

ವಿರಾಜಪೇಟೆ/ರಾಣೆಬೆನ್ನೂರ: ತಂದೆಯ ಸಾವಿನ ನೋವಲ್ಲೂ ಶುಕ್ರವಾರ ಮೂವರು ವಿದ್ಯಾರ್ಥಿಗಳು ಎಸ್ಎಸ್ಎಲ್ಸಿ ಪರೀಕ್ಷೆ ಬರೆದಿದ್ದಾರೆ. ಕೊಡಗು ಜಿಲ್ಲೆ ವಿರಾಜಪೇಟೆ ವಿನಾಯಕ ಇಂಗ್ಲಿಷ್ ಸ್ಕೂಲ್ನಲ್ಲಿ 10 ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವ ಅನ್ವಿದಾ ಕೃಷ್ಣ ಎಂಬ ವಿದ್ಯಾರ್ಥಿನಿ ತಂದೆಯ ಕೃಷ್ಣ ಅವರು ಗುರುವಾರ ಹೃದಯಾಘಾತದಿಂದ ನಿಧನರಾಗಿದ್ದರು.
ಶುಕ್ರವಾರ ತಂದೆಯ ಅಂತ್ಯಕ್ರಿಯೆ ನಡೆಯಲಿತ್ತು. ಆದರೆ ತಂದೆಯ ಸಾವಿನ ನೋವಿನಲ್ಲಿ ಶುಕ್ರವಾರ ಹಿಂದಿ ಪರೀಕ್ಷೆಯನ್ನು ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಬರೆದಿದ್ದಾಳೆ. ರಾಣೆಬೆನ್ನೂರ ತಾಲೂಕಿನ ಪದ್ಮಾವತಿಪುರ ತಾಂಡಾದ ರಕ್ಷಿತಾ ಹನುಮಂತಪ್ಪ ಲಮಾಣಿ ಮತ್ತು ಧನರಾಜ ಹನುಮಂತಪ್ಪ ಲಮಾಣಿ ಕೂಡ ತಂದೆ ಸಾವಿನ ದುಃಖದ ನಡುವೆ ಪರೀಕ್ಷೆ ಬರೆದಿದ್ದಾರೆ. ಇವರ ತಂದೆ ಹನುಮಂತಪ್ಪ ಲಮಾಣಿ ಏ. 4ರಂದು ಬೆಳಗ್ಗೆ ಹೃದಯಾಘಾತದಿಂದ ಮೃತಪಟ್ಟಿದ್ದರು. ತಂದೆಯ ಸಾವಿನ ನೋವಿನಲ್ಲೂ ಅಣ್ಣ-ತಂಗಿ ನಗರದ ಪರೀಕ್ಷಾ ಕೇಂದ್ರಕ್ಕೆ ತೆರಳಿ ಪರೀಕ್ಷೆ ಬರೆದರು.