

ಅಮೆರಿಕಾ: ಕರಾವಳಿ ಬೆಡಗಿ, ಟಾಲಿವುಡ್ ನಟಿ ಅನುಷ್ಕಾ ಶೆಟ್ಟಿ ಅಭಿನಯದ ಬಹುನಿರೀಕ್ಷಿತ 'ಮಿಸ್ ಶೆಟ್ಟಿ ಮಿಸ್ಟರ್ ಪೋಲಿಶೆಟ್ಟಿ' ಚಿತ್ರ ಸೆಪ್ಟಂಬರ್ 07 ರಂದು ಜಾಗತಿಕವಾಗಿ ಬಿಡುಗಡೆಗೊಂಡು ಸಿನಿಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ಪಡೆದುಕೊಳ್ಳುವುದರ ಜತೆಗೆ ಹೆಚ್ಚಿನ ಪ್ರದರ್ಶನಗಳನ್ನು ಕಾಣುತ್ತಿದೆ.
ಭಾರತೀಯ ಚಿತ್ರಮಂದಿರಗಳಲ್ಲಿ ಅನುಷ್ಕಾ ಶೆಟ್ಟಿ ಮತ್ತು ನವೀನ್ ಪೋಲಿಶೆಟ್ಟಿ ಮುಖ್ಯಭೂಮಿಕೆಯಲ್ಲಿ ನಟಿಸಿರುವ 'ಮಿಸ್ ಶೆಟ್ಟಿ ಮಿಸ್ಟರ್ ಪೋಲಿಶೆಟ್ಟಿ' ಸಿನಿಮಾಗೆ ಸಿನಿಪ್ರೇಕ್ಷಕರು ಪಾಸಿಟಿವ್ ಪ್ರತಿಕ್ರಿಯೆ ನೀಡಿದ್ದು, ರೋಮ್ಯಾಂಟಿಕ್-ಕಾಮಿಡಿ ಜಾನರ್ನ ಚಿತ್ರ ಜಾಗತಿಕ ಬಿಡುಗಡೆಗೊಂಡು ಉತ್ತಮ ಗಳಿಕೆಯನ್ನು ಕಂಡಿದೆ.
ಇತ್ತೀಚಿನ ವರದಿ ಪ್ರಕಾರ, ಚಿತ್ರವು ಅಮೆರಿಕಾ ಬಾಕ್ಸ್ ಆಫೀಸ್ನಲ್ಲಿ ಈಗಾಗಲೇ 300 ಸಾವಿರ ಡಾಲರ್ ಆದಾಯವನ್ನು ಗಳಿಸಿದ್ದು, ವಾರಾಂತ್ಯಕ್ಕೂ ಮುನ್ನವೇ ಮೊದಲಾರ್ಧ ಮಿಲಿಯನ್ ಮಾರ್ಕ್ ಅನ್ನು ಸುಲಭವಾಗಿ ತಲುಪಲಿದೆ ಎಂದು ವರದಿ ತಿಳಿಸಿದೆ.
ಮಹೇಶ್ ಬಾಬು ನಿರ್ದೇಶನದ ಪ್ಯಾನ್ ಇಂಡಿಯಾ ಚಿತ್ರ 'ಮಿಸ್ ಶೆಟ್ಟಿ ಮಿಸ್ಟರ್ ಪೋಲಿಶೆಟ್ಟಿ' ಚಿತ್ರದಲ್ಲಿ ಜಯಸುಧಾ, ಮುರಳಿ ಶರ್ಮಾ, ಸೋನಿಯಾ ದೀಪ್ತಿ, ಅಭಿನವ್ ಗೋಮಟಮ್, ಭದ್ರಂ, ತುಳಸಿ ಮುಂತಾದವರು ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ,(ಏಜೆನ್ಸೀಸ್).