ಕಾಶ್ಮೀರದ ಬಟ್ಟಲ್ ಸೆಲ್ಟರ್ ಒಳನುಸುಳುವಿಕೆ ಯತ್ನ ವಿಫಲಗೊಳಿಸಿದ ಸೇನೆ; ಗುಂಡಿನ ಚಕಮಕಿಯಲ್ಲಿ ಓರ್ವ ಸೈನಿಕಗೆ ಗಾಯ

mili
Published on

ಜಮ್ಮು & ಕಾಶ್ಮೀರ: ಮಂಗಳವಾರ ಜಮ್ಮು ಕಾಶ್ಮೀರದ ಬಟ್ಟಲ್ ಸೆಲ್ಟರ್ ನಲ್ಲಿ ಒಳನುಸುಳುವಿಕೆಗೆ ಪ್ರಯತ್ನಿಸಿದ ಉಗ್ರರನ್ನು ಸಮರ್ಥವಾಗಿ ಹತ್ತಿಕ್ಕಿದೆ. ಈ ವೇಳೆ ನಡೆದ ಗುಂಡಿನ ಚಕಮಕಿಯಲ್ಲಿ ಓರ್ವ ಸೈನಿಕನಿಗೆ ಗಾಯವಾಗಿದೆ. ಕಾರ್ಯಾಚರಣೆ ಮುಂದುವರಿದಿದೆ.

ಕಾಶ್ಮೀರದ ಬಟ್ಟಲ್ ಸೆಲ್ಟರ್ ನಲ್ಲಿ ಮುಂಜಾನೆ ಮೂರರ ಸಮಯದಲ್ಲಿ ಭಯೋತ್ಪಾದಕರ ಒಳನುಸುಳುವಿಕೆ ಬಗ್ಗೆ ಅಲರ್ಟ್ ತಂಡ ನೀಡಿ ಮಾಹಿತಿ ಆಧರಿಸಿ ಗುಂಡಿನ ದಾಳಿ ನಡೆಸಲಾಯಿತು. ಸೇನೆ ಮತ್ತು ಉಗ್ರರ ನಡುವೆ ನಡೆದ ದಾಳಿಯಲ್ಲಿ ಸೈನಿಕ ಓರ್ವ ಗಾಯಗೊಂಡಿದ್ದಾರೆ. ಕಾರ್ಯಚರಣೆ ಮುಂದುವರೆದಿದೆ ಎಂದು ವೈಟ್ ನೈಟ್ ಕಾರ್ಪ್ಸ್ ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಪೋಸ್ಟ್ ಮಾಡಿದ್ದಾರೆ.

ಮೊದಲು ಉಗ್ರರು ಫೈರಿಂಗ್ ಆರಂಭಿಸಿದ್ದು ಯೋಧರ ಮೇಲೆ ಗ್ರೇನೆಡ್ ಗಳನ್ನು ಎಸೆದಿದ್ದಾರೆ. ಆರಂಭದಲ್ಲಿ ಉಗ್ರರು ಸೇನೆಯ ಚೆಕ್‌ಪೋಸ್ಟ್‌ ಹಾಗೂ ವಿಲೇಜ್‌ ಡಿಫೆನ್ಸ್‌ ಗಾರ್ಡ್‌ (ವಿಡಿಸಿ) ಮನೆಯ ಮೇಲೆ ಖವಾಸ್ ತೆಸಿಲ್ನ ಗುಂಧಾ ಏರಿಯಾದಲ್ಲಿ ಈ ದಾಳಿ ನಡೆದಿದೆ.ವಿಡಿಸಿ ಮನೆಯ ಮೇಲೆ ನಿರಂತರವಾಗಿ ನಡೆದ ಎರಡನೇ ದಾಳಿ ಇದಾಗಿದೆ. ಈಗಾಗಲೇ ಜಮ್ಮು ಕಾಶ್ಮೀರದಲ್ಲಿ ಹೆಚ್ಚುವರಿ ಭದ್ರತಾ ಪಡೆಯ ನಿಯೋಜನೆಯಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net