ಇಂಜಿನಿಯರಿಂಗ್ ಪದವಿ/ ಸ್ನಾತಕೋತ್ತರ ಪಾಸಾಗಿದ್ದೀರಾ? ಬಿಎಂಆರ್​ಸಿಎಲ್ ನಲ್ಲಿ ಯಾವ್ಯಾವ ಹುದ್ದೆಗಳಿವೆ ನೋಡಿ

Metro
Published on

ಬೆಂಗಳೂರು: ಬೆಂಗಳೂರು ಮೆಟ್ರೋ ರೈಲ್ ಕಾರ್ಪೋರೇಷನ್ ಲಿಮಿಟೆಡ್ ( ಬಿಎಂಆರ್​ಸಿಎಲ್) ನ ಯೋಜನಾ ವಿಭಾಗದಲ್ಲಿ ವಿವಿಧ ಹುದ್ದೆಗಳ ಭರ್ತಿಗೆ ಅರ್ಹ ಮತ್ತು ಅನುಭವಿ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.
ಚೀಫ್ ಜನರಲ್ ಮ್ಯಾನೇಜರ್ (ಪ್ಲಾನಿಂಗ್ ಆ್ಯಂಡ್ ಡಿಸೈನ್), ಚೀಫ್ ಆರ್ಕಿಟೆಕ್ಟ್, ಚೀಫ್ ಸೇಫ್ಟಿ ಹೆಲ್ತ್ ಆ್ಯಂಡ್ ಎನ್ವಿರಾನ್​​ಮೆಂಟ್ (ಎಸ್​ಎಚ್​​ಇ)- ಎಕ್ಸ್​​ಪರ್ಟ್ - ತಲಾ ಒಂದೊಂದು ಹುದ್ದೆಗಳಿವೆ.
ಸಂಬಂಧಿಸಿದ ಕ್ಷೇತ್ರದಲ್ಲಿ ಪದವಿ ಹಾಗೂ ಸ್ನಾತಕೊತ್ತರ ಪದವಿ ಪಾಸಾದವರು ಅರ್ಜಿ ಸಲ್ಲಿಸಬಹುದು.

ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ನಿಗದಿತ ನಮೂನೆಯ ಅರ್ಜಿ ಭರ್ತಿ ಮಾಡಿ ಅಗತ್ಯ ದಾಖಲಾತಿಗಳನ್ನು ಲಗತ್ತಿಸಿ ಆಗಸ್ಟ್ 20 ರೊಳಗಾಗಿ General Manager (HR), Bangalore Metro Rail Corporation Limited, III Floor, BMTC Complex, K.H. Road, Shanthinagar, Bangalore 560027 ಈ ವಿಳಾಸಕ್ಕೆ ಕಳುಹಿಸಬಹುದು. ಹೆಚ್ಚಿನ ಮಾಹಿತಿಗೆ https://bit.ly/2DYudgx ವೆಬ್​ಸೈಟ್ ಸಂಪರ್ಕಿಸಬಹುದು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net