

ಮಂಡ್ಯ: ದೇವಸ್ಥಾನಕ್ಕೆ ಭೇಟಿ ನೀಡಿದ್ದ ಸಂದರ್ಭದಲ್ಲಿ ಕರ್ತವ್ಯನಿರತ ಮಹಿಳಾ ಪೊಲೀಸ್ ಅಧಿಕಾರಿ ಮೇಲೆ ಕಪಾಳಮೋಕ್ಷ ಮಾಡಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ತುಮಕೂರು ಗ್ರಾಮಾಂತರ ಶಾಸಕ ಬಿ. ಸುರೇಶ್ ಗೌಡ ಪುತ್ರಿ ಐಶ್ವರ್ಯ (Aishwarya Suresh Gowda) ಗೆ ನ್ಯಾಯಾಲಯ ನೀರಿಕ್ಷಣಾ ಜಾಮೀನನ್ನು ಅಂಗೀಕರಿಸಿ ಆದೇಶಿದೆ.
ಪೊಲೀಸ್ ಅಧಿಕಾರಿಯಲ್ಲಿ ಕ್ಷಮೆ ಕೋರಿದರೆ ಅರ್ಜಿ ವಿಚಾರಣೆ ನಡೆಸುವುದಾಗಿ ನ್ಯಾಯಾಲಯ ಹೇಳಿದ್ದು, ಐಶ್ವರ್ಯ ಗೌಡ, ವಿಡಿಯೋ ಮೂಲಕ ಪೊಲೀಸ್ ಅಧಿಕಾರಿಯಲ್ಲಿ ಕ್ಷಮೆ ಕೇಳಿದ ನಂತರ ನೀರಿಕ್ಷಣಾ ಜಾಮೀನನ್ನು ನೀಡಲಾಗಿದೆ.
ನ್ಯಾಯಾಲಯದ ಚಿತಾವಣೆಯಂತೆ, ಸುರೇಶ್ ಗೌಡ ಪುತ್ರಿ ಐಶ್ವರ್ಯ ಗೌಡ ವಿಡಿಯೋವೊಂದನ್ನು ಹಂಚಿಕೊಂಡಿದ್ದು, ಅದರಲ್ಲಿ, ನಾನು, ನನ್ನ ಎರಡು ಮಕ್ಕಳೊಂದಿಗೆ ಆಗಸ್ಟ್ 12 ರ ಭೀಮನ ಅಮವಾಸ್ಯೆಯ ದಿನ ಶ್ರೀರಂಗಪಟ್ಟಣದ ಆರತಿ ಉಕ್ಕಡ ದೇವಸ್ಥಾನಕ್ಕೆ ತೆರಳಿದ್ದೆ.
ಅಂದು ಅಲ್ಲಿ, ಹೆಚ್ಚಿನ ಸಂಖ್ಯೆಯಲ್ಲಿ ಜನ ಸೇರಿದ್ದರು. ನನ್ನ ಮಕ್ಕಳು ಹಠ ಮಾಡುತ್ತಿದ್ದು, ಒಬ್ಬ ತಾಯಿಯಾಯಿ ಅಲ್ಲಿದ್ದ ಪೊಲೀಸ್ ಸಿಬ್ಬಂದಿ ಜೊತೆ ಮಾತಿನ ಚಕಮಕಿ ನಡೆದಿದೆ. ಈ ವೇಳೆ ನಾನು ತಾಳ್ಮೆ ಕಳೆದುಕೊಂಡ ಪರಿಣಾಮ ಈ ಘಟನೆ ನಡೆದಿದೆ. ಆದರೆ ನಾನು, ನನ್ನ ತಾಳ್ಮೆಯನ್ನು ಕಳೆದುಕೊಳ್ಳಬಾರದಿತ್ತು.
