ಹೊಂದಾಣಿಕೆ ರಾಜಕಾರಣ ಮಾಡಲು ನಿಮ್ಮನ್ನು ರಾಜ್ಯಾಧ್ಯಕ್ಷರನ್ನಾಗಿ ನೇಮಿಸಿಲ್ಲ ಹುಷಾರ್; ವಿಜಯೇಂದ್ರ ವಿರುದ್ಧ Aravind Limbavali ವಾಗ್ದಾಳಿ

Aravind Limbavali
Published on

ಬೆಳಗಾವಿ: ಕಾಂಗ್ರೆಸ್​ ಪಕ್ಷದೊಂದಿಗೆ ಒಳೊಪ್ಪಂದ ಮಾಡಿಕೊಳ್ಳಲು ನಿಮ್ಮನ್ನು ರಾಜ್ಯಾಧ್ಯಕ್ಷರನ್ನಾಗಿ ನೇಮಿಸಿಲ್ಲ ಹುಷಾರ್​ ಎಂದು ಮಾಜಿ ಸಚಿವ ಅರವಿಂದ್​ ಲಿಂಬಾವಳಿ (Aravind Limbavali) ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ. ವಿಜಯೇಂದ್ರಗೆ (BY Vijayendra) ವಾರ್ನಿಂಗ್​ ಕೊಟ್ಟಿದ್ದಾರೆ.

ಬೆಳಗಾವಿ ನಗರದ ಗಾಂಧಿ ಭವನದಲ್ಲಿ ವಕ್ಫ್‌ ಮಂಡಳಿಯ ಭೂಕಬಳಿಕೆ ವಿರೋಧಿಸಿ, ಶಾಸಕ ಬಸನ್​ಗೌಡ ಪಾಟೀಲ್​ ಯತ್ನಾಳ ನೇತೃತ್ವದಲ್ಲಿ ಹಮ್ಮಿಕೊಂಡಿದ್ದ ಜನಜಾಗೃತಿ ಸಭೆಯನ್ನು ಉದ್ಧೇಶಿಸಿ ಮಾತನಾಡಿದ ಮಾಜಿ ಸಚಿವ ಅರವಿಂದ್​ ಲಿಂಬಾವಳಿ (Aravind Limbavali) ವಿಜಯೇಂದ್ರ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಕಾಂಗ್ರೆಸ್ ಪಕ್ಷ, ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಅವರೊಂದಿಗೆ ಹೊಂದಾಣಿಕೆ ರಾಜಕಾರಣ ಮಾಡಲು ನಿಮ್ಮನ್ನು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷರನ್ನಾಗಿ ಮಾಡಿಲ್ಲ. ಹುಷಾರ್​, ನಿಮ್ಮ ಹೊಂದಾಣಿಕೆ ರಾಜಕಾರಣದಿಂದ ವಿರೋಧ ಪಕ್ಷಕ್ಕೆ ಬಂದಿದ್ದೇವೆ. ಮುಂದಿನ ದಿನಗಳಲ್ಲಿ ನೀವು ಏನೇನು ಹೊಂದಾಣಿಕೆ ಮಾಡಿಕೊಂಡಿದ್ದೀರಿ ಎಂದು ಹೇಳುತ್ತೇನೆ.

ವಕ್ಫ್‌ ಮಂಡಳಿಯ ಭೂಕಬಳಿಕೆ ವಿರುದ್ಧದ ಹೋರಾಟ ಜನಪರವಾದದ್ದು. ಇದರ ನೇತೃತ್ವ ವಹಿಸಿದ ಬಸನಗೌಡ ಪಾಟೀಲ್​ ಯತ್ನಾಳ್​ ಅವರನ್ನು ಪಕ್ಷದಿಂದ ಉಚ್ಚಾಟಿಸುತ್ತೇನೆ ಎಂದು ಹೇಳುತ್ತೀರಾ. ರಾಜ್ಯದಲ್ಲಿ ಉಪಚುನಾವಣೆ ಮುಗಿದು ಬಹಳ ದಿನಗಳಾಯಿತು. ಇನ್ನಾದರೂ ನಮ್ಮ ಜತೆಗೆ ಸೇರಿಕೊಂಡು, ವಕ್ಫ್‌ ಮಂಡಳಿ ವಿರುದ್ಧ ರಸ್ತೆಗಿಳಿದು ಹೋರಾಟಕ್ಕೆ ಬನ್ನಿ. ನಮ್ಮೊಂದಿಗೆ ಬರಲು ಇಷ್ಟ ಇಲ್ಲದಿದ್ದರೆ ನೀವೇ ಪ್ರತ್ಯೇಕವಾಗಿ ಹೋರಾಡಿ.

