ಅಪ್ಪು, ಟಪ್ಪು, ಪಪ್ಪು ಹೇಳಿಕೆ; ಸಿಎಂ ಯೋಗಿ ಕೋತಿಗಳ ಮಧ್ಯ ಕುಳಿತರೇ ಅವರನ್ನು ಯಾರೂ ಗುರುತಿಸಲ್ಲ ಎಂದು ಅಖಿಲೇಶ್ ತಿರುಗೇಟು| Akhilesh Yadav

ವಿಜಯವಾಣಿ - 2025-11-05T113521.876
Published on

ಲಖನೌ: ಅಪ್ಪು, ಟಪ್ಪು, ಪಪ್ಪು ಎಂಬ ಉತ್ತರ ಪ್ರದೇಶ ಸಿಎಂ ಹೇಳಿಕೆಗೆ ತಿರುಗೇಟು ನೀಡಿರುವ ಸಮಾಜವಾದಿ ಪಕ್ಷದ ಮುಖ್ಯಸ್ಥ ಮತ್ತು ಮಾಜಿ ಸಿಎಂ ಅಖಿಲೇಶ್ ಯಾದವ್(Akhilesh Yadav), ಯೋಗಿ ಆದಿತ್ಯನಾಥ್ ಕೋತಿಗಳ ಗುಂಪಿನ ಮಧ್ಯದಲ್ಲಿ ಅವರನ್ನು ಯಾರೂ ಗುರುತಿಸಲ್ಲ ಎಂದು ವಾಗ್ದಾಳಿ ನಡೆಸಿದ್ದಾರೆ.

ಬಿಹಾರ ಚುನಾವಣೆಯಲ್ಲಿ ರ‍್ಯಾಲಿಯಲ್ಲಿ ಮಾತನಾಡಿದ್ದ ಯುಪಿ ಸಿಎಂ ಯೋಗಿ ಆದಿತ್ಯನಾಥ, ಗಾಂಧೀಜಿಯವರ ಮೂರು ಮಂಗಗಳ ಬಗ್ಗೆ ನೀವು ತಿಳಿದಿರಲೇಬೇಕು, ಅವು ಕೆಟ್ಟದ್ದನ್ನು ಮಾತನಾಡುವುದಿಲ್ಲ, ಕೆಟ್ಟದ್ದನ್ನು ಕೇಳುವುದಿಲ್ಲ ಅಥವಾ ಕೆಟ್ಟದ್ದನ್ನು ನೋಡುವುದಿಲ್ಲ. ಆದರೆ ಇಲ್ಲಿರುವ ಮೂರು ಮಂಗಗಳು ಎಂದು ರಾಹುಲ್ ಗಾಂಧಿ, ಅಖಿಲೇಶ್ ಯಾದವ್ ಹಾಗೂ ತೇಜಸ್ವಿ ಯಾದವ್ ಅವರನ್ನು ಗುರಿಯಾಗಿಸಿ ಅಪ್ಪು, ಟಪ್ಪು, ಪಪ್ಪು ಎಂದು ಹೇಳಿ ವ್ಯಂಗ್ಯವಾಡಿದ್ದರು.

ಈ ಕುರಿತು ಮಾತನಾಡಿರುವ ಅಖಿಲೇಶ್ ಯಾದವ್, ಜನರ ಮನಸ್ಸನ್ನು ಪ್ರಮುಖ ವಿಷಯಗಳಿಂದ ಬೇರೆಡೆಗೆ ತಿರುಗಿಸಲು ಬಿಜೆಪಿ ಗಾಂಧೀಜಿಯವರ ಮೂರು ಮಂಗಗಳನ್ನು ನೆನಪಿಸಿಕೊಳ್ಳುತ್ತಿದೆ. ಸತ್ಯವೆಂದರೆ ಯೋಗಿ ಆದಿತ್ಯನಾಥ್ ಅವರನ್ನು ಕೋತಿಗಳ ಗುಂಪಿನ ನಡುವೆ ಕೂರಿಸಿದರೆ, ನೀವು ಅಥವಾ ನಾನು ಅವರನ್ನು ಗುರುತಿಸುವುದಿಲ್ಲ ಎಂದು ಹೇಳಿದ್ದಾರೆ.

ಬಿಹಾರ ವಿಧಾನಸಭಾ ಚುನಾವಣೆಗೆ ನಾಳೆ ಮೊದಲ ಹಂತದ ಮತದಾನ ನಡೆಯಲಿದೆ. ನ. 11ರಂದು ಎರಡನೇ ಹಂತದ ಮತದಾನ ನಡೆಯಲಿದ್ದು,  ನ. 14ರಂದು ಫಲಿತಾಂಶ ಪ್ರಕಟವಾಗಲಿದೆ. (ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net