ಶನಿವಾರಸಂತೆ ಎಪಿಸಿಎಂಎಸ್‌ಗೆ 21.32 ಲಕ್ಷ ರೂ. ನಿವ್ವಳ ಲಾಭ

24ss1dharmappa maatu
ಶನಿವಾರಸಂತೆ ವ್ಯವಸಾಯೋತ್ಪನ್ನ ಮಾರಾಟ ಸಹಕಾರ ಸಂಘದ ಮಹಾಸಭೆಯಲ್ಲಿ ಅಧ್ಯಕ್ಷ ಡಿ.ಬಿ.ಧರ್ಮಪ್ಪ ಮಾತನಾಡಿದರು. ಶರತ್‌ಶೇಖರ್, ಸುಬ್ಬಪ್ಪ, ಎಸ.ಎಂ.ಉಮಾಶಂಕರ್, ಜಿ.ಜಿ.ಪರಮೇಶ್, ಕುಮಾರ್ ನಾಯಕ್, ಗಿರಿಜಾ ಕರುಣಾಕರ್, ಎಚ್.ವಿ.ಮಹಾಂತಪ್ಪ, ದೀಪಕ್, ಮಂಜುನಾಥ್, ರಾಮಯ್ಯ, ಸಾಗರ್ ಇದ್ದರು.
Published on

ಶನಿವಾರಸಂತೆ: ಸಂಘದ ಸದಸ್ಯರ ಸಹಕಾರ ಮತ್ತು ಸಂಘದ ಸಿಬ್ಬಂದಿ ಉತ್ತಮ ಕಾರ್ಯನಿರ್ವಹಣೆಯಿಂದ ಸಂಘವು ಅಭಿವೃದ್ಧಿ ಹೊಂದಲು ಸಹಕಾರಿಯಾಗುತ್ತದೆ ಎಂದು ಶನಿವಾರಸಂತೆ ವ್ಯವಸಾಯೋತ್ಪನ್ನ ಮಾರಾಟ ಸಹಕಾರ ಸಂಘದ ಅಧ್ಯಕ್ಷ ಡಿ.ಬಿ.ಧರ್ಮಪ್ಪ ಅಭಿಪ್ರಾಯಪಟ್ಟರು.

ಸ್ಥಳೀಯ ಭಾರತಿ ವಿದ್ಯಾಸಂಸ್ಥೆ ಸಭಾಂಗಣದಲ್ಲಿ ಆಯೋಜಿಸಿದ್ದ ಸಂಘದ 2024-25ನೇ ಸಾಲಿನ ವಾರ್ಷಿಕ ಮಹಾಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿ, ಸಂಘವು ಪ್ರಸಕ್ತ ಸಾಲಿನಲ್ಲಿ 21.32 ಲಕ್ಷ ರೂ. ನಿವ್ವಳ ಲಾಭ ಗಳಿಸಿದೆ. ಸಂಘದ ಸದಸ್ಯರ ಸಹಕಾರ ಮತ್ತು ಸಂಘದ ಸಿಬ್ಬಂದಿ, ನೌಕರರ ಉತ್ತಮ ಕಾರ್ಯನಿರ್ವಣೆಯಿಂದ ಲಾಭ ಗಳಿಸಲು ಸಾಧ್ಯವಾಗಿದೆ. ಈ ನಿಟ್ಟಿನಲ್ಲಿ ಸಹಕಾರಿಗಳು ಇದೇ ರೀತಿ ಸಹಕಾರ ನೀಡಿದರೆ ಮುಂದಿನ ಸಾಲಿನಲ್ಲಿ ಮತ್ತಷ್ಟು ಸಂಘಕ್ಕೆ ಮತ್ತಷ್ಟು ಲಾಭ ತಂದುಕೊಡಲು ಪ್ರಯತ್ನಿಸಲಾಗುವುದು. ಸಂಘದ ಮೂಲಕ ರೈತರಿಗೆ ಉಪಯೋಗುವಂತಹ ಸೇವೆ ನೀಡಲಾಗುವುದು. ಈ ನಿಟ್ಟಿನಲ್ಲಿ ಸಹಕಾರಿಗಳು ನಮ್ಮ ಸಂಘದಲ್ಲಿ ವ್ಯವಹಾರ ನಡೆಸುವ ಮೂಲಕ ಸಂಘದ ಪ್ರಗತಿಗೆ ಸಹಕರಿಸುವಂತೆ ಮನವಿ ಮಾಡಿದರು.

