ಕರ್ನಾಟಕದ ಅಭ್ಯರ್ಥಿಗಳಿಗೆ ಬೆಂಗಳೂರು ಬಿಇಎಲ್​ನಲ್ಲಿ ಅಕೌಂಟೆಂಟ್ ಟ್ರೇನಿ ಅಪ್ರೆಂಟಿಸ್​ಷಿಪ್ ಗೆ ಅವಕಾಶ

BEL
Published on

ಬೆಂಗಳೂರು : ಭಾರತ್ ಎಲೆಕ್ಟ್ರಾನಿಕ್ಸ್ ಲಿಮಿಟೆಡ್, ಬೆಂಗಳೂರಿನಲ್ಲಿ ರಾಷ್ಟ್ರೀಯ ಕೌಶಲ ಅಬಿವೃದ್ಧಿ ನಿಗಮದ ವತಿಯಿಂದ ರಾಷ್ಟ್ರೀಯ ಅಪ್ರೆಂಟಿಸ್​​ಷಿಪ್ ಉತ್ತೇಜನ ಯೋಜನೆಯಡಿ ಅಕೌಂಟೆಂಟ್ ತರಬೇತಿಗಾಗಿ ಬಿ.ಕಾಂ ಪದವೀಧರ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.

ತರಬೇತಿಯ ಆರಂಭಿಕ ಅವಧಿ 1 ವರ್ಷದ್ದಾಗಿರುತ್ತದೆ. ಬಿ.ಕಾಂ ಪದವಿಯನ್ನು ಸಾಮಾನ್ಯ ಮತ್ತು ಒಬಿಸಿ ಅಭ್ಯರ್ಥಿಗಳು ಶೇ. 60 ಅಂಕಗಳೊಂದಿಗೆ ಹಾಗೂ ಎಸ್​ಸಿ, ಎಸ್​ಟಿ, ಅಂಗವಿಕಲ ಅಭ್ಯರ್ಥಿಗಳು ಶೇ. 50 ಅಂಕಗಳೊಂದಿಗೆ 2018 ಅಥವಾ ಅದರ ನಂತರ ಪಾಸಾಗಿರಬೇಕು. ಕರ್ನಾಟಕ ಅಭ್ಯರ್ಥಿಯೇ ಆಗಿರಬೇಕು. ಉನ್ನತ ಶಿಕ್ಷಣ ಪೂರೈಸಿದವರು ಅರ್ಜಿ ಸಲ್ಲಿಸಲು ಅರ್ಹರಲ್ಲ.

ಎಸ್ಸೆಸ್ಸೆಲ್ಸಿ, ಪಿಯುಸಿ ಹಾಗೂ ಪದವಿಯಲ್ಲಿ ಗಳಿಸಿದ ಅಂಕಗಳ ಆಧಾರದ ಮೇಲೆ ಆಯ್ಕೆ ಪ್ರಕ್ರಿಯೆ ನಡೆಯುತ್ತದೆ. ಮಾಸಿಕ ಸ್ಟೈಪಂಡ್ 10,500 ರೂ. ನೀಡಲಾಗುತ್ತದೆ. ಆಯ್ಕೆಯಾದ ಅಭ್ಯರ್ಥಿಗಳಿಗೆ ಎಸ್​ಎಂಎಸ್/ ಇ ಮೇಲ್ ಮೂಲಕ ತಿಳಿಸಲಾಗುತ್ತದೆ. ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು www.apprenticeshipindia.org ಮೂಲಕ ಆಗಸ್ಟ್ 8 ರೊಳಗಾಗಿ ಆನ್​​ಲೈನ್ ಅರ್ಜಿ ಸಲ್ಲಿಸಬೇಕು. ಹೆಚ್ಚಿನ ಮಾಹಿತಿಗೆ http://bel-india.in ಸಂಪರ್ಕಿಸಬಹುದು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net