

phone; ಇತ್ತೀಚಿನ ದಿನಗಳಲ್ಲಿ ನಾವೆಲ್ಲರೂ ವ್ಯಕ್ತಿ-ವ್ಯಕ್ತಿಗಳ ನಡುವೆ ಸಮಯ ಕಳೆಯುವುದಕ್ಕಿಂತ ಹೆಚ್ಚಾಗಿ ಮೊಬೈಲ್ ಬಳಕೆಗೆ ದಾಸರಾಗಿಬಿಟ್ಟಿದ್ದೀವಿ. ಸಿನಿಮಾ ನೋಡುವುದು, ಇಂಟರ್ನೆಟ್ ಕೆಲಸ, ರೀಲ್ಸ್ ನೋಡುವುದು, ರೀಲ್ಸ್ ಮಾಡುವುದನ್ನು ಸೇರಿದಂತೆ ಬಹುತೇ ನಮ್ಮ ನಿತ್ಯದ ಕೆಲಸವನ್ನು ಈ ಮೊಬೈಲ್ ಮೂಲಕವೇ ಮಾಡುತ್ತಿದ್ದೇವೆ. ಅಂದಹಾಗೆ ನಾವು ಮೊಬೈಲ್ಅನ್ನು ಎಷ್ಟು ಪ್ರಮಾಣದಲ್ಲಿ ಬಳಕೆ ಮಾಡುತ್ತೀವೋ ಅಷ್ಟೇ ಮುಖ್ಯವಾಗಿ ಅದರಲ್ಲಿರುವ ಬ್ಯಾಟರಿ ಚಾರ್ಜ್ ಬಗ್ಗೆಯೂ ಗಮನ ಹರಿಸುತ್ತೇವೆ.
ನೀವು ಪದೇ ಪದೇ 100 ಪ್ರತಿಶತ ಚಾರ್ಜ್ ಮಾಡಿದರೆ ಅಥವಾ 100 ಪ್ರತಿಶತ ಚಾರ್ಜ್ ಆದ ನಂತರವೂ ಚಾರ್ಜ್ ಮಾಡುತ್ತಿದ್ದರೆ, ಬ್ಯಾಟರಿಯೊಳಗೆ ಶಾಖ ಹೆಚ್ಚಾಗುತ್ತದೆ. ಇದು ಬ್ಯಾಟರಿ ಸಾಮರ್ಥ್ಯವನ್ನು ನಿಧಾನವಾಗಿ ಕಡಿಮೆ ಮಾಡುತ್ತದೆ. ಅನೇಕ ಕಂಪನಿಗಳು ನಿಮ್ಮ ಫೋನ್ ಅನ್ನು 80 ಪ್ರತಿಶತಕ್ಕೆ ಚಾರ್ಜ್ ಮಾಡಲು ಶಿಫಾರಸು ಮಾಡಿವೆ.
ಇನ್ನೂ ನಿಮ್ಮ ಫೋನ್‌ನ ಬ್ಯಾಟರಿಯನ್ನು 100% ಚಾರ್ಜ್ ಮಾಡುವ ಬಗ್ಗೆ ನೋಡುವುದಾದರೆ, ನಾವು ಆಧುನಿಕ ಸ್ಮಾರ್ಟ್‌ಫೋನ್‌ಗಳಲ್ಲಿ ಲಿಥಿಯಂ-ಐಯಾನ್ ಬ್ಯಾಟರಿಗಳನ್ನು ಬಳಸುತ್ತವೆ. ಇವುಗಳನ್ನು 100% ಚಾರ್ಜ್ ಮಾಡುವುದು ಸಾಮಾನ್ಯವಾಗಿ ಸುರಕ್ಷಿತವಾಗಿದ್ದರೂ, ಕೆಲವು ಸಲಹೆಗಳನ್ನು ಪಾಲಿಸುವುದು ಬಹಳ ಮುಖ್ಯವಾಗಿರುತ್ತದೆ.
