

ಬೆಂಗಳೂರು ರಾಜ್ಯದ ಪಾಲಿಟೆಕ್ನಿಕ್ ಮತ್ತು ಇಂಜಿನಿಯರಿಂಗ್ ಕಾಲೇಜುಗಳಲ್ಲಿ ಪ್ರವೇಶ ಪಡೆಯುವ ವಿದ್ಯಾರ್ಥಿಗಳಿಗೆ ಎಐಸಿಟಿಇ ನೀಡುವ ಪ್ರಗತಿ, ಸಕ್ಷಮ್ ಮತ್ತು ಸ್ವನಾಥ್ ವಿದ್ಯಾರ್ಥಿವೇತನಕ್ಕೆ ಅರ್ಜಿ ಆಹ್ವಾನಿಸಿದೆ.
ವಾರ್ಷಿಕ 8 ಲಕ್ಷ ರೂ.ಗಳಿಗಿಂತ ಕಡಿಮೆ ಆದಾಯ ಮಿತಿ ಇರುವ ವಿದ್ಯಾರ್ಥಿನಿಯರು ಪ್ರಗತಿಗೆ, ಶೇ.40ಕ್ಕಿಂತ ಹೆಚ್ಚು ವಿಶೇಷ ಸಾಮರ್ಥ್ಯ ಹೊಂದಿರುವ ಅಂಗವಿಕಲರು ಸಕ್ಷಮ್‌ಗೆ ಮತ್ತು ಸ್ವನಾಥ್‌ಗೆ ಅನಾಥ, ಕೊರೊನಾದಲ್ಲಿ ಪೋಷಕರನ್ನು ಕಳೆದುಕೊಂಡಿರುವ ವಿದ್ಯಾರ್ಥಿಗಳು, ಸಶಸ ಪಡೆಗಳ ವಾರ್ಡ್‌ಗಳು ಮತ್ತು ಅರೆಸೈನಿಕ ಪಡೆಗಳ ಕಾರ್ಯಾಚರಣೆಯಲ್ಲಿ ಹುತಾತ್ಮರಾಗಿರುವ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಬಹುದು.
ವಿದ್ಯಾರ್ಥಿ, ವಿದ್ಯಾರ್ಥಿನಿಯರು ಮತ್ತು ಅಂಗವಿಕಲ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಲು ಮತ್ತು 2022-23 ಮತ್ತು 2023-24ನೇ ಸಾಲಿನಲ್ಲಿ ಪ್ರವೇಶ ಪಡೆದ ಅರ್ಹ ವಿದ್ಯಾರ್ಥಿಗಳು ಅರ್ಜಿ ನವೀಕರಿಸಲು ಮತ್ತು ಹೊಸದಾಗಿ ಅರ್ಜಿಗಳನ್ನು ಸಲ್ಲಿಸಲು ಅ.31 ಕೊನೆಯ ದಿನವಾಗಿದೆ. ಎಐಸಿಟಿಇ ರಾಷ್ಟ್ರೀಯ ವಿದ್ಯಾರ್ಥಿವೇತನ ಪೋರ್ಟಲ್‌ನಲ್ಲಿ ಅರ್ಜಿ ಸಲ್ಲಿಸಬಹುದಾಗಿದೆ.