

ಆಂಧ್ರಪ್ರದೇಶ: ಶಾರೂಖ್ ಖಾನ್ ನಟನೆಯ 'ಜವಾನ್' ರಿಲೀಸ್ ದಿನವೇ ಕರಾವಳಿ ಬೆಡಗಿ, ಟಾಲಿವುಡ್ ಬ್ಯೂಟಿ ನಟಿ ಅನುಷ್ಕಾ ಶೆಟ್ಟಿ ಅಭಿನಯದ 'ಮಿಸ್ ಶೆಟ್ಟಿ ಮಿಸ್ಟರ್ ಪೋಲಿಶೆಟ್ಟಿ' ಚಿತ್ರವು ಅದ್ದೂರಿಯಾಗಿ ಚಿತ್ರಮಂದಿರಗಳಲ್ಲಿ ಬಿಡುಗಡೆಗೊಂಡು, ಜಾಗತಿಕ ಬಾಕ್ಸ್ ಆಫೀಸ್ನಲ್ಲಿ ನಿರೀಕ್ಷೆಗೆ ತಕ್ಕಂತೆ ಲಾಭ ಗಳಿಸಿತು. ಇದೀಗ ಚಿತ್ರವು ಒಟಿಟಿಗೆ ಲಗ್ಗೆಯಿಟ್ಟಿದ್ದು, ಸದ್ಯ ಈ ಸಂಗತಿ ಅನುಷ್ಕಾ ಫ್ಯಾನ್ಸ್ಗಳಲ್ಲಿ ಸಂತಸ ಮೂಡಿಸಿದೆ.
ಮಹೇಶ್ ಬಾಬು. ಪಿ ನಿರ್ದೇಶನದ ರೋಮ್ಯಾಂಟಿಕ್-ಕಾಮಿಡಿ ಜಾನರ್ನ ಈ ಚಿತ್ರದಲ್ಲಿ ನವೀನ್ ಪೋಲಿಶೆಟ್ಟಿ ಮತ್ತು ಅನುಷ್ಕಾ ಶೆಟ್ಟಿ ಮುಖ್ಯಭೂಮಿಕೆಯಲ್ಲಿ ಅಭಿನಯಿಸಿದ್ದಾರೆ. ಸಿನಿಪ್ರೇಕ್ಷಕರು ಮತ್ತು ಅಭಿಮಾನಿಗಳನ್ನು ಚಿತ್ರಮಂದಿರಗಳಲ್ಲಿ ಮನರಂಜಿಸಿದ ನಂತರ ಇದೀಗ ಒಟಿಟಿ ಪ್ಲಾಟ್ಫಾರ್ಮ್ನಲ್ಲೂ ಮುಂದುವರೆಸಲು ಸಜ್ಜಾಗಿದೆ.
ಸಿನಿಮಾ ಇದೇ ಅಕ್ಟೋಬರ್ 5 ರಿಂದ ನೆಟ್‌ಫ್ಲಿಕ್ಸ್‌ನಲ್ಲಿ ಸ್ಟ್ರೀಮಿಂಗ್‌ಗೆ ಲಭ್ಯವಿದ್ದು, ತೆಲುಗು, ಹಿಂದಿ, ತಮಿಳು, ಮಲಯಾಳಂ ಮತ್ತು ಕನ್ನಡ ಭಾಷೆಗಳಲ್ಲಿ ಸ್ಟ್ರೀಮಿಂಗ್ ಆಗಲಿದೆ. ಚಿತ್ರದಲ್ಲಿ ಜಯಸುಧಾ, ಮುರಳಿ ಶರ್ಮಾ, ಸೋನಿಯಾ ದೀಪ್ತಿ, ಅಭಿನವ್ ಗೋಮತಮ್, ಭದ್ರಮ್, ತುಳಸಿ ಮುಂತಾದವರ ತಾರಾಗಣವಿದೆ,(ಏಜೆನ್ಸೀಸ್).