

ಬೆಂಗಳೂರು: ಪಾತ್ರೆ ತೊಳೆಯುವ ವಿಚಾರಕ್ಕೆ ಸ್ನೇಹಿತರ ನಡುವೆ ನಡೆದ ಗಲಾಟೆಯಲ್ಲಿ ವ್ಯಕ್ತಿಯೊಬ್ಬ ಬಿಯರ್ ಬಾಟಲ್ ನಿಂದ ಗೆಳೆಯನಿಗೆ ಇರಿದು ಪರಾರಿಯಾಗಿದ್ದಾನೆ.
ಕಲ್ಲು ಕುಮಾರ್ ಹಲ್ಲೆಗೊಳಗಾದ ಯುವಕ. ಬಂಡ್ ಕುಮಾರ್ ಹಲ್ಲೆ ಮಾಡಿದ ಆರೋಪಿ. ಬೆಂಗಳೂರಿನ ತಲ್ಲಘಟಪುರದಲ್ಲಿ ಈ ಘಟನೆ ನಡೆದಿದೆ.
ನಡೆದಿದ್ದೇನು?: ಕಲ್ಲು ಕುಮಾರ್ ಮತ್ತೆ ಬಂಡ್ ಕುಮಾರ್ ಇಬ್ಬರು ಸ್ನೇಹಿತರು. ನಿನ್ನೆ ರಾತ್ರಿ ಇಬ್ಬರು ಸೇರಿ ಪಾರ್ಟಿ ಮಾಡಿದ್ದಾರೆ. ಈ ವೇಳೆ ಪಾತ್ರೆ ತೊಳೆಯುವ ಕಾರಣಕ್ಕೆ ಕಿತ್ತಾಟ ನಡೆದಿದೆ. ಎಣ್ಣೆ ಅಮಲಿನಲ್ಲಿದ್ದ ಬಂಡ್ ಕುಮಾರ್ ಬಿಯರ್ ಬಾಟಲ್ ನಿಂದ ಕಲ್ಲು ಕುಮಾರ್ಗೆ ಇರಿದಿದ್ದಾನೆ.
ಹೊಟ್ಟೆ ಮತ್ತೆ ಕತ್ತಿಗೆ ಚಾಕು ಇರಿದಿದ್ದಾನೆ. ಸ್ನೇಹಿತನ ಮೇಲೆ ಹಲ್ಲೆ ಬಂಡ್ ಕುಮಾರ್ ಪರಾರಿಯಾಗಿದ್ದಾನೆ. ಗಾಯಾಳು ಕಲ್ಲು ಕುಮಾರ್ನನ್ನು ವಿಕ್ಟೋರಿಯಾ ಅಸ್ಪತೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ನಿನ್ನೆ ರಾತ್ರಿ ತಲ್ಲಘಟಪುರದ ಗಾಣಿಗೆರ ಪಾಳ್ಯದಲ್ಲಿ ಗಲಾಟೆ ನಡೆದಿದೆ. ತಲ್ಲಘಟಪುರದಲ್ಲಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.