ಪರೀಕ್ಷೆ ದಿನ ಬದಲಿಸಲು ಒತ್ತಾಯಿಸಿ ಮನವಿ ಸಲ್ಲಿಕೆ

Oplus_131072
Oplus_131072
Published on

ರಾಣೆಬೆನ್ನೂರ: ಕರ್ನಾಟಕ ಲೋಕಸೇವಾ ಆಯೋಗ (ಕೆಪಿಎಸ್ಸಿ) ವಿವಿಧ ಇಲಾಖೆಗಳ ಗ್ರೂಪ್​ ಬಿ ವೃಂದದ ಹುದ್ದೆಗಳ ನೇಮಕಾತಿ ಪರೀಕ್ಷೆ ಹಾಗೂ ಕಾನೂನು ಪದವಿ ಪರೀಕ್ಷೆಗಳು ಒಂದೇ ದಿನ ಇರುವುದರಿಂದ ಸಿವಿಲ್​ ಪ್ರೊಸಿಜರ್​ ಸಂಹಿತೆಯ (ಸಿಪಿಸಿ) ವಿಷಯದ ಪರೀಕ್ಷೆಗಳನ್ನು ಮುಂದೂಡಲು ಒತ್ತಾಯಿಸಿ ಭಾರತ ವಿದ್ಯಾಥಿರ್ ಫೆಡರೇಷನ್​ (ಎಸ್​ಎಫ್​ಐ) ಕಾನೂನು ವಿದ್ಯಾಥಿರ್ಗಳ ಟಕದ ವತಿಯಿಂದ ಆರ್​ಟಿಇಎಸ್​ ಕಾನೂನು ಮಹಾವಿದ್ಯಾಲಯದ ಪ್ರಾಚಾರ್ಯ ರಮೇಶ ಬಿ. ಮೂಲಕ ಹುಬ್ಬಳ್ಳಿ ಕರ್ನಾಟಕ ಕಾನೂನು ವಿಶ್ವವಿದ್ಯಾಲಯ ಕುಲಪತಿಗೆ ಮನವಿ ಸಲ್ಲಿಸಲಾಯಿತು.

ಸಂಟನೆಯ ಜಿಲ್ಲಾಧ್ಯಕ್ಷ ಬಸವರಾಜ ಎಸ್​. ಮಾತನಾಡಿ, ಕಾನೂನು ಪದವಿ ಕಾಲೇಜ್​ಗಳ ಸೆಮಿಸ್ಟರ್​ ಪರೀಕ್ಷೆಗಳು ಇದೇ ತಿಂಗಳು ಪ್ರಾರಂಭವಾಗಿವೆ. ಆದರೆ, ಕರ್ನಾಟಕ ಲೋಕಸೇವಾ ಆಯೋಗ (ಕೆಪಿಎಸ್ಸಿ) ವಿವಿಧ ಇಲಾಖೆಗಳ ಗ್ರೂಪ್​ 'ಬಿ' ವೃಂದದ ಹುದ್ದೆಗಳ ನೇಮಕಾತಿಯ ಅಭ್ಯಾಥಿರ್ಗಳಿಗೆ ಜ. 25ರಂದು ಸ್ಪರ್ಧಾತ್ಮಕ ಪರೀಕ್ಷೆ ನಡೆಯುತ್ತಿದ್ದು ಪರೀಕ್ಷೆ ಬರೆಯಲು ದೂರದ ಊರುಗಳಿಗೆ ಹೋಗಬೇಕಾಗಿದೆ.

ಎರಡ್ಮೂರು ದಿನಗಳು ಪ್ರಯಾಣ ಮಾಡುವುದರಿಂದ ಯಾವುದಾದರೂ ಒಂದು ಪರೀಕ್ಷೆ ಬರೆಯಲು ಸಾಧ್ಯವಾಗುತ್ತದೆ. ಮತ್ತೊಂದು ಪರೀಕ್ಷೆಗಳಿಂದ ವಂಚಿತರಾಗುವ ಗೊಂದಲ, ಭಯದ ವಾತಾವರಣದಲ್ಲಿ ವಿದ್ಯಾಥಿರ್ಗಳು ಸಿಲುಕಿದ್ದಾರೆ. ಆದ್ದರಿಂದ ಜ. 25ರಂದು ನಡೆಯಬೇಕಾದ ಸಿವಿಲ್​ ಪ್ರೊಸಿಜರ್​ ಸಂಹಿತೆಯ (ಸಿಪಿಸಿ) ವಿಷಯದ ಪರೀಕ್ಷೆಗಳನ್ನು ಮೂಂದುಡುವ ಮೂಲಕ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಪ್ರೋತ್ಸಾಹ ನೀಡಬೇಕು ಎಂದು ಒತ್ತಾಯಿಸಿದರು.

ಪ್ರಮುಖರಾದ ಶಿವರಾಜ ಹುಣಸಿಕಟ್ಟಿ, ಸುನಿಲ್​ ಬೆಂದ್ರೆ, ಮುತ್ತಯ್ಯ ಹೀರೆಮಠ, ಕಿರಣ ತುಮ್ಮಿನಕಟ್ಟಿ, ಕರಬಸಪ್ಪ ಎಚ್​., ರಾಹುಲ ರಟ್ಟಿಹಳ್ಳಿ, ಹನುಮಂತ ಹರಿಜನ, ಪುನೀತ ಎಸ್​. ಮತ್ತಿತರರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net