

ನವದೆಹಲಿ: ಯುವ ಜಿಮ್ನಾಸ್ಟ್ ಅರಿಹಾ ಪಂಗಂಬಂ (
Ariha Pangambam
) ಪ್ರತಿಷ್ಠಿತ ಏರೋಬಿಕ್ ಜಿಮ್ನಾಸ್ಟಿಕ್ಸ್ ಏಷ್ಯನ್ ಚಾಂಪಿಯನ್ಷಿಪ್ನಲ್ಲಿ (
Asian aerobic gymnastics
) ಚಿನ್ನದ ಪದಕ ಗೆದ್ದ ಮೊದಲ ಭಾರತೀಯರೆನಿಸಿದ್ದಾರೆ. ಅವರು ಸೀನಿಯರ್ ಮಹಿಳಾ ವೈಯಕ್ತಿಕ ವಿಭಾಗದಲ್ಲಿ ಈ ಸಾಧನೆ ಮಾಡಿದ್ದಾರೆ.
ಫಿಲಿಪ್ಪಿನ್ಸ್ನಲ್ಲಿ ನಡೆದ ಕೂಟದಲ್ಲಿ ಮಣಿಪುರದ ಅರಿಹಾ ಫೈನಲ್ ಸ್ಪರ್ಧೆಯಲ್ಲಿ 19.100 ಅಂಕ ಗಳಿಸಿ ಅಗ್ರಸ್ಥಾನ ಪಡೆದರು. ಅವರು ಕಲಾತ್ಮಕತೆಗೆ 8.650, ಕಾರ್ಯರೂಪತೆಗೆ 7.600 ಮತ್ತು ಬಿರುಸುತನಕ್ಕೆ 2.850 ಅಂಕ ಗಳಿಸಿದರು.