ಸಿಒಪಿಗಾಗಿ ಅರ್ಜಿ ಸಲ್ಲಿಕೆಗೆ 31ರವರೆಗೆ ಅವಕಾಶ :

highcourt
Published on

ಬೆಂಗಳೂರು: ರಾಜ್ಯದಲ್ಲಿ 1961ರಿಂದ 2010ರವರೆಗೆ ಕಾನೂನು ಪದವಿ ಪಡೆದವರಿಗೆ ‘ಸರ್ಟಿಫಿಕೇಟ್ ಆಫ್ ಪ್ರಾಕ್ಟಿಸ್’ಗಾಗಿ (ಸಿಒಪಿ) ಅರ್ಜಿ ಸಲ್ಲಿಸಲು ಕರ್ನಾಟಕ ವಕೀಲರ ಪರಿಷತ್ 31ರವರೆಗೆ ಅಂತಿಮ ಅವಕಾಶ ನೀಡಿದೆ.

1961ರಿಂದ 2010ರ ಜೂ. 12ರೊಳಗೆ ಕಾನೂನು ಪದವಿ ಪಡೆದಿರುವ ಆದರೆ ಸಿಒಪಿ ಪಡೆಯದಿರುವವರು 300 ರೂ. ಸಾಮಾನ್ಯ ಶುಲ್ಕ ಮತ್ತು 1,200 ರೂ. ವಿಳಂಬ ಶುಲ್ಕ ಸೇರಿ 1,500 ರೂ. ಪಾವತಿಸಬೇಕು. ಭೌತಿಕವಾಗಿ ಅಥವಾ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು. ಆದರೆ ಪೋಸ್ಟ್ ಮೂಲಕ ಅರ್ಜಿ ಸಲ್ಲಿಸುವಂತಿಲ್ಲ ಎಂದು ರಾಜ್ಯ ಬಾರ್ ಕೌನ್ಸಿಲ್‌ನ ಅಧ್ಯಕ್ಷ ಎಸ್.ಎಸ್. ಮಿಟ್ಟಲಕೋಡ ತಿಳಿಸಿದ್ದಾರೆ.

ಇದೇ ವೇಳೆ 2010ರ ಜೂ. 12ರ ಬಳಿಕ ಅಖಿಲ ಭಾರತ ಬಾರ್ ಕೌನ್ಸಿಲ್ ಪರೀಕ್ಷೆ ಉತ್ತೀರ್ಣರಾಗಿ ನೋಂದಣಿ ಮಾಡಿಸಿಕೊಂಡಿರುವವರು ಘೋಷಣಾ ಫಾರ್ಮ್ ಅನ್ನು ಸಲ್ಲಿಸಿರದಿದ್ದರೆ ಆನ್‌ಲೈನ್ ಮೂಲಕ ಸಲ್ಲಿಸುವಂತೆ ಸೂಚಿಸಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net