ಮಳೆಗಾಲದಲ್ಲಿ ಆರೋಗ್ಯ ರಕ್ಷಣೆ ಹೇಗೆ ಎನ್ನುವ ಚಿಂತೆ ಇದ್ಯಾ? ಇಂತಿವೆ ಕೆಲವು ಸಲಹೆ, ಮುನ್ನೆಚ್ಚರಿಕೆಗಳು...

hand wash
Published on

ಬೆಂಗಳೂರು: ಮಳೆಗಾಲ ಶುರುವಾದೊಡನೆ ತೇವಾಂಶ ಹೆಚ್ಚಳದಿಂದ ಮನುಷ್ಯನ ದೇಹದಲ್ಲೂ ಅನೇಕ ಬದಲಾವಣೆಗಳು ಉಂಟಾಗುತ್ತವೆ. ಆಯುರ್ವೇದದ ಪ್ರಕಾರ, ಕಾಲಮಾನಗಳು ಬದಲಾದ ಹಾಗೆ ದೈಹಿಕವಾಗಿಯೂ ಬದಲಾವಣೆ ಉಂಟಾಗಿ, ಅನಾರೋಗ್ಯ ಕಾಣಿಸಿಕೊಳ್ಳುತ್ತದೆ. ಮನೆಯಲ್ಲಿ ನಿತ್ಯ ಬಳಕೆಯಲ್ಲಿರುವ ವಸ್ತುಗಳನ್ನು ಬಳಸಿ ಆರೋಗ್ಯ ರಕ್ಷಣೆ ಮಾಡಿಕೊಳ್ಳಬಹುದು. ಬನ್ನಿ ನಾವು ಇಂದು ನಿಮಗೆ ಮಳೆಗಾದಲ್ಲಿ ಹೇಗೆ ಆರೋಗ್ಯವನ್ನು ಕಾಪಾಡಿಕೊಳ್ಳಬೇಕು ಎನ್ನುವ ಮಾಹಿತಿ ನೀಡುತ್ತೇವೆ.

ಮಳೆಗಾಲದಲ್ಲಿ ವಾತಾವರಣ ಬದಲಾಗುತ್ತಿದ್ದಂತೆ, ಶೀತ ನೆಗಡಿ, ಜ್ವರ. ಅತಿಸಾರದಂತಹ ಆರೋಗ್ಯ ಸಮಸ್ಯೆಗಳು ಬಾಧಿಸುತ್ತವೆ. ನಿಂತ ನೀರಿನಲ್ಲಿ ಸೊಳ್ಳೆಗಳು ಸಂತಾನ ಉತ್ಪತ್ತಿಯಾಗಿ ಮಲೇರಿಯಾ, ಟೈಫಾಯ್ಡ್‌, ಇವೇ ಮೊದಲಾದ ಕಾಯಿಲೆಗಳು ಕಾಣಿಸಿಕೊಳ್ಳುತ್ತವೆ.

ಟ್ಯಾಪ್ ನೀರಿನ ಬಳಕೆ ತಪ್ಪಿಸಿ: ಕೊಳಕು ನೀರಿನ ಅಪಾಯವನ್ನು ಕಡಿಮೆ ಮಾಡಲು ನೇರವಾಗಿ ಟ್ಯಾಪ್ ನೀರನ್ನು ಕುಡಿಯಲು ಬಳಸಬಾರದು. ಟ್ಯಾಪ್​ ಬಳಕೆ ಅನಿವಾರ್ಯವಾದಲ್ಲಿ ಸ್ವಚ್ಛತೆ ಕಾಪಾಡಿಕೊಳ್ಳಿ.

ಕೈ ಸ್ವಚ್ಛತೆ ಬಗ್ಗೆ ಇರಲಿ ಗಮನ : ಊಟಕ್ಕೆ ಮೊದಲು, ಹೊರಗಿನಿಂದ ಮನೆಗೆ ಬಂದ ನಂತರ, ವಾಶ್‌ರೂಮ್ ಬಳಸಿದ ನಂತರ ಕೈಗಳನ್ನು ತೊಳೆಯಿರಿ.

ಹಣ್ಣುಗಳು, ತರಕಾರಿ, ಸೊಪ್ಪು ತೊಳೆದು ಬಳಸಿ: ಅನೇಕರು ಹಣ್ಣುಗಳು, ತರಕಾರಿ, ಸೊಪ್ಪು ತೊಳೆದು ಬಳಸಿ ಮಾರಾಟಗಾರರಿಂದ ಖರೀದಿಸುತ್ತಾರೆ. ಆದರೆ ತರಕಾರಿಗಳು ಎಷ್ಟೇ ತಾಜಾವಾಗಿ ಕಂಡರೂ ಕೂಡಾ ತೊಳೆದು ಉಪಯೋಗಿಸಬೇಕು.

ಸುತ್ತಮುತ್ತಲಿನ ಪರಿಸರ ಸ್ವಚ್ಛವಾಗಿಟ್ಟುಕೊಳ್ಳಿ: ಮನೆಯ ಸುತ್ತಮುತ್ತು ಗುಂಡಿಗಳಿದ್ದರೆ ನೀರು ನಿಲ್ಲುವ ಸಾಧ್ಯತೆ ಇದರುತ್ತದೆ. ಸೊಳ್ಳೆಗಳ ಸಂತಾನೋತ್ಪತ್ತಿ ತಪ್ಪಿಸಲು ಸುತ್ತಮುತ್ತಲಿನ ಪರಿಸರವನ್ನು ಸ್ವಚ್ಛವಾಗಿಡಿ.

ಕೀಟಗಳ ಕಡಿತವನ್ನು ತಡೆಗಟ್ಟಲು ದೇಹವನ್ನು ಮುಚ್ಚುವ ಬಟ್ಟೆಗಳನ್ನು ಧರಿಸಿ. ಅಲ್ಲದೆ, ಮಲೇರಿಯಾ ಮತ್ತು ಡೆಂಗ್ಯೂ ತಡೆಗಟ್ಟಲು ಸೊಳ್ಳೆ ನಿವಾರಕಗಳನ್ನು ಬಳಸಿ. ಮಳೆಗಾಲದಲ್ಲಿ ಹೊರಗೆ ಹೋಗಿ ಮನೆಗೆ ಮರಳಿದ ನಂತರ ಪಾದಗಳನ್ನು ತೊಳೆಯಿರಿ. ಈಜು ಅಥವಾ ಸ್ನಾನದ ನಂತರ ದೇಹವನ್ನು ಸಂಪೂರ್ಣವಾಗಿ ಒಣಗಿಸುವುದು ಉತ್ತಮ.

ಹೈಡ್ರೇಟೆಡ್ ಆಗಿರಿ: ಗಿಡಮೂಲಿಕೆ ಚಹಾಗಳು ಮತ್ತು ಬೆಚ್ಚಗಿನ ಹಾಲಿನಂತಹ ಪಾನೀಯಗಳನ್ನು ಕುಡಿಯಿರಿ. ಆಹಾರದಲ್ಲಿ ಋತುಮಾನದ ಹಣ್ಣುಗಳನ್ನು ಹೆಚ್ಚಿಸಿ. ಬೀದಿ ಆಹಾರವನ್ನು ತಪ್ಪಿಸಿ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net