ಅಪರ ಜಿಲ್ಲಾ ಸರ್ಕಾರಿ ವಕೀಲರ ಹುದ್ದೆಗೆ ಅರ್ಜಿ ಆಹ್ವಾನ

Application
Published on

ಮೈಸೂರು: ನಂಜನಗೂಡು ತಾಲ್ಲೂಕಿನ ಅಪರ ಜಿಲ್ಲಾ ಸರ್ಕಾರಿ ವಕೀಲರ ಹುದ್ದೆಯ ಗರಿಷ್ಠ ಅವಧಿ ಮುಕ್ತಾಯವಾಗಿರುವ ಹಿನ್ನಲೆಯಲ್ಲಿ ಸದರಿ ಹುದ್ದೆಯನ್ನು ಹೊಸ ಅಭ್ಯರ್ಥಿಯಿಂದ ತುಂಬಲು ಕರ್ನಾಟಕ ಕಾನೂನು ಅಧಿಕಾರಿಗಳ ನಿಯಮಾವಳಿ 1977 ನಿಯಮ 26 ರಲ್ಲಿ ತಿಳಿಸಿರುವ ಅಗತ್ಯ ಷರತ್ತುಗಳನ್ನು ಪೂರೈಸಿರುವ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ.

ಸದರಿ ಹುದ್ದೆಗೆ ನೇಮಕಾತಿ ಬಯಸುವವರು, 07 ವರ್ಷಗಳ ಕಾಲ ವಕೀಲ ವೃತ್ತಿಯನ್ನು ಪೂರೈಸಿರುವ ಆಸಕ್ತ ಅರ್ಹ ಅಭ್ಯರ್ಥಿಗಳು ತಮ್ಮ ಹೆಸರು/ವಿಳಾಸ/ಜಾತಿ/ವಿದ್ಯಾರ್ಹತೆ/ವಕೀಲ ವೃತ್ತಿಯಲ್ಲಿನ ಅನುಭವ, ಇತ್ಯಾದಿ ವಿವರಗಳನ್ನು ನಮೂದಿಸಿದ ಸ್ವಯಂ ವಿವರಣೆಯ ಮಾಹಿತಿಯೊಂದಿಗೆ (ಬಯೋಡೆಟಾ) ವಿದ್ಯಾರ್ಹತೆ/ವಕೀಲ ವೃತ್ತಿಯಲ್ಲಿ ರಾಜ್ಯ ಬಾರ್ ಕೌನ್ಸಿಲ್ ನೊಂದಣಿ ಮತ್ತು ವಕೀಲ ವೃತ್ತಿಯಲ್ಲಿ ಹೊಂದಿರುವ ಅನುಭವದ ಬಗ್ಗೆ ಸ್ಥಳೀಯ ವಕೀಲರ ಸಂಘದ ದೃಢೀಕರಣ ಪತ್ರ ಇತ್ಯಾದಿ ದಾಖಲಾತಿಗಳೊಂದಿಗೆ ಭರ್ತಿ ಮಾಡಿದ ಅರ್ಜಿಯನ್ನು ಜುಲೈ 29 ರೊಳಗಾಗಿ ಜಿಲ್ಲಾಧಿಕಾರಿಗಳ ಕಛೇರಿಗೆ ಸಲ್ಲಿಸಬೇಕು ಎಂದು ಜಿಲ್ಲಾಧಿಕಾರಿಗಳಾದ ಜಿ ಲಕ್ಷ್ಮೀಕಾಂತ ರೆಡ್ಡಿ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net