ಆಧುನಿಕ ಫೋನ್‌ಗಳು ಸ್ಮಾರ್ಟ್ ಚಾರ್ಜಿಂಗ್ ವ್ಯವಸ್ಥೆಯನ್ನು ಹೊಂದಿವೆ. ಇದು 100% ತಲುಪಿದ ನಂತರ ಓವರ್ಚಾರ್ಜಿಂಗ್ಅನ್ನು ತಡೆಯುತ್ತದೆ. ಆದರೆ ಫೋನ್‌ನ ಬ್ಯಾಟರಿಯನ್ನು ಯಾವಾಗಲೂ 100% ಚಾರ್ಜ್‌ನಲ್ಲಿ ಇಡುವುದು ಅಥವಾ ರಾತ್ರಿಯಿಡೀ ಚಾರ್ಜರ್‌ಗೆ ತಗಲಾಕಿಕೊಂಡಿರುವುದರಿಂದ ಬ್ಯಾಟರಿಗೆ ಹಾನಿಕಾರಕವಾಗಬಹುದು.
ಲಿಥಿಯಂ-ಐಯಾನ್ ಬ್ಯಾಟರಿಗಳಿಗೆ 20% ರಿಂದ 80% ರವರೆಗಿನ ಚಾರ್ಜ್ ಶ್ರೇಣಿಯನ್ನು ಕಾಪಾಡಿಕೊಳ್ಳುವುದು ಒಳ್ಳೆಯದು. ಇದು ಬ್ಯಾಟರಿಯ ಒತ್ತಡವನ್ನು ಕಡಿಮೆ ಮಾಡಿ, ದೀರ್ಘಾವಧಿಯವರೆಗೆ ಬಳಕೆ ಬರಲು ಸಹಾಯ ಮಾಡುತ್ತದೆ.
ಫೋನ್‌ನ ಬ್ಯಾಟರಿಯನ್ನು ತೀವ್ರ ಶಾಖದಿಂದ ದೂರವಿಡಿ. ಚಾರ್ಜಿಂಗ್ ಸಮಯದಲ್ಲಿ ಫೋನ್ ತುಂಬಾ ಬಿಸಿಯಾದರೆ ಅಂತಹ ಸಮಯದಲ್ಲಿ ಬ್ಯಾಟರಿಯನ್ನು ಚಾರ್ಜಿಂಗ್ ಕೇಬಲ್ನಿಂದ ತೆಗೆದುಹಾಕಿ.
ಫಾಸ್ಟ್ ಚಾರ್ಜಿಂಗ್ ಅನುಕೂಲಕರವಾದರೂ, ಆಗಾಗ್ಗೆ ಬಳಸುವುದರಿಂದ ಬ್ಯಾಟರಿಯ ಮೇಲೆ ಸ್ವಲ್ಪ ಒತ್ತಡ ಬೀಳಬಹುದು. ಸಾಧ್ಯವಾದಾಗ ಸಾಮಾನ್ಯ ಚಾರ್ಜರ್ ಬಳಕೆ ಮಾಡಿ.
(ಏಜೆನ್ಸೀಸ್)
ಬಿಸಿ ಸ್ಥಳಗಳಲ್ಲಿ ಚಾರ್ಜ್ ಮಾಡಬೇಡಿ.
ರಾತ್ರಿಯಿಡೀ ನಿಮ್ಮ ಫೋನ್ ಅನ್ನು ಚಾರ್ಜ್‌ನಲ್ಲಿ ಇಡಬೇಡಿ.
ಫೋನ್ ಬಿಸಿಯಾದಾಗ ಚಾರ್ಜರ್‌ನಿಂದ ತೆಗೆದುಹಾಕಿ.
ಪದೇ ಪದೇ ವೇಗವಾಗಿ ಚಾರ್ಜಿಂಗ್ ಮಾಡುವುದನ್ನು ನಿಲ್ಲಿಸಿ.
ಯಾವಾಗಲೂ ಮೊಬೈಲ್ನ ಮೂಲ ಚಾರ್ಜರ್ ಬಳಸಿ
ಇತರ ಸಲಹೆಗಳು