ರಾಣೆಬೆನ್ನೂರಿನ ಎಪಿಎಂಸಿ ವಹೀವಾಟು ಸ್ಥಗಿತ ಫೆ. 2ರಿಂದ

je721538035802367-abc
Published on

ರಾಣೆಬೆನ್ನೂರ: ತಾಲೂಕಿನ ಹುಲಿಹಳ್ಳಿ ಬಳಿಯ ರಾಷ್ಟ್ರೀಯ ಹೆದ್ದಾರಿ 48ಕ್ಕೆ ಹೊಂದಿಕೊಂಡಿರುವ ಎಪಿಎಂಸಿ ಮೆಗಾ ಮಾರುಕಟ್ಟೆಯಲ್ಲಿ ನಿವೇಶನಗಳ ಹಂಚಿಕೆ ವಿಚಾರವಾಗಿ ಫೆ. 2ರಿಂದ ವರ್ತಕರ ಬೇಡಿಕೆ ಈಡೇರುವವರೆಗೂ ಸ್ಥಳೀಯ ಎಪಿಎಂಸಿ ವರ್ತಕರು ವಹೀವಾಟು ಬಂದ್ ಮಾಡಲು ತೀರ್ಮಾನಿಸಿದ್ದಾರೆ ಎಂದು ವರ್ತಕರ ಸಂಘದ ಅಧ್ಯಕ್ಷ ಜಿ.ಜಿ. ಹೊಟ್ಟಿಗೌಡ್ರ ತಿಳಿಸಿದ್ದಾರೆ.
ಆದ್ದರಿಂದ ರೈತರು ಫೆ.2ರಿಂದ ಇಲ್ಲಿನ ಎಪಿಎಂಸಿಗೆ ಯಾವುದೇ ಕೃಷಿ ಉತ್ಪನ್ನಗಳನ್ನು ಮಾರಾಟ ಮಾಡಲು ತರಬಾರದು. ಆ ಮೂಲಕ ವರ್ತಕರ ಹೋರಾಟಕ್ಕೆ ಸಹಕರಿಸಬೇಕು ಎಂದು ಅವರು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net