

ಹುಬ್ಬಳ್ಳಿಯ ಕರ್ನಾಟಕ ವೈದ್ಯಕೀಯ ವಿಜ್ಞಾನ ಸಂಸ್ಥೆಯಲ್ಲಿ ಖಾಲಿಯಿರುವ ವಿವಿಧ ಹುದ್ದೆಗನ್ನು ಭರ್ತಿ ಮಾಡಲು ಅರ್ಹ ಹಾಗೂ ಆಸಕ್ತ ಅಭ್ಯರ್ಥಿಗಳನ್ನು ನೇರ ಸಂದರ್ಶನಕ್ಕೆ ಆಹ್ವಾನಿಸಲಾಗಿದೆ.
ವಿವಿಧ ವಿಭಾಗಗಳಲ್ಲಿ ಪ್ರೊಫೆಸರ್, ಅಸೋಸಿಯೇಟ್ ಪ್ರೊಫೆಸರ್, ಅಸಿಸ್ಟೆಂಟ್ ಪ್ರೊಫೆಸರ್, ಸ್ಪೀಚ್ ಲಾಂಗ್ವೇಜ್ ಪ್ಯಾಥಲಜಿಸ್ಟ್, ಆಡಿಯೋಲಜಿಸ್ಟ್, ಜೆಆರ್ಎಫ್ (ಡಿಎಸ್ಟಿ/ಬಿಡಿಟಿಡಿ ಪ್ರಾಜೆಕ್ಟ್) ಹುದ್ದೆಗಳು ಖಾಲಿಯಿದ್ದು, ಹುಬ್ಬಳ್ಳಿ ವಿಭಾಗದ ಕಡೆ ಕೆಲಸ ಹುಡುಕುತ್ತಿರುವವರು ಈ ಅವಕಾಶ ಬಳಸಿಕೊಳ್ಳಬಹುದು. ನ್ಯಾಷನಲ್ ಮೆಡಿಕಲ್ ಕಮಿಷನ್ ನಿಯಮಗಳ ಪ್ರಕಾರ ವಿದ್ಯಾರ್ಹತೆ ಹೊಂದಿರಬೇಕು. ಅರಿವಳಿಕೆ ವಿಭಾಗಕ್ಕೆ ಅನುಭವ ಹೊಂದಿದವರಿಗೆ ಆದ್ಯತೆ ನೀಡಲಾಗುವುದು.
ಹುದ್ದೆಗಳಿಗೆ ಅನುಗುಣವಾಗಿ ಪ್ರತಿ ಮಾಸಿಕ 1,00,000-30,000 ರೂ. ವೇತನ ನಿಗದಿಪಡಿಸಲಾಗಿದೆ. ಅಭ್ಯರ್ಥಿಗಳು ಡಿ.12ರಂದು 10:30ರೊಳಗೆ ಕಿಮ್ಸ್ನ ಅಡ್ಮಿನಿಸಟ್ರೇಟಿವ್ ಬ್ಲಾಕ್ನ ನಿರ್ದೇಶಕರ ಕಚೇರಿ ಬಳಿ ಹಾಜರಾಗಬೇಕು. 12 ಗಂಟೆಯ ನಂತರ ಬಂದ ಅಭ್ಯರ್ಥಿಗಳನ್ನು ಅನುಮತಿಸಲಾಗುವುದಿಲ್ಲ. ಸಂದರ್ಶನದ ಸಮಯದಲ್ಲಿ ಮೂಲ ದಾಖಲೆ ಮತ್ತು ಜೆರಾಕ್ಸ್ ಪ್ರತಿ ಹಾಗೂ 500 ರೂ. ಡಿಡಿಯೊಂದಿಗೆ ಹಾಜರಾಗತಕ್ಕದ್ದು. ಗುತ್ತಿಗೆ ಆಧಾರದ ಮೇಲೆ ನೇಮಕಾತಿ ಮಾಡಿಕೊಳ್ಳಲಾಗುತ್ತಿದೆ.
ಸಂದರ್ಶನಕ್ಕೆ ಹಾಜರಾಗಬೇಕಾದ ದಿನ: 12.12.2022
ಅಧಿಸೂಚನೆಗೆ: https://bit.ly/3UpzY8K
ಮಾಹಿತಿಗೆ: hubballikims.karnataka.gov.in