ಬಿ.ಇಡಿ ಪ್ರವೇಶಕ್ಕೆ ಅರ್ಜಿ ಆಹ್ವಾನ: ಕಾಲೇಜು, ಶುಲ್ಕ, ಅರ್ಹತೆ ಮಾಹಿತಿಗೆ ಕ್ಲಿಕ್ ಮಾಡಿ

Application-1-1280x720
Published on

ಬೆಂಗಳೂರು: 2025-26ನೇ ಸಾಲಿನ ಎರಡು ವರ್ಷದ ಬಿ.ಇಡಿ ಕೋರ್ಸ್‌ವ್ಯಾಸಂಗಕ್ಕಾಗಿ ಶಾಲಾ ಶಿಕ್ಷಣ ಇಲಾಖೆಯು ಅರ್ಜಿ ಆಹ್ವಾನಿಸಿದೆ.

ರಾಜ್ಯದ ಸರ್ಕಾರಿ, ಅನುದಾನಿತ ಮತ್ತು ಅನುದಾನ ರಹಿತ ಬಿ.ಇಡಿ ಕಾಲೇಜುಗಳಲ್ಲಿನ ಸರ್ಕಾರಿ ಕೋಟಾ ಸೀಟುಗಳ ದಾಖಲಾತಿಗಾಗಿ ಆನ್‌ಲೈನ್ ಮೂಲಕ ಅರ್ಜಿಗಳನ್ನು ಇಲಾಖಾ ವೆಬ್‌ಸೈಟ್‌ನಲ್ಲಿ ನ.3ರವರೆಗೆ ಅರ್ಜಿ ಸಲ್ಲಿಸಬಹುದು.

ಇಲಾಖಾ ವೆಬ್‌ಸೈಟ್ ಠಿಠಿ://ಠ್ಚಟಟ್ಝಛಿಛ್ಠ್ಚಠಿಜಿಟ್ಞ.ಚ್ಟ್ಞಠಿ.ಜಟ.ಜ್ಞಿ ನಲ್ಲಿ ಅಧಿಸೂಚನೆ ಹೊರಡಿಸಲಾಗಿದೆ. ದಾಖಲಾತಿ ವೇಳಾಪಟ್ಟಿ, ಅರ್ಹತೆ, ಮೀಸಲಾತಿ, ಶುಲ್ಕ ಇತ್ಯಾದಿ ವಿವರ ಮತ್ತು ಜಿಲ್ಲಾವಾರು ಬಿ.ಇಡಿ ಕಾಲೇಜುಗಳ ಪಟ್ಟಿಯನ್ನು ನೀಡಲಾಗಿದೆ.

ಅಭ್ಯರ್ಥಿಗಳು ಅಧಿಸೂಚನೆಯನ್ನು ಓದಿ ಅರ್ಥೈಸಿಕೊಂಡು ಆನ್‌ಲೈನ್ ಮೂಲಕ ಅರ್ಜಿಯನ್ನು ಕ್ರಮಬದ್ಧವಾಗಿ ಭರ್ತಿ ಮಾಡಿ ಸಲ್ಲಿಸಲು ಇಲಾಖೆಯ ಕೇಂದ್ರೀಕೃತ ದಾಖಲಾತಿ ಘಟಕದ ಜಂಟಿ ನಿರ್ದೇಶಕರು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net