ಶಾಂತಿನಗರದಲ್ಲಿ ಎ.ಪಿ.ಜೆ ಅಬ್ದುಲ್ ಕಲಾಂ ಜನ್ಮದಿನಾಚರಣೆ:ಬಡವರಿಗೆ ಉಚಿತ ಆಹಾರ ವಿತರಣೆ.

apj
Published on

ಬೆಂಗಳೂರು: ಮಾನವೀಯ ಮೌಲ್ಯಗಳನ್ನು ಮೈಗೂಡಿಸಿ ಕೊಂಡಿದ್ದ ಭಾರತ ರತ್ನ ಡಾ.ಎ.ಪಿ.ಜೆ.ಅಬ್ದುಲ್ ಕಲಾಂ ಅವರು. ಭಾರತದ 11 ರಾಷ್ಟ್ರಪತಿಗಳಾಗಿ ತಮ್ಮ ಘನ, ಗಂಭೀರ ನಡತೆಯಿಂದ ನಿಷ್ಪಕ್ಷಪಾತ ನಿಲುವಿನ ಮೂಲಕ ಅಖಂಡ ಭಾರತೀಯರ ಮನ ಗೆದ್ದಿದ್ದಾರೆ ಎಂದು ಡಾ.ಎ.ಪಿ.ಜೆ ಅಬ್ದುಲ್ ಕಲಾಂ ಸಂಘ ಹಾಗೂ ಶಾಂತಿನಗರ ಕನ್ನಡ ಸಂಘದ ಅಧ್ಯಕ್ಷ ಸಿ.ಎಂ. ಅಶ್ರ್ ಅಭಿಪ್ರಾಯ ವ್ಯಕ್ತಪಡಿಸಿದರು.

ಶಾಂತಿನಗರದ ಅಕ್ಕಿ ತಿಮ್ಮನಹಳ್ಳಿಯ ನಂಜಪ್ಪ ವೃತ್ತದಲ್ಲಿ ಹಮ್ಮಿಕೊಂಡಿದ್ದ ಡಾ.ಅಬ್ದುಲ್ ಕಲಾಂ ಜನ್ಮ ದಿನಾಚರಣೆಯಲ್ಲಿ ಭಾಗವಹಿಸಿ ಮಾತನಾಡಿದರು.

ಅಬ್ದೂಲ್ ಕಲಾಂ ಅವರು ಗಂಭೀರ ಚಿಂತಕ ಹಾಗೂ ಅಧಮ್ಯ ಶಕ್ತಿಯನ್ನು ಹೊಂದಿದವರಾಗಿದ್ದರು.ರಾಷ್ಟ್ರಪತಿ ಸ್ಥಾನ ಅಲಂಕರಿಸುವ ಮೂಲಕ ಸಾಬೀತುಪಡಿಸಿದ್ದಾರೆ. ಅಲ್ಲದೆ,ಅತ್ಯುನ್ನತ ಪದವಿ ಪಟ್ಟಿಗಳನ್ನು ಅಲಂಕರಿಸಿದರು, ಎಂದೂ ಆ ಸ್ಥಾನಕ್ಕೆ ಚ್ಯುತಿ ಬಾರದ ರೀತಿಯಲ್ಲಿ

ಮಾನವೀಯತೆ ಮೆರೆದಿದ್ದಾರೆ ಎಂದು ತಿಳಿಸಿದರು.

ಸ್ವಚ್ಛ,ದಕ್ಷ, ಸಂಭಾವಿತ, ರಾಷ್ಟ್ರಪತಿಗಳಾಗಿ ಈ ದೇಶವನ್ನು ಮುನ್ನಡೆಸಿದ ಕೀರ್ತಿ ಕಲಾಂ ಅವರಿಗೆ ಸಲ್ಲುತ್ತದೆ. ಜ್ಞಾನ,ವಿಜ್ಞಾನಗಳ ಸಂಗಮ ಒಳಗೊಂಡ ಮಹಾನ್ ಚೇತನ ಇವರಾಗಿದ್ದು, ಏನಾದರೂ ಆಗು,ಮೊದಲು ನೀ ಮಾನವನಾಗು,ಎಂಬ ಕವಿ ವಾಣಿಯಂತೆ ತಮ್ಮ ಜೀವನ ಸಾಗಿಸುವ ಮೂಲಕ ದೇಶದೆಲ್ಲೆಡೆ ಖ್ಯಾತಿ ಗಳಸಿದರು. ಇಂದಿನ ಯುವ ಪೀಳಿಗೆ ಕಲಾಂ ಅವರ ಆದರ್ಶಗಳನ್ನು ತಮ್ಮ ಜೀವನಲ್ಲಿ ಮೈಗೂಡಿಸಿಕೊಂಡರೆ ಉನ್ನತ ಸ್ಥಾನಕ್ಕೆರಲು ಸಹಕಾರಿಯಾಗಲಿದೆ ಎಂದು ಸಲಹೆ ನೀಡಿದರು.

ಅಬ್ದುಲ್ ಕಲಾಂ ಜನ್ಮದಿನಾಚರಣೆ ಪ್ರಯುಕ್ತ ಶಾಂತಿನಗರದ ಸಾವಿರಾರು ಬಡ ಜನರಿಗೆ ಸಿಹಿ ಹಂಚಿಕೆ ಮಾಡುವುದರ ಜತೆಗೆ ಊಟ ವ್ಯವಸ್ಥೆ ಮಾಡಲಾಗಿತ್ತು.ಸಂಘದ ಪದಾಧಿಕಾರಿಗಳಾದ ಬದರ್ ಖಾನ್, ತಬ್ರಸ್, ಶಾಂತಿನಗರ ಕಾಂಗ್ರೆಸ್ ವಾರ್ಡ್ ಅಧ್ಯಕ್ಷ ಅಬ್ಬಾಸ್, ಎಸ್,ಎನ್ ರಾಜು ಹಾಗೂ ಜಾಗೃತಿ ಟ್ರಸ್ಟ್ ಅಧ್ಯಕ್ಷ ಬಿ.ನಾಗೇಶ್ ಉಪಸ್ಥಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net