ಗೃಹಲಕ್ಷ್ಮಿಗೆ ಅರ್ಜಿ ಸಲ್ಲಿಸಿದಿರಾ? ಮೊದಲ ದಿನ ಅರ್ಜಿ ಸಲ್ಲಿದವರೆಷ್ಟು ಗೊತ್ತಾ?

Gruha Lakshmi Scheme
Published on

ಬೆಂಗಳೂರು: ಸರ್ಕಾರದ ಮಹತ್ವಾಕಾಂಕ್ಷಿಯ ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಕೆ ಆರಂಭವಾಗಿದ್ದು ಮೊದಲ ದಿನ 60,222 ಮಹಿಳೆಯರು ನೋಂದಾಯಿಸಿದ್ದಾರೆ.

ಈ ಪೈಕಿ ಮೊಬೈಲ್ ಆ್ಯಪ್ ಮೂಲಕ 15,276 ಮಂದಿ, ವೆಬ್ ಅಪ್ಲಿಕೇಶನ್ ಮೂಲಕ 44,946 ಮಹಿಳೆಯರಿಂದ ನೋಂದಣಿಯಾಗಿದೆ.

ಬೆಂಗಳೂರಿನ ವಿಧಾನಸೌಧದ ಬಾಂಕ್ವೆಟ್ ಹಾಲ್‌ನಲ್ಲಿ ಗುರುವಾರ ಊಟದ ವೇಳೆ ಅಲ್ಲಿದ್ದ ಡಿ ಗ್ರೂಪ್ ಮಹಿಳಾ ನೌಕರರನ್ನು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಅವರು ಯೋಜನೆ ಬಗ್ಗೆ ವಿಚಾರಿಸಿ, ನೋಂದಣಿಗೆ ಸಹಕರಿಸಿದರು.

ಲಕ್ಷ್ಮಿ ಹೆಬ್ಬಾಳ್ಕರ್ ಅವರು ಊಟ ಮಾಡುತ್ತಿದ್ದ ವೇಳೆ ಅಲ್ಲಿ ಸ್ವಚ್ಚತೆಯ ಕೆಲಸ ನಿರ್ವಹಿಸುತ್ತಿದ್ದ ಮಹಿಳೆಯರನ್ನು ಹತ್ತಿರ ಕರೆದು ಯೋಗ ಕ್ಷೇಮ ವಿಚಾರಿಸುವುದರ ಜತೆಗೆ ಗೃಹ ಲಕ್ಷ್ಮಿ ಯೋಜನೆಗೆ ಅರ್ಜಿ ಹಾಕಿದ್ದೀರ ಎಂದು ಕೇಳಿದರು. ಇದಕ್ಕೆ ಉತ್ತರಿಸಿದ ಮಹಿಳಾ ಕಾರ್ಮಿಕರು ಇನ್ನೂ ಇಲ್ಲ ಮೇಡಂ ಎಂದರು.

ಆಗ, ನಂಬರ್ ಕೊಡುತ್ತೇನೆ, ಅದಕ್ಕೆ ಎಸ್ ಎಂಎಸ್ ಮಾಡಿ, ಅದಷ್ಟು ಬೇಗ ಅರ್ಜಿ ಹಾಕಿ ಎಂದು ಸೂಚಿಸಿದರು. ಜತೆಗೆ ತಕ್ಷಣವೇ ಎಸ್ ಎಂ ಎಸ್ ಕಳುಹಿಸಬೇಕಾದ ನಂಬರ್ ಅನ್ನು ಸಚಿವರು ನೀಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net