ನಟಿ ಅನುಷ್ಕಾ ಶರ್ಮಾಗೂ ಶ್ರೀರಾಮನಗರಿಗೂ ಇದೆ 36 ವರ್ಷದ ನಂಟು!

anushka sharma
Published on

ನವದೆಹಲಿ: ನಟಿ ಅನುಷ್ಕಾ ಶರ್ಮಾ ಪತಿ ವಿರಾಟ್​​ ಕೊಹ್ಲಿ ಜತೆ ಅಯೋಧ್ಯೆ ಶ್ರೀರಾಮ ಮಂದಿರ ಉದ್ಘಾಟನೆಯ ಆಹ್ವಾನ ಶ್ವೀಕಾರ ಮಾಡಿದ್ದಾರೆ. ಈ ಕುರಿತಾದ ಫೋಟೋ ಸೋಶಿಯಲ್​ ಮೀಡಿಯಾದಲ್ಲಿ ವೈರಲ್​ ಆಗಿದೆ. ಈ ಬೆನ್ನಲ್ಲೇ ಅನುಷ್ಕಾ ಶರ್ಮಾ ಅವರಿಗೂ ಅಯೋಧ್ಯೆಗೂ ಇರುವ ನಂಟಿನ ಕುರಿತಾಗಿ ಸುದ್ದಿಯೊಂದು ಸೋಶಿಯಲ್​ ಮೀಡಿಯಾದಲ್ಲಿ ಚರ್ಚೆಯಾಗುತ್ತಿದೆ.

ಅಂದಹಾಗೆ ಅಯೋಧ್ಯೆಯೊಂದಿಗೆ ಅನುಷ್ಕಾ ಶರ್ಮಾ 36 ವರ್ಷದ ಸಂಪರ್ಕವನ್ನು ಹೊಂದಿದ್ದಾರೆ. ಇದು ನಿಮಗೆ ತಿಳಿದಿದೆಯೇ. ಈ ಸಂಪರ್ಕ ಏನು ಎಂಬುದರ ಕುರಿತಾಗಿ ನಾವು ಇಂದು ನಿಮಗೆ ಹೇಳೋಣ...

ವಾಸ್ತವಾಗಿ ಅನುಷ್ಕಾ ಶರ್ಮಾ 1988 ಮೇ 1 ರಂದು ಜನಿಸಿದರು. ನಟಿ ಜನಿಸಿದ್ದು ಮಿಲಿಟಿರಿ ಆಶ್ಪತ್ರೆಯಲ್ಲಿ.  ಆದರೆ, ಅನುಷ್ಕಾ ಶರ್ಮಾ ಆಸ್ಪತ್ರೆ ಇರುವುದು ಬೇರೆಲ್ಲೂ ಅಲ್ಲ ಅಯೋಧ್ಯೆಯಲ್ಲಿ. ಅಯೋಧ್ಯೆಯಲ್ಲಿ ಜನಿಸಿ ಬೆಂಗಳೂರಿನಲ್ಲಿ ಬೆಳೆದವರು.

ನಟಿ ಅನುಷ್ಕಾ ಶರ್ಮಾ ತಂದೆ, ಕರ್ನಲ್ ಅಜಯ್​ ಕುಮಾರ್​​ ಶರ್ಮಾ ಅಯೋಧ್ಯೆಯ ಭಾರತೀಯ ಸೇನೆಯ ಡೋಗ್ರಾ ರೆಜಿಮೆಂಟ್​ನಲ್ಲಿ ನಿಯೋಜನೆಗೊಂಡಿದ್ದರು.  ಈವೇಳೆ ಅಜಯ್​ ಕುಮಾರ್​​ ಶರ್ಮಾ ಅವರ ಪತ್ನಿ ಅನುಷ್ಮಾ ಅವರಿಗೆ ಅಯೋಧ್ಯೆಯಲ್ಲಿ  ಜನ್ಮ ನೀಡಿದರು.

