ನಟ ಕಮಲ್ ಹಾಸನ್ ಜತೆ ನಟಿಸಿದ್ದ ಸಹಕಲಾವಿದ ಮೋಹನ್ ಮೃತದೇಹ ರಸ್ತೆಬದಿಯಲ್ಲಿ ಪತ್ತೆ

Apoorva Sagodharargal fame actor Mohan found dead on roadside
Published on

ಹೈದರಾಬಾದ್​​: ಇತ್ತೀಚೆಗಷ್ಟೇ ಕಲಾ ನಿರ್ದೇಶಕ ನಿತಿನ್ ದೇಸಾಯಿ ಆತ್ಮಹತ್ಯೆ ಮಾಡಿಕೊಂಡಿದ್ದು ಗೊತ್ತೇ ಇದೆ.ಈ ನಡುವೆ ಮತ್ತೊಬ್ಬ ನಟ ವಿಧಿವಶರಾಗಿದ್ದಾರೆ. ಹಲವು ಸಿನಿಮಾಗಳಲ್ಲಿ ಪೋಷಕ ಪಾತ್ರ ನಿರ್ವಹಿಸಿದ್ದ ಮೋಹನ್ ನಿಧನರಾಗಿದ್ದಾರೆ. ಆತನ ಶವ ರಸ್ತೆ ಬದಿಯಲ್ಲಿ ಪತ್ತೆಯಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ತಮಿಳುನಾಡಿನ ಮಧುರೈ ಜಿಲ್ಲೆಯ ತಿರುಪ್ಪಂಗುಂಡ್ರಂ ರಸ್ತೆ ಬದಿಯಲ್ಲಿ ಮೃತದೇಹ ಪತ್ತೆಯಾಗಿರುವ ಬಗ್ಗೆ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಪೊಲೀಸರು ಮೃತದೇಹವನ್ನು ಸರ್ಕಾರಿ ಆಸ್ಪತ್ರೆಗೆ ರವಾನಿಸಿ ಮರಣೋತ್ತರ ಪರೀಕ್ಷೆ ನಡೆಸಿದರು. ಮೃತ ದೇಹ ನಟ ಮೋಹನ್ ದಿ ಅವರದ್ದು ಎಂದು ತಿಳಿದುಬಂದಿದೆ.

ಮೂಲಗಳ ಪ್ರಕಾರ, ಬಡತನದಿಂದ ಬಳಲುತ್ತಿದ್ದ ಮೋಹನ್ ಒಂದು ಹೊತ್ತಿನ ಊಟಕ್ಕೆ ತಿರುಪುರಂಗುಂದ್ರಂ ದೇವಸ್ಥಾನವನ್ನು ಬಳಿ ಕುಳಿತು ಭಿಕ್ಷಾಟನೆ ಮಾಡುತ್ತಿದ್ದರು. 60 ವರ್ಷದ ವ್ಯಕ್ತಿ ರಸ್ತೆಬದಿಯಲ್ಲಿ ಶವವಾಗಿ ಪತ್ತೆಯಾಗಿದ್ದು, ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದು, ಪೊಲೀಸರು ಶವವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ.

ಮೋಹನ್ ಅವರ ಹುಟ್ಟೂರು ಸೇಲಂ ಜಿಲ್ಲೆಯ ಮೆಟ್ಟೂರು. ಆದರೆ ಅವರು ಸೇಲಂನಿಂದ ಮಧುರೈಗೆ ಏಕೆ ಹೋದರು? ಆತ ಹೇಗೆ ಸತ್ತಿದ್ದಾನೆ ಎಂಬ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಪೊಲೀಸರು ಮೋಹನ್ ಸಾವಿನ ಕುರಿತು ಕುಟುಂಬಸ್ಥರಿಗೆ ಮಾಹಿತಿ ನೀಡಿದ್ದಾರೆ. ಅವಕಾಶಗಳಿಗಾಗಿ ಮೋಹನ್ ಮದುರೈಗೆ ಬಂದಿದ್ದ ಎನ್ನಲಾಗಿದೆ. ಮಧುರೈನ ರಸ್ತೆಗಳಲ್ಲಿ ಭಿಕ್ಷೆ ಬೇಡುತ್ತಿದ್ದ ಅವರು, ಅನಾರೋಗ್ಯದಿಂದ ಸಾವನ್ನಪ್ಪಿರಬೇಕು. ಮೋಹನ್ ನಿಧನಕ್ಕೆ ಹಲವರು ಕಂಬನಿ ಮಿಡಿದಿದ್ದಾರೆ.

ಕಮಲ್ ಹಾಸನ್ ಅಭಿನಯದ ವಿಚಿತ್ರ ಸೊಡರುಲು ಚಿತ್ರದಲ್ಲಿ ಮೋಹನ್ ನಟಿಸಿದ್ದರು. ಆ ಸಿನಿಮಾದಲ್ಲಿ ಮೋಹನ್ ಕುಬ್ಜ ಗೆಳೆಯನಾಗಿ ಕಾಣಿಸಿಕೊಂಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net