

ಬೆಂಗಳೂರು: ಬಾಲಿವುಡ್ ನಟಿ ಅನುಷ್ಕಾ ಶರ್ಮಾ ಅವರು ತಮ್ಮ ಎರಡನೇ ಗರ್ಭಧಾರಣೆಯ ಬಗ್ಗೆ ಕೆಲವು ಸಮಯದಿಂದ ಸುದ್ದಿಯಲ್ಲಿದ್ದಾರೆ. ಗರ್ಭಧಾರಣೆಯ ಸುದ್ದಿಯ ನಡುವೆ, ಅನುಷ್ಕಾ ಕೂಡ ಜನಮನದಿಂದ ದೂರವನ್ನು ಕಾಯ್ದುಕೊಳ್ಳುತ್ತಿದ್ದಾರೆ. ಇದೀಗ ಬೆಂಗಳೂರಿನಲ್ಲಿ ಪತಿ ವಿರಾಟ್ ಕೊಹ್ಲಿ ಜೊತೆ ಕಾಣಿಸಿಕೊಂಡಿದ್ದಾರೆ ಅನುಷ್ಕಾ. ಈ ವೇಳೆ ಜನರ ಕಣ್ಣು ಅನುಷ್ಕಾ ಬೇಬಿ ಬಂಪ್ ನತ್ತ ನೆಟ್ಟಿತು.
ಅನುಷ್ಕಾ ಪತಿ ವಿರಾಟ್ ಕೊಹ್ಲಿಯನ್ನು ಹುರಿದುಂಬಿಸಲು ಬೆಂಗಳೂರಿಗೆ ಆಗಮಿಸಿದ್ದಾರೆ. ಭಾರತೀಯ ಕ್ರಿಕೆಟ್ ತಂಡವು ಬೆಂಗಳೂರಿನಲ್ಲಿ ನೆದರ್ಲೆಂಡ್ಸ್‌ನೊಂದಿಗೆ ವಿಶ್ವಕಪ್ ಪಂದ್ಯವನ್ನಾಡಲಿದೆ. ಪಂದ್ಯವು ದೀಪಾವಳಿ (ನವೆಂಬರ್ 12) ಯಂದು ನಡೆಯಲಿದೆ. ಈ ಪಂದ್ಯದ ಮೊದಲು, ದಂಪತಿಗಳು ಒಟ್ಟಿಗೆ ನಡೆದು ಹೋಗುತ್ತಿರುವುದನ್ನು ನೋಡಬಹುದಾಗಿದ್ದು, ಇದೀಗ ವಿಡಿಯೋ ವೈರಲ್ ಆಗಿದೆ. ಅನುಷ್ಕಾ ಮತ್ತು ವಿರಾಟ್ ಇತ್ತೀಚೆಗೆ ಬೆಂಗಳೂರಿನ ಹೋಟೆಲ್‌ನಲ್ಲಿ ಒಟ್ಟಿಗೆ ಕಾಣಿಸಿಕೊಂಡಿದ್ದಾರೆ. ವಿರಾಟ್ ಮತ್ತು ಅನುಷ್ಕಾ ಕೈ ಕೈ ಹಿಡಿದು ನಡೆಯುತ್ತಿರುವುದು ಕಂಡು ಬಂದಿದ್ದು, ಈ ವೇಳೆ ಎಲ್ಲರ ಕಣ್ಣು ಅನುಷ್ಕಾ ಶರ್ಮಾ ಅವರ ಬೇಬಿ ಬಂಪ್ ಮೇಲೆ ಬಿದ್ದಿದೆ. ವಿಡಿಯೋ ಕೆಲವೇ ಸೆಕೆಂಡುಗಳ ಕಾಲವಿದ್ದು, ಜನರು ಅನುಷ್ಕಾ ಅವರ ಬೇಬಿ ಬಂಪ್ ಅನ್ನು ಗಮನಿಸಿದರು. ಸಡಿಲವಾದ ಕಪ್ಪು ಡ್ರೆಸ್‌ನಲ್ಲಿ ಅನುಷ್ಕಾ ಅವರ ಬೇಬಿ ಬಂಪ್ ಸ್ಪಷ್ಟವಾಗಿ ಗೋಚರಿಸುತ್ತದೆ.