ನನ್ನ ವರ್ತನೆಯಿಂದ, ಪೊಲೀಸ್ ಸಿಬ್ಬಂದಿಗೆ ಬೇಜಾರು ಅಥವಾ ನೋವಾಗಿದ್ದರೆ ಬೇಷರತ್ತಾಗಿ ಕ್ಷಮೆ ಕೇಳಲು ನಾನು ಸಿದ್ಧನಿದ್ದೆನೆಂದು ಶಾಸಕ, ಸುರೇಶ್ ಗೌಡ ಪುತ್ರಿ ಐಶ್ವರ್ಯ ಗೌಡ ಕ್ಷಮೆಯಾಚಿಸಿದ್ದಾರೆ.
ಆಗಸ್ಟ್ 12 ರ ಭೀಮನ ಅಮವಾಸ್ಯೆ ದಿನ ಶ್ರೀರಂಗಪಟ್ಟಣದ ಆರತಿ ಉಕ್ಕಡ ದೇವಾಲಯಕ್ಕೆ ಶಾಸಕರ ಪುತ್ರಿ ಐಶ್ವರ್ಯ ಬೇಟಿ ನೀಡಿದ್ದರು. ಬಹಳ ಹೊತ್ತು ಸರತಿ ಸಾಲಿನಲ್ಲಿ ನಿಂತರೂ ದೇವರ ದರ್ಶನಕ್ಕೆ ವಿಳಂಬವಾಗಿದೆ. ಆಗ ಅಲ್ಲಿದ್ದ ಮಹಿಳಾ ಪೊಲೀಸ್ ಜೊತೆಗೆ ವಾಗ್ವಾದಕ್ಕೆ ಐಶ್ವರ್ಯ ಇಳಿದಿದ್ದಾರೆ.
ಮಹಿಳಾ ಪೊಲೀಸ್ ಕೂಡ ಏರು ಧ್ವನಿಯಲ್ಲಿ ಗದರಿದ ಹಿನ್ನಲೆ ತಾಳ್ಮೆ ಕಳೆದುಕೊಂಡ ಐಶ್ವರ್ಯ ಕರ್ತವ್ಯನಿರತ ಅಧಿಕಾರಿ ಮೇಲೆ ಕಪಾಳಮೋಕ್ಷ ಮಾಡಿದ್ದಾರೆ. ಇದು ರಾಜಕೀಯವಾಗಿ ಹಾಗೂ ಸಾರ್ವಜನಿಕವಾಗಿ ವಿವಾದವಾಗಿ ಪರಣಮಿಸಿದೆ.
ನನ್ನ ಮಗಳು ತಪ್ಪು ಮಾಡಿದ್ದರೆ ಕಾನೂನಿನ ಮೂಲಕ ಶಿಕ್ಷೆಯಾಗಲಿ. ನಾವು ಸಾವರ್ಜನಿಕ ಜೀವನದಲ್ಲಿರುವಾಗ ಸ್ಥಿಮಿತ ಕಳೆದುಕೊಳ್ಳಕೊಡದು. ಭೀಮನ ಅಮಾವಾಸ್ಯೆ ಹಿನ್ನೆಲೆ ಮಗಳು ದೇವಸ್ಥಾನಕ್ಕೆ ತನ್ನ ಮಕ್ಕಳೊಂದಿಗೆ ತೆರಳಿದ್ದಳು.
ಪೊಲೀಸರು ಕರ್ತವ್ಯದಲ್ಲಿರುವಾಗ ಸಾಕಷ್ಟು ಒತ್ತಡದಲ್ಲಿರುತ್ತಾರೆ. ಆದರೆ ನಾವು ಅಹಂಕಾರ ಪಡಬಾರದು ತಾಳ್ಮೆ ಕಳೆದುಕೊಳ್ಳಬಾರದು. ಮಗಳ ಪರವಾಗಿ ನಾನು ಕ್ಷಮೆ ಕೇಳುತ್ತಿದ್ದೇನೆ. ಕಾನೂನು ಪ್ರಕಾರ ತಪ್ಪು ಮಾಡಿದ್ದರೆ ಶಿಕ್ಷೆ ಸಿಗಲಿ. ನಾವು ಮತ್ತು ನಮ್ಮ ಕುಟುಂಬದವರೆಲ್ಲರೂ ದೈವಭಕ್ತರು, ಹೀಗೆ ಆಗಬಾರದಿತ್ತು ಎಂದಿದ್ದಾರೆ.