

ಬೆಂಗಳೂರು: ರಾಜ್ಯದ ಗೃಹ ಮಂತ್ರಿ ಅರಗ ಆರಗ ಜ್ಞಾನೇಂದ್ರ ಮಾಲಾಧಾರಿಯಾಗಿ ಇರುಮುಡಿ ಹೊತ್ತ ಶಬರಿಮಲೆ ಸ್ವಾಮಿ ಅಯ್ಯಪ್ಪ ಸ್ವಾಮಿಯ ದರ್ಶನ ಪಡೆದಿದ್ದಾರೆ. 6 ವರ್ಷಗಳ ಹಿಂದೆ ಶಬರಿಮಲೆ ಯಾತ್ರೆ ಮಾಡುವ ಸಂಕಲ್ಪ ತೊಟ್ಟಿದ್ದರು. ಸಂಕಲ್ಪದಂತೆ ಇದೀಗ ಆರಗ ಜ್ಞಾನೇಂದ್ರ, ಈ ವರ್ಷ ಅಯ್ಯಪ್ಪ ಸ್ವಾಮಿ ದರ್ಶನಕ್ಕೆ ಇರುಮುಡಿ ಹೊತ್ತು ತೆರಳಿದ್ದಾರೆ.
ಲಕ್ಷಾಂತರ ಹಿಂದೂಗಳ ಶ್ರದ್ಧಾ ಕೇಂದ್ರ, ಪವಿತ್ರ ಕ್ಷೇತ್ರ ಶಬರಿ ಮಲೆಗೆ ಭೇಟಿ ನೀಡುವ ನನ್ನ ಬಹುಕಾಲದ ಸಂಕಲ್ಪ ಈಗ ಸಾಕಾರವಾಗಿದೆ. ನನ್ನ ಕೆಲವು ಮಿತ್ರರೊಂದಿಗೆ ಅಯ್ಯಪ್ಪ ಸ್ವಾಮಿಯ ದರ್ಶನಕ್ಕೆ ಇರುಮುಡಿಯೊಂದಿಗೆ ಪ್ರಯಾಣ ಬೆಳೆಸಿದೆ ಎಂದು ಅರಗ ಜ್ಞಾನೇಂದ್ರ ಫೋಟೋ ಹಂಚಿಕೊಂಡು ಟ್ವೀಟ್ ಮಾಡಿದ್ದಾರೆ.
ಕೇರಳದಲ್ಲಿರುವ ಶಬರಿಮಲೆ ದೇವಸ್ಥಾನಕ್ಕೆ ದೇಶದ ಮೂಲೆಮೂಲೆಯಿಂದ ಲಕ್ಷಾಂತರ ಭಕ್ತರು ಆಗಮಿಸುತ್ತಾರೆ. ವಿವಿಧ ಕ್ಷೇತ್ರಗಳ ಗಣ್ಯರು ಸಹಿತ ಅಯ್ಯಪ್ಪನ ದರ್ಶನಕ್ಕೆ ಇರುಮುಡಿ ಹೊತ್ತು ಬರುತ್ತಾರೆ. ಮಕರ ಸಂಕ್ರಾಂತಿಯ ಸಂದರ್ಭದಲ್ಲಿ ಜ್ಯೋತಿ ದರ್ಶನ ಪಡೆಯಲೆಂದೇ ಸಾಕಷ್ಟು ಸಂಖ್ಯೆಯಲ್ಲಿ ಶಬರಿಮಲೆಗೆ ಬರುತ್ತಾರೆ. ಕಳೆದ ಭಾನುವಾರ(ಜ.15) ಈ ಬಾರಿ ಜ್ಯೋತಿ ದರ್ಶನವಾಗಿತ್ತು. ಇದೀಗ ಸಂಕ್ರಾಂತಿ ಕಳೆಯುತ್ತಿದ್ದಂತೆ ಆಪ್ತರ ಜತೆಗೆ ಅರಗ ಜ್ಞಾನೇಂದ್ರ ಶಬರಿಮಲೆಗೆ ತೆರಳಿದ್ದಾರೆ.