ಅನುಷ್ಕಾ ಮತ್ತು ವಿರಾಟ್ ವಿಡಿಯೋವನ್ನು ಹಂಚಿಕೊಳ್ಳುವಾಗ ಇನ್‌ಸ್ಟಂಟ್ ಬಾಲಿವುಡ್ ಶೀರ್ಷಿಕೆಯಲ್ಲಿ ಹೀಗೆ ಬರೆದಿದೆ, "ವಿರಾಟ್ ಕೊಹ್ಲಿ ಮತ್ತು ಅನುಷ್ಕಾ ಶರ್ಮಾ ಈ ಗುಡ್ ನ್ಯೂಸ್ ಖಚಿತಪಡಿಸಿದ್ದಾರೆ, ಅಭಿಮಾನಿಗಳಿಗೆ ಈ ಸುದ್ದಿ ಸಂತೋಷ ಉಂಟುಮಾಡಿದ್ದು, ಮಗುವಿಗೆ ಶೀಘ್ರದಲ್ಲೇ ಜನನ ನೀಡಲಿದ್ದು, ವಿರುಷ್ಕಾ ಕುಟುಂಬದಲ್ಲಿ ಹೊಸ ಸೇರ್ಪಡೆಯನ್ನು ಗಮನಿಸಬಹುದು''.
ಅನುಷ್ಕಾ ಶರ್ಮಾ ಅವರ ವಿಡಿಯೋ ನೋಡಿದ ಜನರು ಕೂಡ ಆಕೆ ಗರ್ಭಿಣಿ ಎಂದು ಊಹಿಸುತ್ತಿದ್ದಾರೆ. ವಿಡಿಯೋ ನೋಡಿ ಬಳಕೆದಾರರು "ಆಕೆ ಗರ್ಭಿಣಿಯಾಗಿದ್ದಾರೆ, ವಿಶ್ವಕಪ್ ನಂತರ ಇಬ್ಬರೂ ಘೋಷಿಸುತ್ತಾರೆ ಎಂದು ನಾನು ಭಾವಿಸುತ್ತೇನೆ'', "ಮೊದಲ ಗರ್ಭಾವಸ್ಥೆಯಲ್ಲಿಯೂ ಅವರು ಹೀಗೇ ಇದ್ದರು", "ವಿಶ್ವಕಪ್ ಬರುತ್ತದೆ ಮತ್ತು ಮಗು ಕೂಡ ಬರುತ್ತದೆ'' "ಅನುಷ್ಕಾ 100% ಗರ್ಭಿಣಿ'', "ಎರಡನೇ ವಿರಾಟ್ ಬರಲಿದ್ದಾರೆ" "ಇದು ಒಳ್ಳೆಯ ಸುದ್ದಿ ಮಾಶಾ ಅಲ್ಲಾ ಮಾಶಾ ಅಲ್ಲಾ ಅಲ್ಲಾ ಅವರನ್ನು ಇನ್ನಷ್ಟು ಆಶೀರ್ವದಿಸಲಿ" ಎಂದೆಲ್ಲಾ ಹೇಳುತ್ತಿದ್ದಾರೆ. ಅಲ್ಲದೇ ಅನೇಕರು ಅಭಿನಂದನೆ ಸಲ್ಲಿಸಿದ್ದಾರೆ.
ಅನುಷ್ಕಾ ಶರ್ಮಾ ಅವರ ಎರಡನೇ ಗರ್ಭಧಾರಣೆಯ ಸುದ್ದಿ ಬಹಳ ಸಮಯದಿಂದ ಹೆಡ್ಲೈನ್ಸ್ನಲ್ಲಿದೆ. ಆದರೆ ಇದನ್ನು ಅನುಷ್ಕಾ ಅಥವಾ ವಿರಾಟ್ ಅಧಿಕೃತವಾಗಿ ಖಚಿತಪಡಿಸಿಲ್ಲ. ಅಂದಹಾಗೆ ದಂಪತಿಗಳು 2021 ರಲ್ಲಿ ಮೊದಲ ಮಗಳನ್ನು ಸ್ವಾಗತಿಸಿದರು.