ನನ್ನ ತಂದೆಯ ಬಗ್ಗೆ ಸುಳ್ಳು ಪ್ರಚಾರ ಮಾಡುವುದನ್ನು ನಿಲ್ಲಿಸಿ! AR Rahman ಮಗಳು ಖತೀಜಾ ರೆಹಮಾನ್

AR Rahman
Published on

AR Rahman:  ಇತ್ತೀಚೆಗೆ ದಾಂಪತ್ಯ ಜೀವನಕ್ಕೆ ಅಂತ್ಯ ಹಾಡಿರುವ ಎಆರ್ ರೆಹಮಾನ್ ಸಂಗೀತ ಕ್ಷೇತ್ರದಿಂದ ಸ್ವಲ್ಪ ಕಾಲ ದೂರ ಉಳಿಯಲಿದ್ದಾರೆ ಎಂದು ಕೆಲವು ಮಾಧ್ಯಮಗಳಲ್ಲಿ ಸುದ್ದಿ ಹಬ್ಬಿತ್ತು. ಎಆರ್ ರೆಹಮಾನ್ ವಿರುದ್ಧ ನಡೆಯುತ್ತಿರುವ ಅಪಪ್ರಚಾರವನ್ನು ಮಗಳು ಖತೀಜಾ ರೆಹಮಾನ್  ನಿರಾಕರಿಸಿದ್ದಾಳೆ.

ಎಆರ್ ರೆಹಮಾನ್ ಸಂಗೀತದಿಂದ ದೂರವಾಗಲಿದ್ದಾರೆ ಎಂಬ ವದಂತಿಯಲ್ಲಿ ಯಾವುದೇ ಸತ್ಯಾಂಶವಿಲ್ಲ ಎಂದು ಖತೀಜಾ ರೆಹಮಾನ್ ಸ್ಪಷ್ಟಪಡಿಸಿದ್ದಾರೆ. ಅವೆಲ್ಲವೂ ವದಂತಿಗಳು.. ತನ್ನ ತಂದೆ ಎಆರ್ ರೆಹಮಾನ್ ಅವರ ವೃತ್ತಿಜೀವನದ ಬಗ್ಗೆ ಇಂತಹ ಸುಳ್ಳು ಪ್ರಚಾರವನ್ನು ನಿಲ್ಲಿಸುವಂತೆ ಅವರು ಮಾಧ್ಯಮಗಳಿಗೆ ಮನವಿ ಮಾಡಿದರು.

&

nbsp;

ಮೂಲಗಳ ಮಾಹಿತಿ ಎಂಬ ಪದವನ್ನು ಬಳಸಿ ನಿಮಗೆ ಇಷ್ಟವಾದಂತೆ ಸುದ್ದಿ ಪ್ರಕಟಿಸಲು ಯಾವುದೇ ಕಾರಣವಿಲ್ಲ ಎಂದು ಖತೀಜಾ ರೆಹಮಾನ್ ಹೇಳಿದ್ದಾರೆ. ಈ ಹಿಂದೆ ಎಆರ್ ರೆಹಮಾನ್ ಮದುವೆ ಬಗ್ಗೆ ವದಂತಿಗಳು ಹಬ್ಬಿದಾಗಲೂ ಖತೀಜಾ 'ಎಕ್ಸ್' ವೇದಿಕೆಯಲ್ಲಿ ಪ್ರತಿಕ್ರಿಯಿಸಿದ್ದಾರೆ.

1995 ರಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಎಆರ್ ರೆಹಮಾನ್ ಮತ್ತು ಸೈರಾ ಬಾನು ಈ ವರ್ಷದ ನವೆಂಬರ್‌ನಲ್ಲಿ ತಮ್ಮ ಪ್ರತ್ಯೇಕತೆಯನ್ನು ಖಚಿತಪಡಿಸಿದರು. ದಂಪತಿ  ಜಂಟಿ ಹೇಳಿಕೆಯನ್ನು ಬಿಡುಗಡೆ ಮಾಡಿದರು ಮತ್ತು ಅವರು ಬೇರೆಯಾಗಲು ನಿರ್ಧರಿಸಿದ್ದಾರೆ ಎಂದು ಬಹಿರಂಗಪಡಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net