

ಬೆಂಗಳೂರು: ಶ್ವಾಸಕೋಶದ ಕ್ಯಾನ್ಸರ್‌ನಿಂದ ನಿಧನರಾಗಿದ್ದ ನಿರೂಪಕಿ ಹಾಗೂ ನಟಿ ಅಪರ್ಣಾ ವಸ್ತಾರೆ ಅವರ ಅಂತ್ಯಕ್ರಿಯೆ ಶುಕ್ರವಾರ ಸಕಲ ಪೊಲೀಸ್ ಪೊಲೀಸ್ ಗೌರವದೊಂದಿಗೆ ನೆರವೇರಿತು.
ಚಿತ್ರರಂಗದ ಗಣ್ಯರು, ಸಾಹಿತಿಗಳು, ಗಾಯಕರು, ಕನ್ನಡಪರ ಹೋರಾಟಗಾರರು ಮತ್ತು ಸಾವಿರಾರು ಅಭಿಮಾನಿಗಳ ನಡುವೆ ಬನಶಂಕರಿಯ ವಿದ್ಯುತ್ ಚಿತಾಗಾರದಲ್ಲಿ ಬ್ರಾಹ್ಮಣ ಸಂಪ್ರದಾಯದಂತೆ ಅಂತ್ಯಕ್ರಿಯೆ ನೆರವೇರಿತು. ಅಪರ್ಣಾ ಅವರ ಪತಿ ಹಾಗೂ ಲೇಖಕ ನಾಗರಾಜ್ ವಸ್ತಾರೆ ಅವರು ಅಂತಿಮ ವಿಧಿವಿಧಾನಗಳನ್ನು ನೆರವೇರಿಸಿದರು. ಪಂಚಭೂತಗಳಲ್ಲಿ ಅಪರ್ಣಾ ಲೀನರಾದರು. ಸರ್ಕಾರದ ಹಲವು ಕಾರ್ಯಕ್ರಮಗಳಿಗೆ ನಿರೂಪಕಿಯಾಗಿದ್ದ ಅಪರ್ಣಾ ಅವರಿಗೆ ಪೊಲೀಸ್ ಗೌರವ ನೀಡಲಾಯಿತು.
ಭಾವಪೂರ್ಣ ಶ್ರದ್ಧಾಂಜಲಿ ಸಲ್ಲಿಸಿದ ಗಣ್ಯರು:
ಇದಕ್ಕು ಮುನ್ನ ಅಪರ್ಣಾ ಅವರ ಪಾರ್ಥಿವ ಶರೀರವನ್ನು ಬನಶಂಕರಿಯಲ್ಲಿರುವ ನಿವಾಸದಲ್ಲಿ ಅಂತಿಮ ದರ್ಶನಕ್ಕೆ ಇಡಲಾಗಿತ್ತು. ಹಿರಿಯ ನಟರಾದ ಶ್ರೀನಾಥ್, ರಮೇಶ್‌ಭಟ್, ರಾಘವೇಂದ್ರ ರಾಜ್‌ಕುಮಾರ್, ಎಸ್.ನಾರಾಯಣ್, ಸುಂದರ್ ರಾಜ್, ಸಿಹಿಕಹಿ ಚಂದ್ರು, ಸೃಜನ್ ಲೋಕೇಶ್, ಮಾಸ್ಟರ್ ಆನಂದ್, ನಟಿಯರಾದ ತಾರ, ಸುಧಾರಾಣಿ, ನಿರೂಪಕಿ ಶ್ವೇತ ಚೆಂಗಪ್ಪ, ಕನ್ನಡಪರ ಹೋರಾಟಗಾರ ವಾಟಳ್ ನಾಗರಾಜ್, ನಿರ್ದೇಶಕ ಟಿ.ಎಸ್.ನಾಗಭರಣ, ನಿರ್ದೇಶಕ ಟಿ.ಎನ್.ಸೀತಾರಾಂ, ಸಾಹಿತಿ ಎಚ್.ಎಸ್.ವೆಂಕಟೇಶ್ ಮೂರ್ತಿ ಸೇರಿದಂತೆ ಕಿರುತೆರೆ ಕಲಾವಿದರು, ಚಿತ್ರರಂಗದ ಗಣ್ಯರು, ಸಾಹಿತಿಗಳು, ಬರಹಗಾರರು, ಅಂತಿಮ ದರ್ಶನ ಪಡೆದು ಪಡೆದು ಭಾವಪೂರ್ಣ ಶ್ರದ್ಧಾಂಜಲಿ ಸಲ್ಲಿಸಿದರು. ರಾಜಕೀಯ ವ್ಯಕ್ತಿಗಳು, ಸರ್ಕಾರಿ ಅಧಿಕಾರಿಗಳು ಅಭಿಮಾನಿಗಳು ಕುಟುಂಬಸ್ಥರು ಕಂಬನಿ ಮಿಡಿದರು.
ಭಾವುಕ ಕವನ ಬರೆದ ಪತಿ:
ಪತಿ ಹಾಗೂ ಸಾಹಿತಿ ನಾಗರಾಜ್ ವಸ್ತಾರೆ ಅವರು ಅಗಲಿದ ಪತ್ನಿಯ ಕುರಿತು ಭಾವುಕ ಕವನ ಬರೆದು ೇಸ್‌ಬುಕ್‌ನಲ್ಲಿ ಹಂಚಿಕೊಂಡಿದ್ದರು. ಇದನ್ನು ಸಾಕಷ್ಟು ಜನ ಶೇರ್ ಮಾಡುವ ಮೂಲಕ ಅರ್ಪಣಾ ಸಾವಿಗೆ ಕಂಬನಿ ಮಿಡಿದಿದ್ದಾರೆ.
ಸಂತಾಪ ಸೂಚಿಸಿದ ಬಿಎಂಆರ್‌ಸಿಎಲ್:
ಅಪರ್ಣಾ ಅವರು ನಮ್ಮ ಮೆಟ್ರೋಗೆ ಧ್ವನಿಯಾಗಿದ್ದರು. ಮೆಟ್ರೋ ನಿಲ್ದಾಣ ಮತ್ತು ರೈಲುಗಳಲ್ಲಿ ಸೂಚನೆಗಳು ಅಪರ್ಣಾ ಅವರು ಧ್ವನಿಯಲ್ಲಿ ಕೇಳುತ್ತವೆ. ಮುಂದಿನ ನಿಲ್ದಾಣ ನಾಡಪ್ರಭು ಕೆಂಪೇಗೌಡ ನಿಲ್ದಾಣ.., ಬಾಗಿಲುಗಳು ಎಡಕ್ಕೆ ತೆರೆಯಲಿವೆ ಎಂಬ ಶಾರೀರ ಅಪರ್ಣಾ ಅವರದ್ದಾಗಿದೆ. ಆದರೆ, ಇದೀಗ ಶಾರೀರ ಇದ್ದು ಶರೀರ ಇಹಲೋಕ ತ್ಯಜಿಸಿದೆ. ನಿರೂಪಕಿ ಅಪರ್ಣಾ ಅವರಿಗೆ ಬಿಎಂಆರ್‌ಸಿಎಲ್ ಸಂತಾಪ ಸೂಚಿಸಿದ್ದಾರೆ. ನಮ್ಮ ಮೆಟ್ರೋದಲ್ಲಿ ವಾಯ್ಸ್ ಅನೌನ್ಸ್ ಮಾಡವ ಮೂಲಕ ಗೌರವದ ಸಂತಾಪ ಸೂಚಿಸಿದ್ದಾರೆ.