

ಬೆಂಗಳೂರು: ಒಬ್ಬರಿಗೊಬ್ಬರು ಕಂಡರಾಗದ ಪಕ್ಷಗಳು ಐಎನ್ ಡಿಐಎ ಒಕ್ಕೂಟ ಸೇರಿಕೊಂಡಿವೆ. ಕಾಂಗ್ರೆಸ್, ಟಿಎಂಸಿ, ಸಿಪಿಐ ಸಿಪಿಎಂ, ಆಪ್ ಮುಂತಾದ ಪಕ್ಷಗಳು ಅಸಹಾಯಕವಾಗಿ ಒಕ್ಕೂಟ ಸೇರಿದವೆ ? ಎಂದು ಕಾಂಗ್ರೆಸ್ ಗೆ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಮರು ಪ್ರಶ್ನಿಸಿದ್ದಾರೆ.
ಜೆಡಿಎಸ್ ಜತೆಗೆ ಬಿಜೆಪಿ ಮೈತ್ರಿ ಚರ್ಚೆ ಕುರಿತು ಅಸಹಾಯಕ ಪಕ್ಷಗಳು ಎಂಬ ಕಾಂಗ್ರೆಸ್ ಟೀಕೆಗೆ ಬಿಜೆಪಿ ರಾಜ್ಯ ಕಚೇರಿಯಲ್ಲಿ ಸುದ್ದಿಗಾರರಿಗೆ ಪ್ರತಿಕ್ರಿಯಿಸಿದ ಬೊಮ್ಮಾಯಿ, ರಾಜಕಾರಣದ ಇತಿಹಾಸದಲ್ಲಿ ಅನೇಕ ಬದಲಾವಣೆಗಳಾಗಿವೆ. ಈ ಅನಿಷ್ಟ ಸರ್ಕಾರದ ವಿರುದ್ಧ ಹೋರಾಟ ಅವಶ್ಯಕತೆಯಿದೆ. ಹಾಗಾಗಿ ಮೈತ್ರಿ ಅನಿವಾರ್ಯ ಎಂದು ಸಮರ್ಥಿಸಿಕೊಂಡರು.
ತಮಿಳುನಾಡಿಗೆ ಇಂದಿನಿಂದ ಕಾವೇರಿ ನೀರು ಬಿಡುವುದಿಲ್ಲ ಎಂದು ಈಗಾಗಲೇ ರಾಜ್ಯ ಸರ್ಕಾರ ಸುಪ್ರೀಂ ಕೋರ್ಟ್ ಗೆ ಅಫಿಡವಿಟ್ ಸಲ್ಲಿಸಿದೆ. ಈ ನಿಲುವಿಗೆ ಅದೆಷ್ಟು ಗಟ್ಟಿಯಾಗಿ ನಿಲ್ಲುತ್ತಾರೆ ಕಾದು ನೋಡೋಣ. ಕಾವೇರಿ ರೈತರ ರಕ್ಷಣೆಗೆ ಬದ್ಧವಾಗಿರಬೇಕು ಎಂದು ಪ್ರತಿಪಕ್ಷವಾಗಿ ಬಿಜೆಪಿ ತನ್ನ ಒತ್ತಡ ತಂತ್ರ ಮುಂದುವರಿಸಲಿದೆ ಎಂದು ಬೊಮ್ಮಾಯಿ ಹೇಳಿದರು.