Jammu and Kashmir | ಬಂಡಿಪೋರಾದಲ್ಲಿ ಕಂದಕಕ್ಕೆ ಬಿದ್ದ ಸೇನಾ ವಾಹನ; ಇಬ್ಬರು ಯೋಧರು ಹುತಾತ್ಮ.. ಮೂವರ ಸ್ಥಿತಿ ಚಿಂತಾಜನಕ

Untitled design - 2025-01-04T160540.121
Published on

ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ(Jammu and Kashmir) ಬಂಡಿಪೋರಾ ಜಿಲ್ಲೆಯಲ್ಲಿ ಸಂಭವಿಸಿದ ಅಪಘಾತದಲ್ಲಿ ಇಬ್ಬರು ಯೋಧರು ಹುತಾತ್ಮರಾಗಿದ್ದು, ಮೂವರು ಗಂಭೀರವಾಗಿ ಗಾಯಗೊಂಡಿದ್ದಾರೆ. ಸೇನಾ ಸಿಬ್ಬಂದಿಯನ್ನು ಹೊತ್ತೊಯ್ಯುತ್ತಿದ್ದ ಟ್ರಕ್ ರಸ್ತೆಯಿಂದ ಸ್ಕಿಡ್ ಆಗಿ ಆಳವಾದ ಕಮರಿಗೆ ಬಿದ್ದಿದ್ದರಿಂದ ಈ ಅವಘಡ ಸಂಭವಿಸಿದೆ.

ತುರ್ತು ಸೇವೆಗಳು ಸ್ಥಳಕ್ಕೆ ಧಾವಿಸಿದ್ದು ಗಾಯಗೊಂಡ ಯೋಧರನ್ನು ಚಿಕಿತ್ಸೆಗಾಗಿ ಹತ್ತಿರದ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಗಾಯಾಳುಗಳನ್ನು ಶ್ರೀನಗರಕ್ಕೆ ರವಾನಿಸಲಾಗಿದೆ. ಅಪಘಾತಕ್ಕೆ ಕಾರಣ ಏನೆಂದು ತನಿಖೆ ನಡೆಯುತ್ತಿದೆ.

ಗಾಯಾಳುಗಳನ್ನು ತಕ್ಷಣ ಬಂಡಿಪೋರಾದ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ. ಜಿಲ್ಲಾ ಆಸ್ಪತ್ರೆ ಬಂಡಿಪೋರಾದ ವೈದ್ಯಕೀಯ ಅಧೀಕ್ಷಕ ಡಾ.ಮಸರತ್ ಇಕ್ಬಾಲ್ ವಾನಿ ಮಾತನಾಡಿ, 5 ಗಾಯಾಳುಗಳನ್ನು ಇಲ್ಲಿಗೆ ಕರೆತರಲಾಗಿದ್ದು, ಈ ಪೈಕಿ ಇಬ್ಬರು ಯೋಧರು ಈಗಾಗಲೇ ಹುತಾತ್ಮರಾಗಿದ್ದು, 3 ಮಂದಿ ಗಾಯಗೊಂಡವರ ಸ್ಥಿತಿ ಚಿಂತಾಜನಕವಾಗಿತ್ತು. ಹೆಚ್ಚಿನ ಚಿಕಿತ್ಸೆಗಾಗಿ ಶ್ರೀನಗರಕ್ಕೆ ಕಳುಹಿಸಲಾಗಿದೆ ಎಂದು ಹೇಳಿದರು.

ಕಳೆದ ವಾರ ಪೂಚ್ ಸೆಕ್ಟರ್‌ನಲ್ಲಿ ಸೇನಾ ಟ್ರಕ್ 300 ಅಡಿ ಆಳದ ಕಂದಕಕ್ಕೆ ಬಿದ್ದಾಗ ಇದೇ ರೀತಿಯ ಘಟನೆ ಕಂಡುಬಂದಿದೆ. ಈ ಘಟನೆಯಲ್ಲಿ 5 ಯೋಧರು ಹುತಾತ್ಮರಾಗಿದ್ದು, 5 ಯೋಧರು ಗಾಯಗೊಂಡಿದ್ದಾರೆ. 11 ಮರಾಠಾ ರೆಜಿಮೆಂಟ್‌ನ ಈ ಎಲ್ಲಾ ಸೈನಿಕರು ವಾಹನದಲ್ಲಿ ನಿಯಂತ್ರಣ ರೇಖೆ (LOC) ಕಡೆಗೆ ಹೋಗುತ್ತಿದ್ದರು, ಆದರೆ ವಾಹನವು ದಾರಿಯಲ್ಲಿ ಅಪಘಾತಕ್ಕೀಡಾಯಿತು. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net