ಮಂಡ್ಯ ನಗರ ಬಂದ್‌ಗೆ ಸಹಕರಿಸಿ: ವರ್ತಕರಿಗೆ ಗುಲಾಬಿ ಹೂವು ನೀಡಿ ಹಿಂದು ಸಂಘಟನೆ ಕಾರ್ಯಕರ್ತರ ಮನವಿ

Appeal to cooperate with Mandya Nagar Band mandya
Published on

ಮಂಡ್ಯ: ಕೆರಗೋಡು ಹನುಮಾನ್ ಧ್ವಜ ತೆರವು ವಿರೋಧಿಸಿ ಕರೆ ನೀಡಿರುವ ಫೆ.9ರಂದು ಬಂದ್‌ಗೆ ಸಹಕರಿಸುವಂತೆ ಕೋರಿ ಗುರುವಾರ ನಗರದಲ್ಲಿ ಹಿಂದು ಸಂಘಟನೆ ಕಾರ್ಯಕರ್ತರು ವರ್ತಕರಿಗೆ ಮನವಿ ಮಾಡಿದರು.

ಕೆರಗೋಡು ಗ್ರಾಮಸ್ಥರು ಎಷ್ಟೇ ಮನವಿ ಮಾಡಿದರೂ ಕ್ಯಾರೆ ಎನ್ನದ ಜಿಲ್ಲಾಡಳಿತ ಹಾಗೂ ಕಾಂಗ್ರೆಸ್ ಸರ್ಕಾರ ಹಿಂದುಗಳ ಧಮನಕಾರಿ ನೀತಿ ಅನುಸರಿಸುತ್ತಿದೆ. ಪಂಚಾಯಿತಿ ಸದಸ್ಯರ ನಿರ್ಣಯ ಹನುಮಾನ್ ಧ್ವಜದ ಪರವಾಗಿತ್ತು. ಆದರೆ ಬೇಕೆಂತಲೇ ಗೊಂದಲ ಮೂಡಿಸುವ ಕೆಲಸಕ್ಕೆ ಕಾಂಗ್ರೆಸ್ ಸರ್ಕಾರ ಕೈ ಹಾಕಿದೆ ಎಂದು ಕಿಡಿಕಾರಿದರು.

ದೇಶ ಭಕ್ತಿಯ ಬಗ್ಗೆ ಮಂಡ್ಯದ ಜನರಿಗೆ ಕಾಂಗ್ರೆಸ್ ಪಾಠ ಮಾಡಬೇಕಿಲ್ಲ. ಭಾರತವನ್ನು ತುಂಡರಿಸಿ ಪ್ರತ್ಯೇಕ ರಾಷ್ಟ್ರ ಮಾತುಗಳನ್ನಾಡಿರುವ ಕಾಂಗ್ರೆಸ್ ಪಕ್ಷದ ನಾಯಕರು, ಭಾರತದ ಅಖಂಡತೆಯ ಬಗ್ಗೆ ಮಾತುಗಳನ್ನಾಡುತ್ತಿರುವುದು ಹಾಸ್ಯಾಸ್ಪದ. ಕೆರಗೋಡು ಗ್ರಾಮದಲ್ಲಿ ಹನುಮಾನ್ ಧ್ವಜ ಹಾರಿಸುವವರೆವಿಗೂ ನಮ್ಮ ಹೋರಾಟ ನಿರಂತವಾಗಿರುತ್ತದೆ. ಆದ್ದರಿಂದ ಮಂಡ್ಯ ನಗರ ಬಂದ್‌ಗೆ ಸಾರ್ವಜನಿಕರು, ವರ್ತಕರು, ರಸ್ತೆ ಬದಿ ವ್ಯಾಪಾರಿಗಳು, ಹೋಟೆಲ್ ಮಾಲೀಕರು, ಬೇಕರಿ ಮಾಲೀಕರು, ಆಟೋ ಚಾಲಕರು ಸೇರಿದಂತೆ ಎಲ್ಲರೂ ಸಕಾರಾತ್ಮಕವಾಗಿ ಸ್ಪಂದಿಸಿ ಸಹಕರಿಸಿ ಎಂದು ಮನವಿ ಮಾಡಿದರು.

ಈ ವೇಳೆ ಬೇಕರಿ ಮಾಲೀಕ ಸಂಘದ ಅಧ್ಯಕ್ಷ ಎಚ್.ಆರ್.ಅರವಿಂದ್, ಹಿಂದು ಪರ ಸಂಘಟಕರಾದ ಸಿ.ಟಿ.ಮಂಜುನಾಥ್, ಹೊಸಹಳ್ಳಿ ಶಿವು, ಮಹೇಶ್ ಕೆರಗೋಡು, ಹುಲಿವಾನ ಮಹೇಶ್, ಪ್ರಸನ್ನ ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net