ಬಾಕಿ ಅರ್ಜಿ ಇತ್ಯರ್ಥಗೊಳಿಸಿ: ಅಧಿಕಾರಿಗಳಿಗೆ ಬೆಂಗಳೂರು ಪ್ರಾದೇಶಿಕ ಆಯುಕ್ತ ನವೀನ್ ರಾಜ್ ಸಿಂಗ್ ಸೂಚನೆ

Published on

ಕೋಲಾರ: ಕಂದಾಯ ಇಲಾಖೆಯ ವ್ಯಾಪ್ತಿಯಲ್ಲಿ ವಿವಿಧ ಹಂತಗಳಲ್ಲಿ ಬಾಕಿ ಇರುವ ಅರ್ಜಿಗಳನ್ನು ಎರಡು ತಿಂಗಳೊಳಗೆ ಇತ್ಯರ್ಥಗೊಳಿಸಬೇಕು ಎಂದು ಬೆಂಗಳೂರು ವಿಭಾಗದ ಪ್ರಾದೇಶಿಕ ಆಯುಕ್ತ ನವೀನ್ ರಾಜ್ ಸಿಂಗ್ ಕಂದಾಯ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದರು.

ಜಿಲ್ಲಾಧಿಕಾರಿಗಳ ಕಚೇರಿ ನ್ಯಾಯಾಂಗ ಸಭಾಂಗಣದಲ್ಲಿ ಬುಧವಾರ ಹಮ್ಮಿಕೊಂಡಿದ್ದ ಪ್ರಗತಿ ಪರಿಶೀಲನೆ ಸಭೆಯಲ್ಲಿ ಭೂಮಿ ತಂತ್ರಾಂಶದಲ್ಲಿ ವಿವಿಧ ಅಧಿಕಾರಿಗಳ ಬಳಿ ಬಾಕಿ ಇರುವ ಪ್ರಕರಣ, ಕಾವೇರಿ ತಂತ್ರಾಂಶದಲ್ಲಿ ತಹಸೀಲ್ದಾರ್ ಹಂತದಲ್ಲಿ ಬಾಕಿ ಇರುವ ಪ್ರಕರಣಗಳ ಪರಿಶೀಲನೆ ನಡೆಸಿ ಮಾತನಾಡಿ, ಬಂಗಾರಪೇಟೆ ತಾಲೂಕಿನಲ್ಲಿ ಬಾಕಿ ಇರುವ 80 ಪ್ರಕರಣಗಳನ್ನು ವಾರದೊಳಗೆ ಪೂರ್ಣಗೊಳಿಸಬೇಕು ಎಂದರು.

ಅರೆ ನ್ಯಾಯಿಕ ಪ್ರಕರಣಗಳಲ್ಲಿ ಮೊದಲು 2 ವರ್ಷದಿಂದ 5 ವರ್ಷಗಳೊಳಗೆ ಬಾಕಿ ಇರುವ ಪ್ರಕರಣಗಳನ್ನು ತೆಗೆದುಕೊಂಡು 2 ತಿಂಗಳೊಳಗೆ ಇತ್ಯರ್ಥ ಪಡೆಸುವಂತೆ ತಹಸೀಲ್ದಾರ್‌ಗಳಿಗೆ ಸೂಚಿಸಿದರು. ಪಹಣಿ ಕಾಲಂ 3 ಮತ್ತು 9ಕ್ಕೆ ವ್ಯತ್ಯಾಸವಿರುವ ಪ್ರಕರಣಗಳ ತಿದ್ದುಪಡಿ, ಭೂ ಮಂಜೂರಾತಿ ನಮೂನೆ, 53ರ ಪ್ರಕರಣಗಳ ವಿಲೇವಾರಿ, 94 ಸಿ, 94 ಸಿಸಿ ಹಾಗೂ ಸರ್ಕಾರಿ ಜಮೀನುಗಳ ಒತ್ತುವರಿ ತೆರವು ಪ್ರಕರಣಗಳಿಗೆ ಸಂಬಂಧಿಸಿದಂತೆ ಕಾಲಮಿತಿಯೊಳಗೆ ಕ್ರಮ ಜರುಗಿಸುವಂತೆ ಆದೇಶಿಸಿದರು.