ಮಹಾಸಭೆಯಲ್ಲಿ ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎನ್.ಪಿ.ಶಿವರಾಜು ವಾರ್ಷಿವರದಿ ಮತ್ತು ಲೆಕ್ಕಪರಿಶೋಧ ವರದಿ ಮಂಡಿಸಿ, ಸಂಘದಲ್ಲಿ 609 ಸದಸ್ಯರಿದ್ದು 2024-25ನೇ ಸಾಲಿಗೆ ಅನ್ವಯವಾಗುವಂತೆ ಶೇ. 9ರಷ್ಟು ಪ್ರಗತಿ ಹೊಂದಿದೆ. 2024-25ನೇ ಸಾಲಿನಲ್ಲಿ ಗೊಬ್ಬರ, ಕ್ರಿಮಿನಾಶಕ ಮಾರಾಟ, ಹತ್ಯಾರು ಮಾರಾಟ ಸೇರಿದಂತೆ ವಿವಿಧ ವ್ಯವಹಾರ ಮೂಲಕ 9.53 ಕೋಟಿ ರೂ. ರೂಗಳಷ್ಟು ವ್ಯಾಪಾರ ವಹಿವಾಟು ನಡೆಸಿ ಈ ಮೂಲಕ ಸಂಘವು 2024-25ನೇ ಸಾಲಿನಲ್ಲಿ 21.32 ಲಕ್ಷ ರೂ.ಗಳಷ್ಟು ನಿವ್ವಳ ಲಾಭ ಗಳಿಸಿದೆ ಎಂದು ಹೇಳಿದರು.

ಮಹಾಸಭೆಯಲ್ಲಿ ಸಹಕಾರಿಗಳಾದ ಸುಬ್ಬಪ್ಪ, ಎಸ್.ಎಂ.ಉಮಾಶಂಕರ್, ಮೋಹನ್ ಮುಂತಾದವರು ಸಂಘದ ಬೆಳವಣಿಗೆ ಕುರಿತು ಸಲಹೆ ನೀಡಿದರು. ಮಹಾಸಭೆಯಲ್ಲಿ ಸಂಘದ ಉಪಾಧ್ಯಕ್ಷ ಕುಮಾರ್ ನಾಯಕ್, ನಿರ್ದೇಶಕರಾದ ಜಿ.ಜಿ.ಪರಮೇಶ್, ಎಚ್.ವಿ.ಮಹಾಂತಪ್ಪ, ದೀಪಕ್, ಮಂಜುನಾಥ್, ಗಿರಿಜಾ ಕರುಣಾಕರ್, ದೇವಾಂಬಿಕ ಮಹೇಶ್, ಜಿ.ಬಿ.ಪರಮೇಶ್, ರಾಮಯ್ಯ, ಸಾಗರ್, ಸಂಘದ ಸಿಬ್ಬಂದಿ ಹಾಜರಿದ್ದರು. ಈ ಸಂದರ್ಭ ಹತ್ತನೆ ತರಗತಿ ಮತ್ತು ಪಿಯುಸಿ ಪರೀಕ್ಷೆಯಲ್ಲಿ ಹೆಚ್ಚು ಅಂಕಗಳನ್ನು ಪಡೆದ ಸಂಘದ ಸದಸ್ಯರ ಮಕ್ಕಳನ್ನು ಸಂಘದ ವತಿಯಿಂದ ಪ್ರೋತ್ಸಾಹಿಸಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net