Aravind Limbavali

ಬೀದರ್​ದಿಂದ ವಕ್ಫ್​ ಹೋರಾಟ ಮಾಡುತ್ತಿದ್ದೇವೆ. ನಮಗೆ ಕೆಲವರು ಬೆಂಗಳೂರಿನಲ್ಲಿ ಕುಳಿತು ಪಕ್ಷ ವಿರೋಧಿ ಕೆಲಸ ಅಂತಿದ್ದಾರೆ. ನಾವು ಪಕ್ಷ ವಿರೋಧಿ ಕೆಲಸ ಮಾಡುತ್ತಿದ್ದೇವಾ‌ ನಾವು ಜನಪರ ಹೋರಾಟ ಮಾಡುತ್ತಿದ್ದೇವೆ ನೀವೇನೂ ಮಾಡುತ್ತಿದ್ದೀರಿ. ಉಪ ಚುನಾವಣೆ ಸೋತ ಮೇಲೆ ಇದನ್ನ ಗಂಭೀರವಾಗಿ ತಗೊಂಡಿಲ್ಲ ಅಂತಾ ಹೇಳ್ಳುತ್ತಾರೆ. ಚುನಾವಣೆ ರಾಜಕೀಯ ಪಕ್ಷಕ್ಕೆ ಗಂಭೀರ ಅಲ್ಲಾ ಅನ್ನೋದಕ್ಕೆ ಏನೂ ಹೇಳಬೇಕು. ಪಕ್ಷ ಕಟ್ಟಿದವರು ನಾವು, ಯತ್ನಾಳ್ ಅವರನ್ನ ಉಚ್ಚಾಟನೆ ಮಾಡಿಸುತ್ತೇವೆ ಅಂತಾರೆ. ಜನರ ಪರವಾಗಿ ನಾವು ಧ್ವನಿ ಎತ್ತುತ್ತಿದ್ದೇವೆ. ಇದಕ್ಕೆ ಜನ ವಿರೋಧಿ ಎಂದಿ ಹೇಳುತ್ತೀರಾ, ಇದಕ್ಕೆ ನಗಬೇಕಾ ಅಳಬೇಕಾ ಗೊತ್ತಾಗುತ್ತಿಲ್ಲ.

ಜನಪರ‌ವಾಗಿ ಕೆಲಸ ಮಾಡಲೆಂದು ನಿಮ್ಮನ್ನು ಅಧ್ಯಕ್ಷರನ್ನಾಗಿ ನೇಮಿಸಿದ್ದರೆ, ನೀವು ಹಾದಿಬೀದಿಯಲ್ಲಿ ನಿಂತು ಮಾತನಾಡುತ್ತೀರಾ. ನಾವು ಹಾದಿಬೀದಿಯಲ್ಲಿ ನಿಂತು ಹೇಳಿಕೆ ಕೊಡುತ್ತಿಲ್ಲ. ಬೆಂಗಳೂರಿನಲ್ಲಿ ಕುಳಿತು ನೀವೇ ಗೊಂದಲ ಸೃಷ್ಟಿಸುತ್ತಿದ್ದೀರಿ. ಇದು ಪಕ್ಷಕ್ಕೂ ಹಾಗೂ ನಿಮಗೂ ಗೌರವ ತರುವುದಿಲ್ಲ. ತಾವು ಚುನಾವಣೆಯಲ್ಲಿ ಏನೇನು ಮಾಡಿದ್ದೀರಿ ಎಂದು ಹೇಳುವ ಸಂದರ್ಭ ಇದಲ್ಲ. ಜನರು ಬಿಜೆಪಿ ಮೇಲೆ ನಂಬಿಕೆ ಇಟ್ಟಿದ್ದಾರೆ. ನೀವು ಜನರ ಜತೆಗೆ ಹೋರಾಟಕ್ಕೆ ಇಳಿಯಿರಿ. ಆಗ ಶಹಬ್ಬಾಸ್‌ ಎನ್ನುತ್ತೇವೆ ಎಂದು ಮಾಜಿ ಸಚಿವ ಅರವಿಂದ್​ ಲಿಂಬಾವಳಿ (Aravind Limbavali) ವಿಜಯೇಂದ್ರ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

https://www.vijayavani.net/brahmagantu-fame-actress-shobitha-shivanna-suicide

https://www.vijayavani.net/after-failing-exam-man-roams-around-wearing-fake-army-uniform-in-gujarat

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net