ಕೇರಂ ಆಟದಲ್ಲಿ ತೊಡಗಿದ್ದ 49 ಜನರ ಬಂಧನ

Crime_3.jpg
Published on

ಮೈಸೂರು: ಪ್ರತ್ಯೇಕ ಮೂರು ಪ್ರಕರಣಗಳಲ್ಲಿ ಕಾನೂನು ಬಾಹಿರವಾಗಿ ಹಣವನ್ನು ಪಣವಾಗಿಟ್ಟು ಕೇರಂ ಆಟದಲ್ಲಿ ತೊಡಗಿದ್ದ 49 ಜನರನ್ನು ಬಂಧಿಸಿರುವ ಸಿಸಿಬಿ ಪೊಲೀಸರು, 64,007 ರೂ. ನಗದು ಹಣ, 15 ಕೇರಂ ಬೋರ್ಡ್, ಪರಿಕರಗಳನ್ನು ವಶಪಡಿಸಿಕೊಂಡಿದ್ದಾರೆ.

ಶನಿವಾರ ಉದಯಗಿರಿ ಪೊಲೀಸ್ ಠಾಣಾ ವ್ಯಾಪ್ತಿಯ ಮೂರು ಪ್ರತ್ಯೇಕ ಸ್ಥಳಗಳಲ್ಲಿ ಕಾನೂನು ಬಾಹಿರವಾಗಿ ಹಣವನ್ನು ಪಣವಾಗಿಟ್ಟುಕೊಂಡು ಕೇರಂ ಆಟವನ್ನು ಜೂಜಾಟದಂತೆ ಆಡುತ್ತಿದ್ದ ಬಗ್ಗೆ ಮೈಸೂರು ನಗರದ ಸಿಸಿಬಿ ಘಟಕದ ಪೋಲೀಸರಿಗೆ ಬಂದ ಖಚಿತ ಮಾಹಿತಿ ಮೇರೆಗೆ ಸಿಸಿಬಿ ಅಧಿಕಾರಿ ಮತ್ತು ಸಿಬ್ಬಂದಿ ಪ್ರತ್ಯೇಕ ತಂಡಗಳಾಗಿ ಕೇರಂ ಅಡ್ಡೆಗಳ ಮೇಲೆ ದಾಳಿ ನಡೆಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net