'ಸಲಾರ್' ಮತ್ತು 'ಡಂಕಿ' ದಿನವೇ ರಿಲೀಸ್​ ಆಗಲಿದೆ ಮತ್ತೊಂದು ಸಿನಿಮಾ!

Untitled design - 2023-10-28T090421.489
Published on

ಮುಂಬೈ: ವರ್ಷದ ಕೊನೆ ತಿಂಗಳ ಕ್ರಿಸ್‌ಮಸ್ ಹಬ್ಬದಂದು ಭಾರತೀಯ ಚಿತ್ರರಂಗದ ಸ್ಟಾರ್​ ನಟರ ಸಿನಿಮಾಗಳು ಸಿನಿಪ್ರೇಕ್ಷಕರಿಗೆ ಮನರಂಜನೆಯ ಮಹಾಪೂರವನ್ನೇ ಹರಿಸಲು ರಿಲೀಸ್​ ದಿನಾಂಕದೊಂದಿಗೆ ಈಗಾಗಲೇ ಬಿಡುಗಡೆಗೆ ತಯಾರಿ ನಡೆಸುತ್ತಿದೆ. ಈ ನಡುವೆ ಡಿ.22 ರಂದು ಶಾರೂಖ್ ಖಾನ್​​ ಅಭಿನಯದ 'ಡಂಕಿ' ಹಾಗೂ ಪ್ರಭಾಸ್​ ನಟನೆಯ 'ಸಲಾರ್'​ ದಿನವೇ ಮತ್ತೊಂದು ಹಾಲಿವುಡ್​ ಸಿನಿಮಾ ಬಿಡುಗಡೆಗೊಳ್ಳಲು ಸಜ್ಜಾಗಿದೆ.

ಪ್ರಭಾಸ್‌ನ 'ಸಲಾರ್' ಮತ್ತು ಶಾರುಖ್ ಖಾನ್‌ ಅವರ 'ಡಂಕಿ' ಸಿನಿಮಾಗಳು ತಮ್ಮ ಜಾಗತಿಕ ರಿಲೀಸ್​ ಡೇಟ್​ ಅನ್ನು ಸದ್ಯ ಅಧಿಕೃತಗೊಳಿಸಿದೆ. ಇದರ ಬೆನ್ನಲ್ಲೇ ಹಾಲಿವುಡ್​ನ 'ಅಕ್ವಾಮನ್ ಅಂಡ್​ ದಿ ಲಾಸ್ಟ್ ಕಿಂಗ್ಡಮ್' ಈ ಎರಡು ಚಿತ್ರದೊಂದಿಗೆ ರಿಲೀಸ್​ ಆಗುವ ಮುಖೇನ ಬಾಕ್ಸ್​ ಆಫೀಸ್​ನಲ್ಲಿ ಭಾರೀ ಪೈಪೋಟಿ ಕೊಡಲು ರೆಡಿಯಾಗಿದೆ. ಆರಂಭದಲ್ಲಿ ಡಿಸೆಂಬರ್ 20 ರಂದು ಥಿಯೇಟರ್‌ಗಳಿಗೆ ಬರಬೇಕಿದ್ದ ಆಕ್ವಾಮ್ಯಾನ್, ಇದೀಗ ಡಿಸೆಂಬರ್ 22ಕ್ಕೆ ಬಿಡುಗಡೆ ದಿನಾಂಕವನ್ನು ಮುಂದೂಡಿದೆ.

ಅಮೆರಿಕಾದಲ್ಲಿ ಇದರ ಪರಿಣಾಮವು ಸ್ವಲ್ಪ ಹೆಚ್ಚಾಗಿರಬಹುದು. ಕಾರಣ ಭಾರತೀಯ ಚಲನಚಿತ್ರಗಳಿಗೆ ಆದಾಯದ ಪ್ರಮುಖ ಭಾಗವು ಈ ಪ್ರದೇಶದಿಂದ ಬರುತ್ತದೆ. ರಾಜ್‌ಕುಮಾರ್ ಹಿರಾನಿ ನಿರ್ದೇಶಿಸುತ್ತಿರುವ ಶಾರೂಖ್​ ಖಾನ್​ ಅಭಿನಯದ ಡಂಕಿ ಮತ್ತು ಪ್ರಶಾಂತ್ ನೀಲ್​ ನಿರ್ದೇಶನದಲ್ಲಿ ಪ್ರಭಾಸ್​ ನಟನೆಯ ಸಲಾರ್​ ಯುಎಸ್​ ಬಾಕ್ಸ್​ ಆಫೀಸ್​ನಲ್ಲಿ ಹೆಚ್ಚಿನ ಗಳಿಕೆ ಕಾಣುವ ಎಲ್ಲಾ ಸಾಧ್ಯತೆಗಳು ಹೆಚ್ಚಿವೆ.

'ಸಲಾರ್'​ ಹಾಗೂ 'ಡಂಕಿ' ಸಿನಿಮಾಗಳು ಒಂದೇ ದಿನ ಬಿಡುಗಡೆಯಾಗುವ ಬಗ್ಗೆ ನೆಟ್ಟಿಗರು ಅಭಿಪ್ರಾಯಿಸಿದ್ದು, ಎರಡರಲ್ಲಿ ಯಾವುದಾದರೂ ಒಂದು ಸಿನಿಮಾ ಒಂದು ವಾರ ಹಿಂದೆ ಅಥವಾ ಒಂದು ವಾರ ಮುಂದೆ ತಮ್ಮ ರಿಲೀಸ್​ ದಿನಾಂಕದಲ್ಲಿ ಬದಲಾವಣೆ ಮಾಡಿಕೊಂಡರೆ ಗೆಲುವಿನ ಸಾಧ್ಯತೆ ಹೆಚ್ಚಿರುತ್ತದೆ ಎಂದು ತಿಳಿಸಿದ್ದಾರೆ,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net