VIDEO| ಶಿವಣ್ಣ, ದರ್ಶನ್, ಯಶ್, ಪುನೀತ್, ಉಪೇಂದ್ರ, ಧ್ರುವ ಅಭಿಮಾನಿಗಳಿಗೆ ಅರ್ಜುನ್ ಸರ್ಜಾ ಕೇಳಿಕೊಂಡಿದ್ದೇನು??

Arjun
Published on

ಬೆಂಗಳೂರು: ನಟ ಅರ್ಜುನ್ ಸರ್ಜಾ ಕರೊನಾ‌ ಹಿನ್ನೆಲೆಯಲ್ಲಿ ಮನೆಯಲ್ಲೇ ಲಾಕ್‌ಡೌನ್ ಆಗಿದ್ದಾರೆ. ಅಷ್ಟೇ ಅಲ್ಲ ಸಾಧ್ಯವಾದಷ್ಟು ಮನೆಯಿಂದ ಯಾರೂ ಆಚೆ ಬರಬೇಡಿ ಎಂ‌ಬ ಸಂದೇಶವನ್ನು ಮನೆಯಿಂದಲೇ‌ ವಿಡಿಯೋ ಮೂಲಕ ಕಳುಹಿಸಿದ್ದಾರೆ. ಸುದೀರ್ಘ ಆರು ನಿಮಿಷದ ವಿಡಿಯೋ ಮಾಡಿ ಕನ್ನಡದ ಸ್ಟಾರ್ ನಟರ ಅಭಿಮಾನಿಗಳಿಗೆ ಸಂದೇಶವನ್ನೂ ರವಾನಿಸಿದ್ದಾರೆ.

'ಬೆಂಗಳೂರು ಲಾಕ್ ಡೌನ್ ಆಗಿದೆ. ಭಾರತ ಬಂದ್ ಆಗಿದೆ. ಇಡೀ ವಿಶ್ವವೇ ಶಾಂತವಾಗಿದೆ. ಇಂಥ ಪರಿಸ್ಥಿತಿಯಲ್ಲಿ ನಾವೆಲ್ಲರೂ ಇರುವಾಗ, ಯಾಕೆ ಇದನ್ನು ಯಾರೂ ಗಂಭೀರವಾಗಿ ಪರಿಗಣಿಸುತ್ತಿಲ್ಲ. 22ರಂದು ಕರ್ಫ್ಯೂ ಜಾರಿ ಮಾಡಿದಾಗ ಅದನ್ನು ಆಚರಣೆ‌ ಮಾಡಿ, ಮಾರನೇ ದಿನ ಎಲ್ಲವೂ ಮುಗಿಯಿತು ಎಂಬಂತೆ ಹೊರಬಂದರೆ ಹೇಗೆ? ದಯಮಾಡಿ ಪರಿಸ್ಥಿತಿ ಅರ್ಥ ಮಾಡಿಕೊಳ್ಳಿ. ಈ ಕ್ಷಣದಿಂದ ಮನೆಯಿಂದ ಯಾರೂ ಆಚೆ‌ ಬರಬೇಡಿ.

ಮುಖ್ಯವಾಗಿ ನಾನೂ‌ ಒಬ್ಬ ಸಿನಿಮಾದವನಾಗಿ ರಾಜಕುಮಾರ್, ವಿಷ್ಣುವರ್ಧನ್, ಅಂಬರೀಶ್, ಶಂಕರ್ ನಾಗ್, ಶಿವಣ್ಣ, ದರ್ಶನ್, ಪುನೀತ್, ಯಶ್, ಧ್ರುವ ಇವರೆಲ್ಲರ ಅಭಿಮಾನಿಗಳೆಲ್ಲರೂ ಒಟ್ಟಾದರೆ ಅರ್ಧ ರಾಜ್ಯವಾಗುತ್ತದೆ. ಹಾಗಾಗಿ ಅವರೆಲ್ಲರೂ ತಮ್ಮ ತಮ್ಮ ಫೇಸ್ ಬುಕ್, ವಾಟ್ಸಾಪ್ ಗಳಲ್ಲಿ ಕರೊನಾ ಬಗ್ಗೆ ಜಾಗೃತಿ ಮೂಡಿಸಿ. ಸರಪಳಿಯನ್ನು ತುಂಡರಿಸಿ' ಎಂದಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net