ಬೆಂಗಳೂರು-ಚೆನ್ನೈ ಎಕ್ಸ್‌ಪ್ರೆಸ್ ಕಾರಿಡಾರ್ ಯೋಜನೆಗೆ ಭೂಮಿ ಪಡೆದುಕೊಳ್ಳಲು ಇರುವ ತೊಡಕುಗಳನ್ನು ಕಾನೂನು ರೀತಿ ಶೀಘ್ರ ಪರಿಹರಿಸಿಕೊಳ್ಳುವಂತೆ ಸಂಬಂಧಿಸಿದ ತಹಸೀಲ್ದಾರ್‌ಗೆ ಸೂಚಿಸಿದರು. ರೈತರಿಗೆ ಮನವರಿಕೆ ಮಾಡಿ ಮಾಲ್ಕಿಂಗ್ ಮತ್ತು ಲ್ಯಾಂಡ್ ಪಡೆಯುವುದನ್ನು ಸೆ.30ರೊಳಗೆ ಪೂರ್ಣಗೊಳಿಸಬೇಕು ಎಂದರು.

ಸರ್ವೇ ಇಲಾಖೆ ಆಯುಕ್ತ ಮನಿಷ್ ಮುದ್ಗಿಲ್ ಮಾತನಾಡಿ, ಸಾರ್ವಜನಿಕರು ಸರ್ವೇ ಮಾಡಲು ಅರ್ಜಿ ಸಲ್ಲಿಸಿದ್ದು, ಹೆಚ್ಚಿನ ಪ್ರಕರಣ ತಹಸೀಲ್ದಾರ್ ಹಂತದಲ್ಲಿ ಬಾಕಿ ಇವೆ. 3-9 ಮಿಸ್ ಮ್ಯಾಚ್, ಆರ್‌ಟಿಸಿ ಮಿಸ್ ಮ್ಯಾಚ್ ಮುಂತಾದ ಕಾರಣಗಳಿಂದ ಬಾಕಿ ಇದ್ದು, ಟಾರ್ಗೆಟ್ ತೆಗೆದುಕೊಂಡು ತಹಸೀಲ್ದಾರ್ ಪ್ರತಿವಾರ ಇತ್ಯರ್ಥ ಪಡಿಸಬೇಕು. ಪ್ರತಿ ಸರ್ವೇಯರ್‌ಗಳು ತಿಂಗಳಿಗೆ ಕನಿಷ್ಠ 23 ಸರ್ವೇ ಪ್ರಕರಣ ಇತ್ಯರ್ಥ ಪಡಿಸಬೇಕು ಎಂದರು.

ಪ್ರಾದೇಶಿಕ ಆಯುಕ್ತರ ಕಚೇರಿ ಹೆಚ್ಚುವರಿ ಆಯುಕ್ತ ಇಸಾವುದ್ದೀನ್ ಜೆ ಗದ್ಯಾಳ, ಅಪರ ಜಿಲ್ಲಾಧಿಕಾರಿ ಡಾ. ಸ್ನೇಹಾ, ಉಪ ವಿಭಾಗಾಧಿಕಾರಿ ಆನಂದ್ ಪ್ರಕಾಶ್ ಮೀನಾ, ಯೋಜನಾ ನಿರ್ದೇಶಕ ಸೋಮಶೇಖರ್ ಹಾಗೂ, ತಹಸೀಲ್ದಾರ್, ಕಂದಾಯ ಇಲಾಖೆ ಅಧಿಕಾರಿಗಳು ಉಪಸ್ಥಿತರಿದ್ದರು.

ಗ್ರಾಮವಾರು ಪಿ ನಂಬರ್ ಪಟ್ಟಿ ಮಾಡಿ ಬಾಕಿ ಇರುವುದನ್ನು ಇತ್ಯರ್ಥ ಪಡಿಸಬೇಕು. 2 ವರ್ಷಗಳಿಗಿಂತ ಹೆಚ್ಚು ಅವಧಿಯಿಂದ ಬಾಕಿ ಇರುವ ಅರೆ ನ್ಯಾಯಿಕ ಪ್ರಕರಣಗಳನ್ನು ಒಂದು ವಾರದಲ್ಲಿ ದಿನಾಂಕ ನಿಗದಿಪಡಿಸಿ ಇತ್ಯರ್ಥ ಪಡಿಸಬೇಕು. ಅರೆ ನ್ಯಾಯಿಕ ಪ್ರಕರಣಗಳೆಲ್ಲಾ ರಿಜಿಸ್ಟರ್ ಡಾಕ್ಯುಮೆಂಟ್ ಮೇಲೆ ಇದ್ದು, ತಾಲೂಕುವಾರು ಅದಾಲತ್ ನಡೆಸಿ ಇತ್ಯರ್ಥ ಪಡಿಸಬೇಕು. ಡಾ. ಆರ್.ಸೆಲ್ವಮಣಿ, ಜಿಲ್ಲಾಧಿಕಾರ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net