ನಟಿಯಾಗಿ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿ, ಚಿತ್ರ ನಿರ್ಮಾಣ ಮತ್ತು ನಟನೆ ಎರಡರಲ್ಲೂ ಗರಿಮೆ ಗಳಿಸಿದ್ದಾರೆ. ಅಯೋಧ್ಯೆಯಲ್ಲಿ ಜನಿಸಿ ಬೆಂಗಳೂರಿನಲ್ಲಿ ಬೆಳೆದವರು. ಬೆಂಗಳೂರಿನ ಮೌಂಟ್ ಕಾರ್ಮೆಲ್ ಕಾಲೇಜಿನಲ್ಲಿ ಪದವಿ ಪಡೆದರು. ಪದವಿಯ ನಂತರ ಮಾಡೆಲಿಂಗ್  ಸೆಳೆತಕ್ಕೆ ಒಳಗಾಗಿ ಮುಂಬೈಗೆ ತೆರಳಿ, ಪ್ರಸಾದ್ ಬಿದ್ದಪ್ಪರ ಕಂಪನಿಯಲ್ಲಿ ಕಲಿಕೆ  ಪ್ರಾರಂಭಿಸಿದರು.

2007 ರಲ್ಲಿ ವೆಂಡೆಲ್ ರಾಡ್ರಿಕ್ಸ್ ನಲ್ಲಿ ವಸ್ತ್ರ ವಿನ್ಯಾಸಕಿಯಾಗಿ ಕೆಲಸ ಪ್ರಾರಂಭಿಸಿ ನಂತರ ಮುಂಬೈಗೆ ತೆರಳಿ ಮಾಡೆಲ್ ಆಗಿ ವೃತ್ತಿಜೀವನ ಪ್ರಾರಂಭಿಸಿದರು. ನಂತರ ಹಲವಾರು ಸಿನಿಮಾಗಳಲ್ಲಿ ನಟಿಸಿದ್ದಾರೆ. ಅನುಷ್ಕಾ ಕ್ರಿಕೆಟ್ ಪಟು ವಿರಾಟ್ ಕೊಹ್ಲಿರವರ ಪತ್ನಿ.

ವಿರಾಟ್ ಮತ್ತು ಅನುಷ್ಕಾ 2017 ರಲ್ಲಿ ಇಟಲಿಯಲ್ಲಿ ಮದುವೆಯಾದರು. ಮತ್ತು ಜನವರಿ 2021 ರಲ್ಲಿ ಮಗಳು ವಾಮಿಕಾ ಅವರನ್ನು ಸ್ವಾಗತಿಸಿದರು . ಅವರು ಇತ್ತೀಚೆಗೆ ಮೂರು ವರ್ಷಕ್ಕೆ ಕಾಲಿಟ್ಟರು.

ಅನುಷ್ಕಾ ಶರ್ಮಾ ಧಾರ್ಮಿಕ ಚಟುವಟಿಕೆಗಳಲ್ಲಿ ಆಸಕ್ತಿ ಹೊಂದಿದ್ದಾರೆ. ಈ ಕಾರಣಕ್ಕಾಗಿಯೆ ಅವರು ವೃಂದಾವನ, ಉಜ್ಜಯಿನಿ ಮಹಾಕಾಲ್​​ ಮುಂತಾದ ಸ್ಥಳಗಳಿಗೆ ಭೇಟಿ ನೀಡುತ್ತಿರುತ್ತಾರೆ.

ಅನುಷ್ಕಾ ಒಂದು ವರ್ಷದ ಹಿಂದೆ ಚಕ್ಡಾ ಎಕ್ಸ್‌ಪ್ರೆಸ್ ಚಿತ್ರದ ಚಿತ್ರೀಕರಣವನ್ನು ಪೂರ್ಣಗೊಳಿಸಿದ್ದಾರೆ. ಆದರೆ ಅದು ಇನ್ನೂ ಬಿಡುಗಡೆಯ ದಿನಾಂಕವನ್ನು ಘೋಷಣೆ ಮಾಡಿಲ್ಲ. ಇದು ಮಾಜಿ ಭಾರತೀಯ ಕ್ರಿಕೆಟಿಗ ಜೂಲನ್ ಗೋಸ್ವಾಮಿ ಅವರ ಜೀವನಚರಿತ್ರೆ ಮತ್ತು ನೆಟ್‌ಫ್ಲಿಕ್ಸ್‌ನಲ್ಲಿ ಸ್ಟ್ರೀಮ್ ಆಗಲಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net