಗಿದೆ ಎಂದು ಸಿಸಿಬಿ ಪೊಲೀಸರು ತಿಳಿಸಿದ್ದಾರೆ.
ಆರೋಪಿಗಳು ನೆಲಮಂಗಲ, ಪೀಣ್ಯ ಮತ್ತು ತ್ಯಾಮಗೊಂಡ್ಲು ನಿವಾಸಿಗಳಾಗಿದ್ದು, ತಮ್ಮ ಗ್ಯಾಂಗ್ ಲೀಡರ್ ಆದ ರೌಡಿಶೀಟರ್ ಒಬ್ಬ ಜೈಲಿನಲ್ಲಿದ್ದು, ಆತನನ್ನು ಜಾಮೀನು ಕೊಟ್ಟು ಬಿಡಿಸಲು ಹಣವಿಲ್ಲದೇ ಸುಲಿಗೆ ಮಾಡಲು ಸಂಚು ರೂಪಿಸಿದ್ದರು. ಈ ಬಗ್ಗೆ ಬಂದ ಖಚಿತ ಮಾಹಿತಿಯ ಮೇರೆಗೆ ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಈ ಸಂಬಂಧ ಪೀಣ್ಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net